________________
೮೫.
ಟಿಪ್ಪಣಿಗಳು ೨೧. ಪರೀಷಹ-ತಾನಾಗಿಯೇ ಬರುವ ಇಪ್ಪತ್ತೆರಡು ಬಗೆಯ ಕ್ಲಶಗಳು. ಅವುಗಳು ಈ ಕೆಳಗೆ ಕೊಟ್ಟವುಗಳು: ಶೀತ, ಉಷ್ಣ, ಕ್ಷುತ್, ಪಿಪಾಸೆ, ಅರತಿ, ಕ್ರಿಮಿಬಾಧೆ, ನಗ್ನತ್ವ, ಚರ್ಯೆ, ನಿಷಧ್ಯಾ, ಸ್ತ್ರೀ, ಶಯ್ಯಾರೋಗ, ಅಲಾಭ, ಯಾಜ್ಞಾ, ಆಕ್ರೋಶ, ವಧೆ, ತೃಣ, ಸ್ಪರ್ಶ, ಮಲ, ಪ್ರಜ್ಞೆ, ತಿರಸ್ಕಾರ, ಪುರಸ್ಕಾರ, ಅಜ್ಞಾನ,
* ೨೨. ಕೋಡು ಬರುವುದು ಪ್ರಾಣಿಗಳು ಬೆಳೆದಾಗ, ಹಾಗೆಯೇ ಕೋಡು ಬರು ಎಂಬುದಕ್ಕೆ ಮಹತ್ವವುಂಟಾಗು, ಎಂಬುದು ಭಾವಾರ್ಥ.
೨೩. ಹೊಲದಲ್ಲಿ ಆಡಿದಂತೆ ಒಮ್ಮೆ ಸಂತೋಷವು ಕಾಣುವುದು, ಒಮ್ಮೊಮ್ಮೆ ಮದ್ದು ಸೇವಿಸಿದಂತೆ ಕಹಿಯಾಗುವುದೂ ಪ್ರತ್ಯಕ್ಷವಾಗಿದೆಯೆಂದೂ ಅಭಿಪ್ರಾಯ.
೨೪. ಮೂರಿ ಎಂಬುದಕ್ಕೆ ಗೂಳಿ, ಕೋಣ, ಬಾಯಿ ಎಂದೂ, ಕತ್ತಿಯೆಂದೂ ಅರ್ಥಮಾಡುತ್ತಾರೆ. ಅದಕ್ಕೆ ಉತ್ಪಾತ ಎಂಬರ್ಥವೂ ಆಗಬಹುದೆಂದು ಹೇಳುವವರೂ ಇದ್ದಾರೆ.
- ೨೫. ಭರತಖಂಡದ ಮಧ್ಯರೇಖೆ ನರ್ಮದಾನದಿ. ಈ ನದಿಯ ಉತ್ತರಕ್ಕೆ ಆರ್ಯಾವರ್ತವಿದ್ದರೆ, ದಕ್ಷಿಣಕ್ಕೆ ದಕ್ಷಿಣಾಪಥವಿದೆ. ಧರ್ಮವು ಆರ್ಯಾವರ್ತದಲ್ಲಿದ್ದಂತೆ ದಕ್ಷಿಣಾಪಥದಲ್ಲಿಲ್ಲವೆಂಬ ಅಭಿಪ್ರಾಯವು ಹಿಂದೆ ಆರ್ಯಾವರ್ತದವರಲ್ಲಿದ್ದಿರಬಹುದು. ಅಯೋಧ್ಯೆಯಲ್ಲಿ ಈ ಘಟನೆ ನಡೆಯುವ ಸಂದರ್ಭದಲ್ಲಿ ಈ ಮಾತು ಬರುವುದರಿಂದ ಧರ್ಮಾಸಕ್ತಿ ಮಾರಿದತ್ತನಿಂದ ದೂರವಾಗಿದೆಯೆಂದು ತಾತ್ಪರ್ಯ. ಅಯೋಧ್ಯೆಯಿಂದ ನರ್ಮದೆ ಬಹಳ ದೂರದಲ್ಲಿರವುದರಿಂದ ಅರಸನು ಈ ರೀತಿ ಧರ್ಮದೂರನಾಗಿದ್ದಾನೆಂದು ಹೇಳುವುದೂ ಇರಬಹುದು.
೨೬. ಚಂದ್ರೋದಯವಾಗುವಾಗ ಕತ್ತಲೆಯೂ ತೊಲಗುತ್ತದೆ; ತಾವರೆಗಳಿಂದ ಭ್ರಮರಗಳೂ ತೋಲಗುತ್ತವೆ. ಏಕೆಂದರೆ ಅವು ಆಗ ಮುಚ್ಚಿಕೊಳ್ಳುತ್ತವೆ. ಇಲ್ಲಿ ರಾಜನಿಗೆ ಅಭಯರುಚಿಯ ಮಾತು ಕೇಳುತ್ತಿದ್ದಂತೆ ಪಾಪ ಪರಿಹಾರವಾಗಿ, ಅವನ ಕೈಗಳು ತಾವಾಗಿಯೇ ಮುಗಿದುಕೊಂಡುವು. ಅವನು ಅಭಯರುಚಿಗೆ ಕೈಮುಗಿದನು ಎಂದು ಭಾವ.
೨೭. ಕಾಲಲಬಿ-ಪಕ್ವತೆಯನ್ನು ಪಡೆಯುವ ಕಾಲ; ಒಳ್ಳೆಯ ಕಾಲ ಬಂದೊದಗುವುದು. ಆಗ ಸ್ವಾಭಾವಿಕವಾಗಿ ಕೆಡುಕುಂಟಾಗದು.
೨೮. ಭವ್ಯರು ಎಂದರೆ ರತ್ನತ್ರಯ (ಸಮ್ಯಗ್ನಾನ, ಸಮ್ಯಗ್ದರ್ಶನ ಮತ್ತು ಸಮ್ಯಕ್ಷಾರಿತ್ರ ) ದಿಂದ ಪರಿಣತನಾಗುವ ಜೀವಿ. ಇಲ್ಲಿ ಮಾರಿದತ್ತನು ಭವ್ಯ, ಅವನೇ ಪ್ರಭು ಎಂದರೆ ಅರಸನು. ಅವನು ಕೂಡಿಸಿದ ಸಭೆಯಾದುದರಿಂದ ಅದು ಭವ್ಯ ಪ್ರಭು ಸಭೆ. ಇಲ್ಲಿ ಇನ್ನೊಂದು ರೀತಿಯಲ್ಲೂ ಅರ್ಥ ಹೇಳುತ್ತಾರೆ; ಭವ್ಯರಿಗೆಲ್ಲ ಅರಸನಂತೆ ಶ್ರೇಷ್ಠನಾದವನು ಮಾರಿದತ್ತ. ಅವನ ಸಭೆಯೇ ಭವ್ಯಪ್ರಭುಸಭೆ.