________________
ನಾಲ್ಕನೆಯ ಅವತಾರ
ಎನಿತೊಳವು ಜೀವರಾಶಿಗ
ಳನಿತುಮನೋರಂತೆ ಕೊಂದು ತಿಂದು ತಣಿವಿಲೆನೆ ಬರ್ದೆನಿಂದುವರಮಿನೆನಗಿನ್ನೆಂತಪ್ಪ ನರಕಮಿದಿರ್ವಂದಪುದೋ
ಎಂದು ಸುದತ್ತಾಚಾರ್ಯರ ಮುಂದಣಿನರಮನೆಗೆ ಪೋಗದುರ್ವಿಭರಮಂ ನಂದನನೊಳಭಯರುಚಿಯೊಳ್ ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ
ಶ್ರೀಜಿನದೀಕ್ಷೆಗೆ ತನುವಂ
ಯೋಜಿಸೆ ಕಲ್ಯಾಣಮಿತ್ರನುಂಬೆರಸು ಯಥಾ ರಾಜಾ ತಥಾ ಪ್ರಜಾ ಎಂ
ಬೋಜೆಯಿನಂದರಸುಗಳ ಪಲರ್ ತಳಸಂದ
ಆಗ ತಂದೆಯ ತಪದು
ದ್ಯೋಗಂ ತಡವಾಗದಂತೊಡಂಬಟ್ಟು ಮಹಿ ಭೋಗಕ್ಕನುಜ ಯಶೋಧರ
ನಾಗಿರೆ ಬಕಭಯರುಚಿಯುಮನುಜೆಯ ಸಹಿತಂ
ತಮದಿಂದಂ ಪೊಱಮಟ್ಟು
ತಮಚಾರಿತ್ರದೊಳೆ ನೆರೆದು ಮೆಯ್ದಿಕ್ಕಿದ ಸಂಯಮದ ಸುದತ್ತಾಚಾರ್ಯರ ಸಮುದಾಯದೊಳಿರ್ದು ತತ್ವಪರಿಣತನಾದು
2.99
೬೪
೬೫
೬೬
22
ಎಂದುಕೊಂಡನು. ೬೩. ನಾನು ಇದುವರೆಗೆ ಎಷ್ಟೆಷ್ಟು ಪ್ರಾಣಿಗಳಿವೆಯೋ ಅಷ್ಟಷ್ಟನ್ನು ಒಂದೇ ಸವನೆ ಕೊಲ್ಲುತ್ತಾ ಬಂದು ಅವುಗಳನ್ನು ತಿಂದಿದ್ದೇನೆ. ಆದರೂ ತೃಪ್ತಿ ಯುಂಟಾಗದೆ ಇದುವರೆಗೂ ಬಾಳಿದೆ. ನನಗೆ ಇನ್ನೆಂತಹ ನರಕವು ಕಾದಿದೆಯೋ ? ವಿಧಿಯೆ !” ೬೪, ಈ ಯೋಚನೆ ಬಂದ ಮೇಲೆ ಯಶೋಮತಿ ಅರಮನೆಗೂ ಹೋಗಲಿಲ್ಲ. ರಾಜ್ಯಭಾರವನ್ನೆಲ್ಲ ಮಗನಾದ ಅಭಯರುಚಿಗೆ ಒಪ್ಪಿಸಿ ತಾನು ಜೈನದೀಕ್ಷೆಯನ್ನು ವಹಿಸಿಕೊಂಡನು. ೬೫. ಕಲ್ಯಾಣಮಿತ್ರನೂ ದೀಕ್ಷೆಯನ್ನು ಕೈಕೊಂಡನು. ಆಗ “ರಾಜನಂತೆ ಪ್ರಜೆ” ಎಂಬ ಮಾತನ್ನು ಸಾರ್ಥಕಪಡಿಸುವಂತೆ ಅನೇಕ ನರಪತಿಗಳೂ ದೀಕ್ಷಾಬದ್ಧರಾಗಲು ನಿರ್ಧರಿಸಿದರು. ೬೬. ತಂದೆಯ ತಪಸ್ಸಿನ ಉದ್ಯೋಗಕ್ಕೆ ತಡೆಯಾಗಬಾರದು ಎಂದು ಅಭಯರುಚಿ ರಾಜ್ಯಭಾರವನ್ನು ವಹಿಸಲು ಸಮ್ಮತಿಯಿತ್ತನು. ಆಮೇಲೆ ಅವನು ತನ್ನ ತಮ್ಮ ಯಶೋಧರನಿಗೆ ರಾಜ್ಯ ಭೋಗವನ್ನೊಪ್ಪಿಸಿ ತಂಗಿಯೊಂದಿಗೆ ತಪಸ್ಸಿಗೆ ಹೊರಟನು. ೬೭, ಅಜ್ಞಾನಾಂಧ ಕಾರದಿಂದ ಹೊರಬಂದು ಉತ್ತಮ ಚಾರಿತ್ರದಲ್ಲಿ ಸೇರಿಕೊಂಡು ಸಂಯಮವಶನಾಗಿ ಸುದತ್ತಾಚಾರ್ಯರ ಶಿಷ್ಯವೃಂದದಲ್ಲಿ ಸೇರಿದನು ; ತತ್ವದಲ್ಲಿ ಪರಿಣತಿಯನ್ನು ಪಡೆದನು.