________________
ಯಶೋಧರ ಚರಿತೆ ಪರಮ ಜಿನೇಂದ್ರಶಾಸನವಸಂತದೊಳೀ ಕೃತಿಕೋಕಿಲಸ್ವನಂ ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಲೆ ಸಂತತಂ ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೋಲ್ ಸಿರಿ ನೆರೆದಿರ್ಕೆ ನಾಲ್ವಿಭು ಜನಾರ್ದನದೇವನ ವಕ್ತಪದದೊಳ್
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂ
ಜನ್ನ ಕವಿ ಜನಕ್ಕೆ ಮಾಡಿದ ಯಶೋಧರ ಚರಿತಾವತಾರಂ
ಸಂಪೂರ್ಣ೦
ಮೆರೆದನು. ೮೭. ಶ್ರೇಷ್ಠನಾದ ಜಿನೇಂದ್ರನ ಶಾಸನ (ಧರ್ಮ)ವೆಂಬ ಸಂವತ್ಸರದಲ್ಲಿ ಈ ಕಾವ್ಯವೆಂಬ ಕೋಗಿಲೆಯ ಧ್ವನಿ ಪಸರಿಸಲಿ ! ಅಸಹಾಯ ಶೂರನ (ಬಲ್ಲಾಳನ) ಬಾಹುವಿಗೆ ಜಯವೊದಗಲಿ ! ನಾಡೊಡೆಯನಾದ ಜನಾರ್ದನ ದೇವ (ಜನನ ಮುಖ ಕಮಲದಲ್ಲಿ ಯಾವಾಗಲೂ ಸರಸ್ವತಿಯು ಪರಿಮಳದಂತೆ ನೆಲಸಿರಲಿ ! ವಿಕಾಸದ ಚೆಲುವಿನಂತೆ ಲಕ್ಷ್ಮಿ ಸೇರಿಕೊಂಡಿರಲಿ !