________________
ಯಶೋಧರ ಚರಿತೆ
ಅಣಿಯದೆ ಗೆಯೇಂ ಕ್ಷಮೆಯೆಂ ದೆಗೆನೆ ನೃಪನೆಂದನಾವ ಜಾತಿಯದಾರೆಂ ದಜೆಯದೆ ಮಿಂದುಂ ಮುದುಕಿಯುಮಯದ ಮಣಕಿನ ಬಣಂಬೆಗಾನಗುವೆನೇ
ಒಂದು ಮೃಗಂ ಬೀಡಿದು ನೋಡಿಂದಿನ ಬೇಟೆಯೊಳೆ ಸಿಂಟನಂ ಕಂಡುದಟಿದೆಂದೊಡೆ ಪರದಂ ಪಾಪಂ ಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ
ತನುವಾರ್ಗಮಶುಚಿ ಶುದ್ಧಾತನೆ ಶುಚಿ ಕಾಗೆಯವೊಲೇನೊ ಮಿಂದವನೇಂ ಶುಧನೆ ಸಂಸ್ಕಾರಶತೇನಾಪಿ ನ ಗೂಥಃ ಕುಂಕುಮಾಯತೇ ಎಂದಣಿಯಾ
ಗಂಗಕುಲಚಕ್ರವರ್ತಿ ಕಳಿಂಗಧರಾಧೀಶರಿವರಸಾರಂ ಸಂಸಾರಂ ಗಡಮೆಂದಡೆದಲೆದು ತಪಂಗೆಯ್ದರ್ ನಾಮದಿಂ ಸುದತ್ತಾಚಾರಲ್
೫೨
ಮಣಿಯುತ್ತಾರೆ. ಇತರರಲ್ಲಿ ಇರಲಾರದಷ್ಟು ಸದ್ಗುಣಗಳನ್ನು ಇವರು ಪಡೆದಿದ್ದಾರೆ. ೪೯. 'ನಾನು ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸಿಬೇಕು' ಎಂದು ಹೇಳಿ ಅವರ ಪಾದಗಳಿಗೆ ವಂದಿಸಬೇಕು ನೀವು” ಎಂದು ವರ್ತಕನು ತಿಳಿಸಿದನು. ಆಗ ಅರಸನು ಅವನು ಯಾವ ಜಾತಿಯವನು, ಯಾರವನು ಎಂದು ಮುಂತಾಗಿ ತಿಳಿದುಕೊಳ್ಳದೆ, ಸ್ನಾನಮಾಡಿಯಾಗಲಿ ನೀರಲ್ಲಿ ಮುಳುಗಿಯಾಗಲಿ ಗೊತ್ತೇ ಇಲ್ಲದ ದುರ್ವಾಸನೆಯ ಮುದ್ದೆಗೆ ನಾನು ಮಣಿಯಬೇಕೆ ?” ಎಂದು ಪ್ರಶ್ನಿಸಿದನು ೫೦. ಇದೂ ಅಲ್ಲದೆ “ಕೆಟ್ಟನಾತದವನನ್ನು ಕಂಡ ಕಾರಣ ಇಂದಿನ ಬೇಟೆಯಲ್ಲಿ ಒಂದೇ ಒಂದು ಮೃಗ ಕೂಡ ಬೀಳಲಿಲ್ಲ !” ಎಂದು ಧಿಕ್ಕರಿಸಿದನು. “ಸ್ವಾಮಿ ಪುಣ್ಯಮೂರ್ತಿಯನ್ನು ಕಂಡರೆ ಪಾಪ ಬಂದು ಸೇರಲಾರದಲ್ಲ! ಹಾಗಾಗಿಯೆ ನಿಮಗೆ ಬೇಟೆ ದೊರೆಯಲಿಲ್ಲ” ಎಂದು ಕಲ್ಯಾಣಮಿತ್ರನು ಸಮಾಧಾನ ಹೇಳತೊಡಗಿದನು. ೫೧. “ದೇಹವೆಂಬುದು ಎಲ್ಲರಿಗೂ ಸದಾ ಕೊಳಕಾಗಿಯೇ ಇರುತ್ತದೆ. ಆತನು ಮಾತ್ರ ನಿರ್ಮಲನಾಗಿರುತ್ತಾನೆ. ಕಾಗೆ ಸ್ನಾನಮಾಡಿತೆಂದು ನಿರ್ಮಲವೆನ್ನಿಸುತ್ತದೆಯೆ ? ಸ್ನಾನಮಾಡಿದವರೆಲ್ಲ ಪರಿಶುದ್ಧ ರಾಗುವರೆ ? ನೂರಾರು ಸಂಸ್ಕಾರಗಳನ್ನು ಮಾಡಿದರೂ ಅಮೇಧ್ಯವು ಕುಂಕುಮ ವಾದೀತೆ ? ಯೋಚಿಸಿರಿ! ೫೨. ಇವರು ಗಂಗಕುಲದ ಚಕ್ರವರ್ತಿಗಳಾಗಿದ್ದವರು ; ಕಳಿಂಗದೇಶದ ಅಧಿಪತಿಗಳಾಗಿದ್ದರು. ಈ ಸಂಸಾರವೆಂಬುದು ಸಾರವಿಲ್ಲದ್ದು ಎಂಬುದು ಖಚಿತವಾದಾಗ ಇವರು ತಪಸ್ಸಿಗೆ ತೆರಳಿದರು. ಇವರ ಹೆಸರು ಸುದತ್ತಾಚಾರ್ಯರು”.