SearchBrowseAboutContactDonate
Page Preview
Page 82
Loading...
Download File
Download File
Page Text
________________ ೭೮ ಯಶೋಧರ ಚರಿತೆ ಅಮಳಳ್ ಬಳೆಕ ಸುದತ್ತರ ಸಮುದಾಯದೊಳಾಗಮೋಕ್ತಿಯಿಂ ನಡೆದು ತಪಂ ತಮಗಮರೆ ನೋನ್ನು ಮುಡಿಪಿದ ಸಮಯದೊಳೀಶಾನಕಲ್ಪದೊಳ್ ಜನಿಯಿಸಿದರ್ ಮತ್ತಂ ಧರ್ಮವಿಹಾರನಿಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾದುಮಗತಿಯಂ ಕೇಳು ಸುದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ ಜೀವದಯೆ ಎಂಬುದೆಮ್ಮಯ ಮಾವನ ಹೆಸರಿರ್ದ ನಾಡೋಳಿರದಾತಂಗಂ ದೇವಗತಿಯಾಯ್ತು ಸೋದರರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ ಎಂದು ಮನಸಂದು ಜಿನಮತ ನಂದನದೊಳ್ ದಾನಲತೆ ದಯಾರಸದೆ ಜಗಂ ಪಂದರೆನೆ ಪರ್ವಿ ಪೊಸಜಸದಿಂದಂ ಮರಲ್ಲಿರೆ ಯಶೋಧರಂ ಬೆಳೆಯಿಸಿದಂ ಸಜ್ಜನ ಚೂಡಾಮಣಿ ತಮಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾಗುಜಳಿಕೆವಡೆದ ಪೆರ್ಮೆಯೊ ಭುಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ ೭೮. ಅನಂತರ ಅಭಯರುಚಿ ಅಭಯಮತಿಗಳು ಸುದತ್ತರ ಶಿಷ್ಯ ಸಮುದಾಯದಲ್ಲಿದ್ದರು. ಅಲ್ಲಿ ಶಾಸ್ತ್ರವಚನದಂತೆ ನಡೆದರು. ಇಬ್ಬರೂ ತಪೋಮಗ್ನ ರಾಗಿ ವ್ರತಗಳನ್ನಾಚರಿಸಿ ದೇಹಾವಸಾನವಾದಾಗ ಈಶಾನಕಲ್ಪದಲ್ಲಿ ಹುಟ್ಟಿದರು. ೭೯. ಮತ್ತೊಮ್ಮೆ ಸುದತ್ತಾಚಾರ್ಯರು ಧರ್ಮವಿಹಾರಕ್ಕಾಗಿ ಅಲ್ಲಿಗೆ ಬಂದಿದ್ದರು. ಆಗ ಯಶೋಧರನು ತಮ್ಮವರಿಗೊದಗಿದ ಉತ್ತಮಗತಿಯನ್ನು ಕೇಳಿ ತಿಳಿದನು; ಗುರುಗಳ ಪಾದಕಮಲವನ್ನು ಪೂಜಿಸಿದನು. ೮೦. “ನಮ್ಮ ಮಾವನಿದ್ದ ಊರಿನಲ್ಲಿ ಜೀವದಯೆ ಎಂಬುದರ ಹೆಸರೇ ಇರಲಿಲ್ಲ. ಅಂಥವರಿಗೂ ದೇವಗತಿಯಾಯಿತು. ನನ್ನ ಅಣ್ಣ ಅಕ್ಕಂದಿರಿಗೂ ಅಂತಹ ವೈಭವವು ಸಂಭವಿಸಿತು ಎಂದ ಮೇಲೆ ಧರ್ಮದಿಂದ ಆಗದುದೇನಿದೆ?” ಎಂದು ಎಣಿಸಿ ಧರ್ಮಕ್ಕೆ ಮನಸ್ಕೊಪ್ಪಿಸಿದನು. ೮೧. ಜಿನಮತ ನಂದನದಲ್ಲಿ ಅವನು ದಾನಲತೆಯನ್ನು ಬೆಳೆಯಿಸಿ ಅದಕ್ಕೆ ದಯಾರಸವನ್ನೆರೆದು ಅದನ್ನು ಜಗತ್ತಿನ ಚಪ್ಪರದಲ್ಲಿ ಹಬ್ಬಿಸಿದನು*೯, ಅದರಲ್ಲಿ ಹೊಸಕೀರ್ತಿ ಹೂವಾಗಿ ಅರಳಿತು. ೮೨. ಯಶೋಧರನು ಸಜ್ಜನ ಚೂಡಾಮಣಿಯೆನ್ನಿಸಿ ತನ್ನ ಪುಣ್ಯದಿಂದ ತನ್ನ ಅಜ್ಜ ಯಶೌಘನಿಗಿಂತಲೂ ಸಾವಿರಪಾಲು ಉಜ್ವಲತೆಯನ್ನು ಪಡೆದು ಉಜ್ಜಯನಿಯಲ್ಲಿ
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy