________________
2
.
ಯಶೋಧರ ಚರಿತೆ
ಆನಭಯರುಚಿಕುಮಾರನೆ ಈ ನೆಗಟ್ಟಿರ್ದಭಯಮತಿಯುಮೀ ಅಕ್ಕನೆ ದಲ್ ನಾನಾ ವಿಧ ಕರ್ಮದಿನಿ ನೈನಂ ನೀನ್ ಕೇಳ್ವೆ ಮಾರಿದತ್ತನೃಪೇಂದ್ರಾ
ಗುರುವಿಂದು ಬೆಸಸೆ ಭಿಕ್ಷೆಗೆ. ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ ಪುರುಳಿಲ್ಲ ನಿನ್ನ ಕೇಡಂ ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದವೆಂ
ಸಂಕಲ್ಪಹಿಂಸೆಯೊಂದಳಾಂ ಕಂಡೆಂ ಭವದ ದುಃಖಮುಂಡೆಂ ನೀನ್ ನಿಃ ಶಂಕತೆಯಿನಿನಿತು ದೇಹಿಗಳಂ ಕೊಂದವೆ ನರಕದೊಳ್ ನಿವಾರಣೆವಡೆವಯ್
ಎಂದ ನುಡಿ ನೆರೆದ ಜೀವಕದಂಬಂಗಳಭಯವೆಂಬ ಡಂಗುರದವೊಲೋಪ್ಟಂಬಡೆಯೆ ಮಾರಿದತ್ತನ್ನಪಂ ಬಿಲ್ಲುಂ ಬೆಳಗುಮಾದನುದ್ವೇಗಪರಂ
ಆ ಚಂಡಮಾರಿ ಲೋಚನ ಗೋಚರತನುವಾಗಿ ಕುವರನಂ ಬಂದಿಸಿ ನೀನಾಚಾರ್ಯನೆಯೆಂದಿಂತಿರೆ ಸೂಚಿಸಿದಳ್ ನೆರೆದ ಜಾತ್ರೆ ನೆತೆ ಕೇಳ್ತಿನೆಗಂ
೬೮. ಆ ಅಭಯರುಚಿ ಕುಮಾರನೇ ನಾನು ; ಹೆಸರುಗೊಂಡ ಅಭಯಮತಿಯೇ ಈಕೆ. ನಾನಾವಿಧ ಕರ್ಮಗಳಿಂದ ನಾವು ಹೀಗಾಗಿದ್ದೇವೆ. ಮಾರಿದತ್ತ, ನಿನಗಿನ್ನು ಏನು ಕೇಳಲಿಕ್ಕಿದೆ ? ೬೯. ಇಂದು ಗುರುಗಳ ಅಪ್ಪಣೆಯಂತೆ ಭಿಕ್ಷೆಗೆ ಬರುತ್ತಾ ಇದ್ದೆವು. ಆಗ ನಮ್ಮನ್ನು ಹಿಡಿದು ತಂದಿದ್ದಾರೆ. ಇದಕ್ಕಾಗಿ ಹೆದರುವುದರಲ್ಲಿ ಅರ್ಥವಿಲ್ಲ. ಆದರೆ ನಿನ್ನ ಕೇಡನ್ನು ಎಣಿಸಿಕೊಳ್ಳುವಾಗ ನಿನ್ನ ವಿಷಯದಲ್ಲಿ ಕರುಣೆಯುಂಟಾಗುತ್ತದೆ ; ಭಯವೂ ಹುಟ್ಟುತ್ತದೆ. ೭೦. ಸಂಕಲ್ಪ ಹಿಂಸೆಯೊಂದರಿಂದಲೇ ನಾನು ಜನ್ಮಜನ್ಮಾಂತರಗಳ ಈ ದುಃಖಗಳನ್ನೆಲ್ಲ ಅನುಭವಿಸಿದೆ. ನೀನು ನಿಶ್ಚಿಂತೆಯಿಂದ ಇಷ್ಟು ಜೀವಿಗಳನ್ನು ಕೊಲ್ಲುತ್ತಾ ಇದ್ದೀಯಲ್ಲ ! ನಿನಗೆ ನರಕದಿಂದ ವಿಮೋಚನೆಯುಂಟೆ ?” ೭೧. ಅಭಯರುಚಿ ಆಡಿದ ಈ ಮಾತು ಅಲ್ಲಿ ಸೇರಿದ ಜೀವಸಮುದಾಯಕ್ಕೆಲ್ಲ ಅಭಯವೀಯುವ ಡಂಗುರದಂತೆ ಗಂಭೀರವಾಗಿ ಕೇಳಿತು. ಮಾರಿದತ್ತರಾಜನಂತೂ ಉದ್ವೇಗಕ್ಕೆ ಗುರಿ ಯಾಗಿ ಬಹಳ ಬೆರಗಿನಿಂದಿದ್ದನು. ೭೨. ಅದೇ ಸಮಯಕ್ಕೆ ಚಂಡಮಾರಿ ದೇವತೆಯು ಪ್ರತ್ಯಕ್ಷಳಾದಳು. ಅವಳು ಅಭಯರುಚಿಗೆ ವಂದಿಸಿ ಅವನೇ ಆಚಾರ್ಯನೆಂದು ತೋರಿಸಿಕೊಟ್ಟಳು. ಜಾತ್ರೆ ಸೇರಿದ ಜನರೆಲ್ಲ ಕೇಳುವಂತೆ ಅವಳು ಸೂಚನೆಯನ್ನಿತ್ತಳು :