SearchBrowseAboutContactDonate
Page Preview
Page 92
Loading...
Download File
Download File
Page Text
________________ ಯಶೋಧರ ಚರಿತೆ ೪೧. ಯಶೋಧರನ ಸ್ತುತಿಪಾಠಕರ ಮನೆಯಂಗಳದಲ್ಲಿಯೂ ಲಕ್ಷ್ಮಿ ವಿಹರಿಸುತ್ತಾಳೆಂದರೆ ಯಶೋಧರನ ಔದಾರ್ಯದಿಂದ ಸ್ತುತಿಪಾಠಕರೂ ಐಶ್ವರ್ಯವಂತ ರಾಗಿದ್ದಾರೆಂದು ತಾತ್ಪರ್ಯ. ೮೮ ೪೨. ಯಶೋಧರನ್ನು ಕಾಮನಂತೆ ಸುಂದರ, ಅಬಲಾ ಜನರು ಕಾಮನ ಉದ್ಯಾನದಲ್ಲಿ ಬೆಳೆಯಿಸಿದ ಕಲ್ಪಲತೆಗಳು. ಯಶೋಧರನ ವಿಲಾಸ ಸಂದರ್ಭದಲ್ಲಿ ಸ್ವಭಾವತಃ ಚೆಲುವಿನ ಬಿಂಕದಿಂದ ಬಾಗಿರುವ ಹೆಂಗಸರು ಬಹಳ ಸಂತೋಷಗೊಳ್ಳುತ್ತಾರೆ. ಕಾಮನಂತೆ ಯಶೋಧರನಿದ್ದರೆ ಸ್ತ್ರೀಯರು ಅವನ ಪೋಷಣೆಯಲ್ಲಿ ವಿಲಾಸವತಿಯರಾಗಿ ಅವನ ವಿಲಾಸ ಸಂದರ್ಭದಲ್ಲಿ ಅತ್ಯಾನಂದದಿಂದ ಅವನೊಡನೆ ಕೂಡಿಕೊಳ್ಳುತ್ತಾರೆಂದು ಅಭಿಪ್ರಾಯ. ೪೩. ವೈರಿಗಳನ್ನು ಕೊಂದು ಅವರ ಹೆಂಡಿರು ಬಳೆತೊಡದಂತೆ ಮಾಡುವನೆಂದು ಇಲ್ಲಿ ಹೇಳಲಾಗಿದೆ. ಅವರು ಕಳಚಿದ ಬಳೆಗಳನ್ನು ಕೀರ್ತಿಯೆಂಬ ದಿಗ್ಗಜದ ಮರಿಯ ದಾಡೆಗೆ ತೊಡಿಸಲಾಗಿದೆ ಎಂದರೆ ಅವನ ಕೀರ್ತಿ ದಿಗಂತದವರೆಗೆ ಹಬ್ಬಿದೆ. ಆನೆಗಳ ದಾಡೆಗಳಿಗೆ ಬಳೆಗಳನ್ನು ಅಲಂಕಾರಕ್ಕಾಗಿ ತೊಡಿಸುವ ಪದ್ಧತಿ ಇಂದಿಗೂ ಇದೆ. ೪೪. ರಾಜರನ್ನೆಲ್ಲ ಸೋಲಿಸಿ ಅವರು ಯಶೋಧರನ ಆಜ್ಞೆಯನ್ನು ಶಿರಸಾ ವಹಿಸುವಂತೆ ಮಾಡಿದ್ದಾನೆಂದು ತಾತ್ಪರ್ಯ. ೪೫. ನೀರು ಎಂಬುದಕ್ಕೆ ಕಾಂತಿ ಎಂದೂ ಜಲವೆಂದೂ ಎರಡರ್ಥವಿರುವುದನ್ನು ಇಲ್ಲಿ ಸಮರ್ಪಕವಾಗಿ ಬಳಸಲಾಗಿದೆ. ಯಶೋಧರನ ದೇಹದ ನೀರು (= ಕಾಂತಿ) ಓಡಿದೆ; ಅದು ನೀರು (=ಜಲ) ಓಡಿದ (= ಒಣಗಿದ) ಕೊಳದಂತಾಗಿದೆ, ಎಂದು ಇಲ್ಲಿ ಅರ್ಥ. ೪೬. ಗೋದಾಮೆಯೆಂದರೆ ಏನೆಂದು ಸರಿಯಾಗಿ ಗೊತ್ತಿಲ್ಲ. ನವಿಲಿಗೆ ಆಗದ ಯಾವುದೋ ಪ್ರಾಣಿ. ಗೋಧಿಯ ಬಣ್ಣದ ಹಾವೇನಾದರೂ ಇರಬಹುದೋ ಏನೊ! ೪೭. ಹಂಸಗಳು ಮಳೆಯ ಬಿರುಸನ್ನು ತಡೆಯದೆ ಮಾನಸಸರೋವರಕ್ಕೆ ಹೋಗುತ್ತವೆಯಂತೆ. ಹಾಗೆಯೇ ವಿರಹಿಗಳಿಗೆ ಹೂಬಿಟ್ಟ ಬಳ್ಳಿಯನ್ನು ಕಂಡರೆ ಸಂತಾಪ ಹೆಚ್ಚಾಗುವುದಂತೆ. ೪೮. ಅಮಂಗಲವಿನಾಶ ಎಂಬುದಕ್ಕೆ ಅಮಂಗಲದ ಪರಿಹಾರವೆಂಬ ಒಂದು ಅರ್ಥವಾದರೆ ಅಮಂಗಲದಿಂದಾಗಿ ಬಂದೊದಗುವ ವಿನಾಶ ಎಂಬುದು ಇನ್ನೊಂದು ಅರ್ಥ. ಯಶೋಧರನಿಗೆ ಈ ಎರಡನೆಯ ಅರ್ಥವಾಯಿತು. ೪೯. ಆಸ್ರವ ಎಂದರೆ ಶುಭಾಶುಭಕರ್ಮಗಳ ಆಗಮನ ಎಂದರ್ಥ. ೫೦. ಭೌಮಾಷ್ಟಮಿ ಎಂದರೆ ಮಂಗಳವಾರದಿಂದ ಕೂಡಿದ ಅಷ್ಟಮಿ ಎಂಬರ್ಥವಾಗಬಹುದು.
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy