________________
ನಾಲ್ಕನೆಯ ಅವತಾರ
ಎಂಬುದುಮರಸಂ ಮುನಿವರರಂ ಬಲಗೊಂಡೆಂಗಿ ನೆಗಟ್ಟಿ ಪೊಲ್ಲಮೆಗೆ ತದೀ~ ಯಾಂಬುಜಪದಮಾ ತನ್ನ ಶಿರೋಂಬುಜದಿಂದರ್ಚಿಸಲ್ ಪರಿಚ್ಛೇದಿಸಿದಂ ಅದನವರವಧಿಯಿನುದಾಗದು ಬೇಡೆನೆ ನೃಪತಿ ಮತ್ತೆ ವಿಸ್ಮಯದಿಂ ಕೇಳ್ಳುದುಮುಸಿರ್ದರ್ ಭವದೊಳ್ ಬ ರ್ದಿದ ಮಾತರಪಿತರರಂ ಪಿತಾಮಹರಿರವಂ ವೀರತಪಸ್ವಿ ಯಶಘಮಹಾರಾಜಂ ನೋನ್ನು ಕಳೆದು ಸುರವರವನಿತಾ ಸ್ಮರಕಟಾಕ್ಷ ನಿರೀಕ್ಷಣ ಕೈರವಶೀತಾಂಶುದೇವನಾದಂ ದಿವದೊಳ್ ಅಮೃತಮತಿ ಅಷ್ಟವಂಕಂ- . ಗೆ ಮರುಳೊಂಡತ್ತೆ ಗಂಡನಂ ವಿಷದಿಂ ಕೊಂ ದು ಮುದಿರ್ತು ಕುಷ್ಟಿಕೊಳೆ ಪಂಚಮ ನರಕದೊಳಳರಸ ಧೂಮಪ್ರಭೆಯೊಳ್ ಜನಕಂ ಯಶೋಧರಂ ಪಿಟಿನ ಕೋಟೆಯನಡೆದು ಕಟೆದು ನವಿಲೆಯಿನಾಡಿನ ಪೋರಿ ಪೊಂತು ಕುಕ್ಕುಟಮೆನೆ ಪುಟ್ಟದನೀಗಳಭಯರುಚಿಯಾಗಿರ್ದಂ
೫೭
೫೩. ಇಷ್ಟು ಹೇಳಿದಾಗ ಯಶೋಮತಿಯ ಮನಸ್ಸು ಬದಲಾಯಿತು. ಅವನು ಆ ತಪಸ್ವಿಗಳಿಗೆ ಪ್ರದಕ್ಷಿಣ ನಮಸ್ಕಾರಗಳನ್ನು ಸಲ್ಲಿಸಿ ತಾನು ಮಾಡಿದ ಅಕೃತ್ಯಕ್ಕಾಗಿ ಅವರ ಪಾದಕಮಲವನ್ನು ತನ್ನ ಶಿರಃಕಮಲದಿಂದ ಪೂಜಿಸಲು ನಿರ್ಧಾರಮಾಡಿದನು. ೫೪. ರಾಜನ ವಿಷಯವನ್ನೆಲ್ಲ ಸುದತ್ತಾಚಾರ್ಯರು ಅವಧಿಜ್ಞಾನದಿಂದ ಅರಿತುಕೊಂಡರು. “ಆಗದು, ಬೇಡ” ಎಂದು ಅವರು ತಡೆದಾಗ ರಾಜನಿಗೆ ಆಶ್ಚರ್ಯವಾಯಿತು. ಅದೇಕೆ ಹಾಗೆ ?” ಎಂದು ಪ್ರಶ್ನಿಸಿದನು. ಅವರು ಆತನ ತೀರಿಹೋದ ತಂದೆತಾಯಿಗಳ ಮತ್ತು ಅಜ್ಜಅಜ್ಜಿಯರ ಸ್ಥಿತಿಗತಿಗಳನ್ನು ವಿವರಿಸತೊಡಗಿದರು. ೫೫. “ನಿನ್ನ ಅಜ್ಜ ಯಶೌಘ ಮಹಾರಾಜನು ವೀರತಪಸ್ವಿಯಾಗಿ ವ್ರತಗಳನ್ನು ಆಚರಿಸಿದನು. ತೀರಿಕೊಂಡ ಮೇಲೆ ಅವನು ಸ್ವರ್ಗದಲ್ಲಿ ಉತ್ತಮ ದೇವತಾಸ್ತ್ರೀಯರ ಮಂದಹಾಸದ ಕಟಾಕ್ಷ ವೀಕ್ಷಣದ ಕನ್ನೈದಿಲೆಗಳಿಗೆ ಚಂದ್ರನಾಗಿದ್ದುಕೊಂಡು ದೇವನಾಗಿದ್ದಾನೆ. ೫೬. ಅಮೃತಮತಿ ಅಷ್ಟವಂಕನಿಗೆ ಹುಚ್ಚಾಗಿ ತನ್ನ ಅತ್ತೆ ಚಂದ್ರಮತಿಯನ್ನೂ ಗಂಡ ಯಶೋಧರನನ್ನೂ ವಿಷವಿಕ್ಕಿ ಕೊಂದಳು. ಅವಳು ಆಮೇಲೆ ಕ್ರಮ ಕ್ರಮವಾಗಿ ಕ್ಷೀಣಿಸುತ್ತ ಬಂದು ಕುಷ್ಠರೋಗಕ್ಕೆ ಗುರಿಯಾದಳು. ಸತ್ತ ಮೇಲೆ ಅವಳು ಧೂಮಪ್ರಭೆಯೆಂಬ ಪಂಚಮನರಕದಲ್ಲಿ ಮುಳುಗಿ ನವೆಯುತ್ತಾ ಇದ್ದಾಳೆ. ೫೭. ನಿನ್ನ ತಂದೆಯಾದ ಯಶೋಧರನು ಹಿಟ್ಟಿನ ಕೋಳಿಯನ್ನು ಕೊಂದು, ಸತ್ತ ಮೇಲೆ ನವಿಲು, ಮುಳ್ಳುಹಂದಿ, ಮೀನು, ಆಡು, ಹೋತ, ಕೋಳಿ ಎಂದು ಜನ್ಮಾಂತರಗಳನ್ನು ಪಡೆದು