________________
ನಾಲ್ಕನೆಯ ಅವತಾರ
ಪ್ರಜೆಯೆಲ್ಲಂ ಜಲಗಂಧ ಸ್ವಜ ತಂಡುಲ ಧೂಪ ದೀಪ ಚರು ತಾಂಬೂಲ ವಜದಿಂ ಪೂಜಿಸುವುದು ಜೀವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ
ಎಂದು ತಿರೋಹಿತೆಯಾದೊಡೆ ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ~ ನಂದನರಂ ತನ್ನನುಜೆಯ ನಂದನರಂ ಮಾರಿದತ್ತವಿಭು ಲಾಲಿಸಿದಂ ಗುಡುಗುಡನೆ ಸುರಿವ ಕಣ್ಣನಿ-. ಯೊಡವಂದಶುಭಕ್ಕೆ ಮಂಗಳಸ್ನಾನಮಂದೊಡರಿಸೆ ಸೋದರಶಿಶುಗಳನೊಡಲೊಳ್ ಮಡಗುವಿನಮಪ್ಪಿ ಬೆಚ್ಚನೆ ಸುಯ್ದಂ ತಾನಂದುವರೆಗಮೊದವಿಸಿದೇನಂಗಳಲ್ಲಿ ಕುಸುಮದತ್ತಂಗೆ ಧರಿಶ್ರೀನಾಥಪದವಿಯಂ ಕೋಟ್ರ್ಯಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ ಕೆಲಕಾಲಮುಗ್ರತಪಮಂ ಸಲಿಸಿ ಸಮಾಧಿಯೊಳೆ ಮುಡಿಪಿ ಮೂಆನೆಯ ದಿವಂ ನೆಲೆಯಾಗೆ ಮಾರಿದತ್ತಂ | ಕಲಿಯಂ ಮೂದಲಿಸಿದಂತ ದೇವನೆ ಆದಂ
೭೩. ಪ್ರಜೆಗಳೇ ಕೇಳಿ. ನೀವು ಇನ್ನು ಮುಂದೆ ನೀರು, ಗಂಧ, ಮಾಲೆ, ಅಕ್ಕಿ, ಧೂಪ, ದೀಪ, ಚರು, ತಾಂಬೂಲ ಎಂಬವುಗಳಿಂದಲೇ ನನ್ನ ಪೂಜೆಯನ್ನು ಮಾಡಬೇಕು. ಎಲ್ಲಿಯಾದರೂ ಪ್ರಾಣಿಗಳನ್ನು ಬಲಿಕೊಟ್ಟಿರೆಂದಾದರೆ ನಿಮ್ಮ ಮೇಲೆ ಕೋಪಿಸಿ ಕೊಂಡೇನು.” ೭೪, ಇಷ್ಟನ್ನು ಉದ್ಯೋಷಿಸಿ ಚಂಡಮಾರಿ ಮಾಯವಾದಳು. ಆಗ ಮಾರಿದತ್ತ ರಾಜನು ಎಲ್ಲ ಪ್ರಾಣಿಗಳ ಬಂಧನವನ್ನೂ ಬಿಡಿಸಿದನು. ತನ್ನ ತಂಗಿಯ ಮಕ್ಕಳಾದ ಹಾಗೂ ಎಲ್ಲ ಜನರಿಗೆ ಆನಂದವುಂಟುಮಾಡುವ ಅಭಯರುಚಿ ಅಭಯಮತಿಗಳನ್ನು ಅವನು ಮುದ್ದಾಡಿದನು. ೭೫, ಅರಸನ ಕಣ್ಣುಗಳಿಂದ ಎಡೆಬಿಡದೆ ಕಂಬನಿ ಸುರಿಯುತ್ತಿತ್ತು. ಬಂದೊದಗಿದ ಅಶುಭವನ್ನು ಪರಿಹರಿಸುವುದಕ್ಕಾಗಿ ಮಂಗಳ ಸ್ನಾನ ಮಾಡುವಂತೆ ಅಶ್ರುಸ್ನಾನವಾಯಿತು. ತನ್ನ ಸೋದರಳಿಯ ಮತ್ತು ಸೋದರ ಸೊಸೆಯನ್ನು ತನ್ನ ಒಡಲಲ್ಲಿ ಅಡಗಿಸವನೋ ಎಂಬಂತೆ ಅವನ್ನು ಗಾಢವಾಗಿ ಆಲಿಂಗಿಸಿ ದನು. ಉಸಿರು ಬಿಸಿಯಾಗಿ ಹೊಮ್ಮುತ್ತಿತ್ತು. ೭೬, ಅದುವರೆಗೂ ಮಾಡಿದ ಪಾಪಕೃತ್ಯ ಗಳಿಂದಾಗಿ ಅವನು ಅಳುಕಿ ಹೋದನು. ಆದುದರಿಂದ ಅವನು ಮಗ ಕುಸುಮದತ್ತನಿಗೆ ಅರಸು ಪಟ್ಟವನ್ನು ಕಟ್ಟಿ ದೀಕ್ಷೆಯನ್ನು ಕೈಕೊಂಡನು. ೭೭. ಕೆಲವು ಕಾಲದವರೆಗೂ ಅವನು ಉಗ್ರವಾದ ತಪಸ್ಸಿನಲ್ಲಿ ಮಗ್ನನಾದನು. ಅನಂತರ ಸಮಾಧಿ ಮರಣವನ್ನು ಪಡೆದು ಮೂರನೆಯ ಸ್ವರ್ಗದಲ್ಲಿ ಕಲಿಯನ್ನು ಮೂದಲಿಸಿದಂತೆ ದೇವನೆ ಅದನು.