________________
ಟಿಪ್ಪಣಿಗಳು
೬. ಎರೆಯಂಗನಿಗೂ ಏಚಲದೇವಿಗೂ ಮಗನಾದ ಕಾರಣವೇ ವಿಷ್ಣು ನೃಪಾಲನು ಉದಾರನೂ, ವೀರನೂ, ರಕ್ಷಕನೂ ಆಗಿದ್ದನೆಂದು ತಾತ್ಪರ್ಯ. ಒಳ್ಳೆಯ ತಾಯಿ ತಂದೆಗಳಿಂದ ಮಕ್ಕಳಿಗೂ ಒಳ್ಳೆಯ ಗುಣಗಳು ಬರುತ್ತವೆ ಎಂದು ಸೂಚಿತವಾಗಿದೆ. ೭. ಪ್ರತಾಪ ಎಂದರೆ ಬಹಳ ಉರಿ. ಪ್ರತಾಪಚಕ್ರೇಶ್ವರ ಎಂದರೆ ಸೂರ್ಯ.
೮೩
೮. ಮೂರುವರೆ ರಾಯರು- ನಾಲ್ಕೂ ದಿಕ್ಕುಗಳಲ್ಲಿ ಇರುವ ಪ್ರಮುಖ ರಾಜರು ನಾಲ್ವರು. ಒಂದುದಿಕ್ಕಿನಲ್ಲಿ ಬಲ್ಲಾಳನೇ ಇದ್ದಾನೆ. ಉಳಿದ ಮೂರು ದಿಕ್ಕುಗಳಲ್ಲಿ ಮೂವರು ರಾಜರಿದ್ದಾರೆ. ಇವರಲ್ಲದೆ ಅರೆ ಎಂದರೆ ಕೆಲವು (ಅರೆ ಎಡೆ ಹಸ್ತಿ ಶಿಕ್ಷಣ ವಿಚಕ್ಷಣ ಎಂಬಲ್ಲಿ ಬರುವ ಅರೆ ಎಂಬುದಕ್ಕೆ ಕೆಲವು ಎಂಬುದೇ ಅರ್ಥ) ರಾಜರು ಬೇರೆ ಇದ್ದಾರೆ. ಇವರು ಹೆಸರಿಗೆ ಮಾತ್ರ ರಾಜರು.
೯. ಶ್ರೇಷ್ಠ ಕವಿಗಳಲ್ಲಿ ಪರಮೇಶ್ವರನಂತಿದ್ದಾನೆ. ಎಷ್ಟು ಮಂದಿ ಕಲಾನಿಪುಣರು ತಮ್ಮ ನೈಪುಣ್ಯವನ್ನು ತೋರಿಸಿದರೂ, ಜನ್ನನು ಬೆರಳೆತ್ತಿ ನಿಂತು ಅವರನ್ನು ಮೀರಿಸಬಲ್ಲವನಾಗಿದ್ದನೆಂದು ಭಾವ.
೧೦. ಯಾದವ ರಾಜಚ್ಛತ್ರ-ಯಾದವರಾಜರ ಛತ್ರದ ಕೆಳಗೆ ಇರುವವನು; ಅವರ ಆಶ್ರಿತನು.
೧೧. ಸುಮನೋಬಾಣನೆಂದರೆ ಕಾಮ; ಭಾಳಲೋಚನನೆಂದರೆ ಶಿವ. ಶಿವನು ಕಾಮನನ್ನು ಸುಟ್ಟನೆಂದು ಪೌರಾಣಿಕ ಕಥೆ. ಆದರೆ ಇಲ್ಲಿ ಸುಮನೋಬಾಣನಿಗೆ ಭಾಳಲೋಚನನು ಮಗನಾಗಿರುವುದು ವಾಣೀ ಪಾರ್ವತಿಯರ ಪ್ರೀತಿಯ ಪ್ರಭಾವದಿಂದ ಎಂದು ತಾತ್ಪರ್ಯ.
೧೨. ಬುಧ ಎಂಬುದಕ್ಕೆ ವಿದ್ವಾಂಸನೆಂದೂ ದೇವನೆಂದೂ ಅರ್ಥವಿದೆ. ಅಮೃತದ ಕಡಲನ್ನು ಕಡೆದಾಗ ಅದರಿಂದ ಕಲ್ಪವೃಕ್ಷವೇ ಮುಂತಾದ ಸುವಸ್ತುಗಳು ಮೇಲಕ್ಕೊಗೆದುವು. ದೇವತೆಗಳು ಅವುಗಳನ್ನು ಪಡೆದು ನಿರಂತರ ಸುಖವನ್ನು ಪಡೆಯುತ್ತಾರೆ. ಹಾಗೆಯೇ ಈ ಕಥೆ ಇತಿಹಾಸವೆಂಬ ಕಡಲಲ್ಲಿ ಹುಟ್ಟಿದೆ; ಕಲ್ಪವೃಕ್ಷದಂತಿದೆ; ರಸವತ್ತಾಗಿದೆ. ಇದರಿಂದ ಬಲ್ಲವರು ಸುಖವನ್ನು ಪಡೆಯುತ್ತಾರೆ.
೧೩. ಚಾಂದ್ರಾಯಣ-ಇದು ಒಂದು ವ್ರತದ ಹೆಸರು. ಚಂದ್ರನ ವೃದ್ಧಿಕ್ಷಯಗಳ ಪ್ರಕಾರ ಆಹಾರ ಸೇವನೆಯನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುವುದು ಇದರಲ್ಲಿರುವ ಕ್ರಮ.
೧೪. ಅರುಣೋದಯವಾಗುವಾಗ ಹಬ್ಬುವ ಹೊಂಬಣ್ಣದಂತೆ ಜಿನಾಲಯದ ಮಾಣಿಕ್ಯದ ಕಲಶಗಳು ರಾತ್ರಿಯಲ್ಲೂ ಹೊಂಬಣ್ಣವನ್ನು ಹಬ್ಬಿಸಿ ರಾತ್ರಿಯನ್ನು ಹಗಲಿಗಿಂತಲೂ ಮಿಗಿಲಾಗಿ ಬೆಳಗಿಸುತ್ತವೆ. ಹಾಗೆಯೇ ಅಲ್ಲಿನ ಉನ್ನತವಾದ ಧ್ವಜ (ಕೇತು)ಗಳು ಬಹಳ ಮೇಲಕ್ಕೇರಿ ಕೇತುಗ್ರಹದ ಒಡನಾಟವನ್ನು ಪಡೆದು ಸೂರ್ಯಮಂಡಲವನ್ನು ಅಪಹಾಸ್ಯ ಮಾಡುತ್ತವೆ. ಸೂರ್ಯನನ್ನು ಕೇತು ನುಂಗುವುದೆಂದು