SearchBrowseAboutContactDonate
Page Preview
Page 91
Loading...
Download File
Download File
Page Text
________________ ೮೬ ಟಿಪ್ಪಣಿಗಳು ೩೫. ಇಲ್ಲೆಲ್ಲ ಸಂಗೀತ ಶಾಸ್ತ್ರಕ್ಕೆ ಸಂಬಂಧಪಟ್ಟ ಪರಿಭಾಷೆಗಳಿವೆ. ಝಂಪೆ ಎಂಬುದು (ನೃತ್ಯ ಪ್ರಬಂಧದಲ್ಲಿ) ಕುಣಿತಕ್ಕೆ ಹೆಚ್ಚಾಗಿ ಉಪಯೋಗಿಸುವ ತಾಳ; ಐದು ಮಾತ್ರೆಗಳುಳ್ಳದು. (2 + 3 x 2 = 10; 2+2+3+ 3 = 10; 2+3+3+2=; 3+2x2= 10 ಮಾತ್ರೆಗಳು) ಠಾಯ ಎಂದರೆ ಪ್ರಬಂಧ ವಿಶೇಷ. ಚಾಳೆಯ ಎಂದರೆ ಒಂದು ಕುಣಿತದ ಗತಿ. ಮಾಳವ (ಶ್ರೀ) ಸಿರಿ ಎಂಬುದು ದೇಶೀರಾಗ; ಖರಹರಪ್ರಿಯ ಜನ್ಯವೆಂದು ಮಾರ್ಗ ಸಂಗೀತದಲ್ಲಿ ನಿರ್ದೆಶಿತವಾಗಿದೆ. ಲಾಲಿತ್ಯ ಪೂರ್ಣವಾದ ಹಾಸ್ಯ ಶೃಂಗಾರ ಮುಂತಾದ ಭಾವಗಳನ್ನು ಪ್ರಕಟಿಸುವುದರಿಂದ ಇದಕ್ಕೆ 'ರಕ್ತಿರಾಗ' ಎಂದು ಹೆಸರು. ಗ್ರಹ (ಗ್ರಾಹ) ಎಂದರೆ ತಾಳದಲ್ಲಿ ಗೀತ (ಪ್ರಬಂಧ) ಆರಂಭವಾಗುವ ವಿವಿಧ ರೀತಿಗಳು. ೩೬. ತಾಳಕಾಯ ಎಂಬುದಕ್ಕೆ 'ತಾಳೆಯ ಮರದ ಕಾಯಿಯ' ಎಂದು ಅರ್ಥ ಮಾಡಿದರೆ ಮೋಳಿಗೆ ಎಂಬುದಕ್ಕೆ ಕಾಯಿಗಳುಳ್ಳ ಗೊನೆ' ಎಂದು ಅರ್ಥ ಹೇಳಬಹುದು. ಆಗ ತಾಳೆಯ ಕಾಯಿಯ ಗೊನೆಯಂತೆ ಅವನು ಮುರುಡನಾಗಿದ್ದಾನೆ, ಎಂದು ಹೇಳಬೇಕು. ೩೭. ಕಣ್ಣಿಗೆ ಎದುರಾಗಿ ಮೊದಲಾಗಿ ಕಾಣಿಸಬಹುದಾದುದು ಮೂಗಿನತುದಿ. ಅಲ್ಲಿಯೇ ಕಾಮಿನಿಯರು ಪರಪುರುಷನೊಡನೆ ಕಾಮಕೇಳಿಯನ್ನು ಆಡುತ್ತಾರೆ. ಅಧಿಕಾರದ ಹಿರಿಮೆ, ರೂಪದ ಮೇಲೆ ಹಾಗೂ ಸೌಭಾಗ್ಯದ ಮಹತ್ವಗಳು ಕಾಮಿನಿಯರನ್ನು ತಮ್ಮ ವಶದಲ್ಲಿಟ್ಟುಕೊಳ್ಳುವ ಸಾಧನಗಳೆಂದು ದುರಹಂಕಾರ ಪಡುವವರೂ ಅವರಿಂದ ವಂಚಿತರಾಗುತ್ತಾರೆ ಎಂದು ತಾತ್ಪರ್ಯ. ೩೮. ಇಲ್ಲಿ ಬರುವ ಮಾತುಗಳನ್ನು ಯಶೋಧರನು ಆಡಿದನು ಎಂದು ಹೇಳುವವರು ಇದ್ದಾರೆ. ಆದರೆ 'ಮಾರಿಗೇ ತೃಪ್ತಿ' ಎಂಬಂತಹ ಮಾತು ಅವನಿಂದ ಬರುವುದಕ್ಕಿಂತ ಮಾರಿದೇವತೆಯ ಆರಾಧಕನಾದ ಮಾರಿದತ್ತನ ಬಾಯಿಂದ ಬರುವುದು ಒಳ್ಳೆಯದೆಂದು ತೋರುತ್ತದೆ. ೩೯. ತುಂಬಿ ಎಂಬುದು ಕಾಮುಕತೆಗೆ ಸಂಕೇತವಾಗಿದೆ. ಅಮೃತಮತಿ ಮಧುಕರಿಯಂತೆ ಕಾಮವೃತ್ತಿಯಲ್ಲಿದ್ದಾಗ, ಅವಳಿಗೆ ವಿರುದ್ದವಾಗಿ ಕಾಣಿಸಿದವನು ಯಶೋಧರ. ಅವನು ಸಂಪಗೆಯಂತೆ ಸುಂದರವಾಗಿದ್ದರೂ ಅವಳಿಗೆ ವಿಷಪ್ರಾಯನಾದನು ಎಂಬುದು ಭಾವ. ೪೦. ಯಶೋಧರನು ಧರಿಸಿಕೊಂಡಿರುವ ಮುತ್ತಿನ ಹಾರ ಅವನ ವಿಶಾಲವಾದ ಎದೆಯಲ್ಲಿ ಶೋಭಿಸುವುದೆಂದೂ, ಆ ಹಾರದಲ್ಲಿ ಲಕ್ಷ್ಮೀದೇವಿ ಉಯ್ಯಾಲೆಯಾಡುವಳೆಂದೂ ಹಾಗೆ ಉಯ್ಯಾಲೆಯಾಡಲು ಅನುಕೂಲವಾದ ವಸಂತವೇ ಆತನ ಉರಸ್ಥಳವೆಂದೂ ಇಲ್ಲಿ ಹೇಳಲಾಗಿದೆ. ಎಂದರೆ ಯಶೋಧರನ ಎದೆಯ ಮೇಲೆ ಸದಾ ಲಕ್ಷ್ಮೀಕಾಂತಿ, (ರಾಜ್ಯಲಕ್ಷ್ಮಿಅಥವಾ ಐಶ್ವರ್ಯಲಕ್ಷ್ಮಿ ಶೋಭಿಸುವಳೆಂದು ಭಾವ.
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy