________________
೭೪
ನಿರವಿಸಿದ ಚಂದ್ರಮತಿಯಂ
ಬರಸಿಯ ನಾಯುರಗಿ ಮೊಸಳೆ ಆಡು ಲುಲಾಯಂ ಚರಣಾಯುಧವಧುವಾದ
ಗುರುವಚನದಿಗಳಭಯಮತಿಯಾಗಿರ್ದಳ್
ನಿನಗಂ ಕುಸುಮಾವಳಿಗಂ
ಜನಿಯಿಸಿದವಳೆಂಬುವಭಯರುಚಿಮತಿಗಳ್ ಮುನಿನ ಜನಮನಿತುಮಂ ನೆ
ಟ್ಟನೆ ಬಲ್ಲ ಕೇಳು ನಂಬು ನೀನ್ ಧರಣಿಪತೀ
ನೀನಡೆವೆ ಕೊಂದ ಘೋರಮನಾನಿಗ್ರಹವಧೆಯಿನಂದು ಸತ್ತವರಳವರ್ ಮೀನುಂ ಮೊಸಳೆಯುಮಾಡಂತಾ ನೆಗಟ್ಟಿ ಜಪೋತಮಹಿಷವಾದಂದರಸಾ
ಕೋಟೆಯ ಕೂಗೆಲ್ ನೀನ್ ಸೂಆದವನೆಸೆವುದೆತ್ತಲಾ ಖಗಯುಗಳಂ ಬೀಲೊಡನಾದ ಮಾನಸ
ನೋಡ ಧರ್ಮಮೊದವಿದ ಪದನಂ
ವಾಲೆ
ಎನೆ ಮುನಿವಚನದೊಳಂ ನಂ
ದನರೊಳಮಾಗಳೆ ಯಶೋಮತಿಕ್ಷಿತಿಪಂ ತೆಳ್ಳನೆ ತಿಳಿದು ಭಾಪು ಸುಂಕಲ್ಪನವಧೆಗಿನಿತಾಯ್ತು ದಿಟದಿನೇನೇನಾಗ
ಯಶೋಧರ ಚರಿತೆ
೫೮
XE
と。
೬೧
وع
ಅಭಯರುಚಿಯಾಗಿದ್ದಾನೆ. ೫೮. ಆ ಚಂದ್ರಮತಿಯೆಂಬ ಅರಸಿ ಕ್ರಮವಾಗಿ ನಾಯಿ, ಹಾವು, ಮೊಸಳೆ, ಆಡು, ಕೋಣ, ಹೇಂಟೆಯಾಗಿ ಹುಟ್ಟಿದ್ದಳು. ಈಗ ಗುರುವಿನ ವಚನವನ್ನು ಕೇಳಿದುದರಿಂದಾಗಿ ಅಭಯಮತಿಯಾಗಿ ಜನಿಸಿದ್ದಾಳೆ. ೫೯, ನಿನಗೂ ಕುಸುಮಾವಳಿಗೂ ಹುಟ್ಟಿದ ಅಭಯರುಚಿ, ಅಭಯಮತಿಗಳೆಂಬ ಅವಳಿಮಕ್ಕಳು ಹಿಂದಿನ ಇನ್ನೂ ಜನ್ಮಗಳನ್ನು ಚೆನ್ನಾಗಿ ಬಲ್ಲರು. ಅವರನ್ನೇ ಕೇಳು. ನಿನಗೆ ವಿಶ್ವಾಸವಾದೀತು. ೬೦. ನೀನು ಕೊಂದ ಆ ಘೋರಕಾರದ ವಿಷಯ ನಿನಗೇ ಗೊತ್ತಿದೆ. ನಿನ್ನ ಭೀಕರ ಹಿಂಸಾಘಾತದಿಂದ ಮೀನು, ಮೊಸಳೆ, ಆಡು, ಹೋತ, ಕೋಣ ಎಂಬ ಜನ್ಮಗಳಲ್ಲಿದ್ದು ಸತ್ತವರೂ ತಿಳಿದಿದ್ದಾರೆ. ೬೧. ಕೋಳಿಗಳ ಕೂಗೆಲ್ಲಿ ? ಆ ಸ್ವರವನ್ನಾಲಿಸಿ ಮಾಡಿದ ಬಾಣಪ್ರಯೋಗವೆಲ್ಲಿ ? ಆ ಕೋಳಿಗಳು ಸತ್ತ ಮೇಲೆ ಅವುಗಳಿಗೆ ದೊರೆತುದು ಮಾನವಜನ್ಮ ಇದರಿಂದ ಧರ್ಮವು ಎಂತಹ ಸ್ಥಿತಿಯನ್ನೊದಗಿಸುವು ದೆಂಬುದು ಪ್ರತ್ಯಕ್ಷವಾಗುವುದಿಲ್ಲವೆ ?” ೬೨. ಮುನಿಗಳ ಈ ಮಾತನ್ನು ಕೇಳಿ, ಮಕ್ಕಳಿಂದಲೂ ಈ ವಿಷಯವನ್ನು ವಿಚಾರಿಸಿ ಸರಿಯಾಗಿ ತಿಳಿದುಕೊಂಡ ಯಶೋಮತಿ, “ಸಂಕಲ್ಪವಧೆಯಿಂದಲೇ ಇಷ್ಟು ಕಷ್ಟಗಳನ್ನು ಅನುಭವಿಸು ವಂತಾಯಿತು. ಇನ್ನು ಕೈಯಾರೆ ಕೊಲೆ ಮಾಡಿದರೆ ಇನ್ನೇನಾಗಲಿಕ್ಕಿಲ್ಲ ?”