________________
c
ಟಿಪ್ಪಣಿಗಳು ೫೧. ಕಾಡಿನ ಜಿ೦ಕೆಗೆ ಬಲೆ ಬೀಸಿ ಬಾಣವನ್ನು ಬಿಟ್ಟು ಅದನ್ನು ಕೆಡಹಾಕುವಂತಾಯಿತೆಂದು ಇಲ್ಲಿ ಹೇಳಲಾಗಿದೆ. ಪಾಪಿಗಳ ವಂಚನೆಯೇ ಕಣ್ಣುಕಾಣದ ಕಾಡು; ಆತ್ಮವೇ ಸಾಧುವಾದ ಜಿಂಕೆ, ಯಶೋಧರನ ಆತ್ಮತಾಯಿಯ ಮಾತಿನ ಬಲೆಗೆ ಬೀಳಬೇಕಾಯಿತು. ಅವನು ಕೈಕೊಂಡ ಹಿಂಸೆ ಬಾಣವಾಯಿತು, ಎಂದು ರೂಪಿಸಲಾಗಿದೆ.
೫೨. ಜೀವಶ್ರಾದ್ಧವೆಂದರೆ ಜೀವಂತವಾದ ಪ್ರಾಣಿಯನ್ನೇ ಅಡುಗೆ ಮಾಡಿ ಅದನ್ನು ಬಡಿಸಿ ಶ್ರಾದ್ಧಮಾಡುವುದು ಎಂಬರ್ಥವಿರಬಹುದು.
ಇದೇ ಪ್ರಕರಣದಲ್ಲಿ ಮೂಲದಲ್ಲಿ 'ಉಳೆದ ಕಡೆ ಜೀವಮೇಯುತ್ತಿಲೆಯುತ್ತಿದೆ' ಎಂದಿರುವುದಕ್ಕೆ 'ಯಶೋಧರನ ಜೀವವು ಬೇರೊಂದು ಕಡೆ ಏರುತ್ತಾ ಇಳಿಯುತ್ತಾ ಇರಲು...' ಎಂದು ಅರ್ಥ ಹೇಳುತ್ತಾರೆ. ಆದರೆ ಯಶೋಧರನ ಜೀವವೇ ಇಲ್ಲಿ ಮೀನಿನ ರೂಪದಲ್ಲಿ ಒದ್ದಾಡುವುರಿಂದ ಹಾಗೆ ಹೇಳುವುದು ಉಚಿತವೆನಿಸದೆಂದು ತೋರುತ್ತದೆ.
೫೩. ಕಷ್ಟಗಳಿಗೆ ಕೋಡು ಮೂಡುವುದೆಂದರೆ ಕಷ್ಟಗಳು ಬೆಳೆದು ದೊಡ್ಡದಾಗುವುದು ಎಂದರ್ಥ.
೫೪. ನೀರು ಕುಡಿಯಲು ಬಂದುದು ಜಾಯಿಲಮರಸನ ಪಸಾಯಿತಂ' ಎಂದು ಮೂಲದಲ್ಲಿದೆ. ಇದಕ್ಕೆ ರಾಜನ ಜಾತ್ಯಶ್ವವು ನೀರು ಕುಡಿಯಲು ಬಂದುದು ಎಂದು ಅರ್ಥ ಹೇಳುತ್ತಾರೆ. ಆದರೆ ಜಾಯಿಲ ಎಂಬುದಕ್ಕೆ ಜಾತ್ಯತ್ವ ಎಂಬರ್ಥವಿರುವುದೆ ?
ಮುಂದೆ 'ಅಶ್ವಮಹಿಷನ್ಯಾಯಂ ನಿಲೆ' ಎಂಬ ಮಾತು ಬರುತ್ತದೆ. ಇದಕ್ಕೆ 'ಕುದುರೆಗೂ ಕೋಣಕ್ಕೂ ಹುಟ್ಟುಹಗೆ ಎಂಬ ನ್ಯಾಯವುಳಿಯುವಂತೆ' ಎಂದು ಅರ್ಥ ಹೇಳಬೇಕಾಗಿದೆ. ಇಲ್ಲಿ ಒಂದು ಪ್ರಾಣಿ ಕೋಣವೇ ಆದುದರಿಂದ ಇನ್ನೊಂದು ಅಶ್ವವೇ ಆಗಿರಬೇಕೆಂಬ ಅನುಮಾನದಿಂದ ಹಾಗೆ ಅರ್ಥಮಾಡಿದುದಿರಬಹುದು. ಆದರೆ ಯಶೋಮತಿ ಬೇಟೆಗಾಗಿ ಐನೂರು ನಾಯಿಗಳನ್ನು ಸಾಕಿಟ್ಟುಕೊಂಡಿದ್ದನೆಂದು ಮುಂದೆ ಬರುವುದರಿಂದ ಇಲ್ಲಿ ಅರಸನ ಮೆಚ್ಚಿನ ನಾಯಿ ನೀರು ಕುಡಿಯಲು ಹೋಯಿತೆಂದೂ ಆಗ ಅಶ್ವಮಹಿಷ ನ್ಯಾಯದಂತೆ ಕೋಣವು ಅದನ್ನು ಕೊಂದಿತೆಂದೂ ಹೇಳಿದರೆ ದೋಷವೇನು ?
೫೫. ಕೇಸರವೆಂದರೆ ಪುಷ್ಪಪರಾಗ, ಹೂವಿನ ಮಧ್ಯದ ತಂತು, ಹೊಂಬಣ್ಣ ಎಂಬರ್ಥವಾಗುತ್ತದೆ. ಇಲ್ಲಿ ಕೋಳಿ ಹೊಂಬಣ್ಣದಿಂದ ಶೋಭಿಸಿತು ಎನ್ನುವುದು ವಿಹಿತವೆ? ಸಣ್ಣ ಗರಿಗಳು ಹೂವಿನ ತಂತುಗಳಂತಿದ್ದುವು ಎಂದರೂ ತಪ್ಪಲ್ಲ. ಕೂರ್ಪು ಎಂದರೆ ಪರಾಕ್ರಮ, ತೀಕ್ಷ ತೆ ಎಂಬರ್ಥಗಳಿವೆ. ತ್ಯಾಗಿ (ದಾನವನ್ನು ಕೊಟ್ಟು ಶೋಭಿಸುತ್ತಾನೆ; ಹುಂಜಕ್ಕೆ ಕೊಟ್ಟು (ತಲೆಯ ಜುಟ್ಟು) ಶೋಭಿಸುತ್ತದೆ. ರಾಧೆ ಒಂದು ಪಕ್ಕಕ್ಕೆ ಬಾಗಿದ ಮುಡಿ ಕಟ್ಟಿದಂತೆ ಕೋಳಿಯ ಜುಟ್ಟು ಒಂದು ಪಕ್ಕಕ್ಕೆ ಬಾಗಿದೆ. ಚಂದ್ರನು ಶುಕ್ಲಪಕ್ಷ ಮತ್ತು ಕೃಷ್ಣಪಕ್ಷಗಳಲ್ಲಿ ರಂಜಿಸಿದಂತೆ ಕೋಳಿ ಎರಡು ಪಕ್ಷ ಎಂದರೆ ರೆಕ್ಕೆಗಳಿಂದ ರಂಜಿಸುತ್ತದೆ.