________________
ನಾಲ್ಕನೆಯ ಅವತಾರ
ತಾರಾತಾರ ಧರಾಧರ ತಾರಾ ದರತಾರಹಾರ ನೀಹಾರ ಪಯಃ ಪೂರ ಹರಹಸನ ಶಾರದ ನೀರದ ನಿರ್ಮಲಯಶೋಧರಂ ಕವಿತಿಲಕಂ
೮೩
ಕ್ಷಯಮಂ ಪಿಟ್ಟಿನ ಕೋಟಿಗಿತ್ತು ನವಿಲಂ ನಾಯಾದರೆಯುಂ ವಿಷಾಹಿಯುಮಾದರ್ ಪಗೆ ಸುತ್ತೆ ಮೀನ್ ಮೊಸಳೆಯಾದರ್ ಪೊಂತುಮಾಡಾದರಲಿಯೆ ಪೋಂತುಂ ಪುಲುಗೋಣರಾದರೆರಡುಂ ಬಲ್ಗೊಲೆಯಾದ ತಪಸ್ವಿಯ ಮಾತಿಂದಮಳಾದರ ಮಗನುಂ ತಾಯುಂ ಯಶೌಘಪ್ರಿಯರ್ ೮೪
ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾರಭಸಮತಿಗೆ ಸಯ್ತಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ
೮೫
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತೃರಮುತ್ತರೋತ್ತರಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂರ್ಣಾ ಗುರುವಾಗೆ ಭೂತಳದೊಳೀ ಕೃತಿ ಪತ್ತುದು ಸುಪ್ರತಿಷ್ಠೆಯಂ ಚಾಗದ ಭೋಗದಗ್ಗಳಿಕೆಯಂ ಮೆಚಿದಂ ಕವಿಭಾಳಲೋಚನಂ
೮೬
ಸುಖವಾಗಿ ರಾಜ್ಯಭಾರ ಮಾಡುತ್ತಿದ್ದನು. ೮೩. ಬೆಳ್ಳಿ, ಬೆಳ್ಳಿಯ ಬೆಟ್ಟ (ಕೈಲಾಸ), ನಕ್ಷತ್ರ (ಚಂದ್ರ), ಶಂಖ, ಮುತ್ತಿನಹಾರ, ಮಂಜು, ಹಾಲಹೊಳೆ, ಹರನ ನಗು, ಶರತ್ಕಾಲದ ಮೋಡ ಇವುಗಳಂತೆ ನಿರ್ಮಲ ಯಶೋಧರನು ಕವಿತಿಲಕನು೬೦, ೮೪. ಯಶೌಘನಿಗೆ ಮೆಚ್ಚಿನವರಾದ ಯಶೋಧರನೂ ಚಂದ್ರಮತಿಯೂ ಹಿಟ್ಟಿನ ಕೋಳಿಯನ್ನು ಕೊಂದು ನವಿಲೂ ನಾಯಿಯೂ ಅದರು. ಅನಂತರ ಮುಳ್ಳುಹಂದಿಯೂ ಸರ್ಪವೂ ಆದರು. ಹಗೆ ಸುತ್ತಿ ಸತ್ತು ಮೀನು ಮೊಸಳೆಗಳಾಗಿ, ಬಳಿಕ ಹೋತ ಆಡುಗಳಾಗಿ, ಆಮೇಲೆ ಹೋತ ಕೋಣಗಳಾಗಿ ಜನ್ಯಪಡೆದರು. ಮುಂದೆ ಎರಡು ಕೋಳಿಗಳಾಗಿ ಹುಟ್ಟಿದರು. ತಪಸ್ವಿಗಳಾದ ಸುದತ್ತಾಚಾರ್ಯರ ಮಾತನ್ನು ಕೇಳಿದುದರಿಂದ ಈ ಮಗನೂ ತಾಯಿಯೂ ಅವಳಿ ಮಕ್ಕಳಾಗಿ ಜನ್ಮವೆತ್ತಿದರು. ೮೫. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿ ಕುಮಾರನು ಪುಣ್ಯದ ವಿಷಯವನ್ನು ಹೇಳಿ ಅವನನ್ನು ಧರ್ಮದ ದಾರಿಗೆ ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ ಭವ್ಯಪ್ರಭು ಸಭೆಗೆ ಮಂಗಲಕರವಾದ ಸಂಪದ್ವಿಲಾಸವು ಶೋಭಿಸುತ್ತದೆ. ೮೬. ಶ್ರೀ ಗಿರಿದುರ್ಗಮಲ್ಲ ರಾಜನ ರಾಜ್ಯದ ವತ್ಸರವು ಉತ್ತರೋತ್ತರ ಉತ್ಕರ್ಷಕ್ಕಾಗಿ ಇರುವಾಗ ಶುಕ್ಲ ಸಂವತ್ಸರದ ಆಶ್ವೇಜ ಕೃಷ್ಣ ಪಂಚಮಿ ಪುಷ್ಯನಕ್ಷತ್ರದ ಗುರುವಾರ ಈ ಕೃತಿ ಒಳ್ಳೆಯ ಪ್ರತಿಷ್ಠೆಯನ್ನು ಪಡೆಯಿತು. ಈ ಲೋಕದಲ್ಲಿ ತ್ಯಾಗದ ಭೋಗದ ಅಗ್ಗಳಿಕೆಯನ್ನು ಕವಿಭಾಳಲೋಚನನು