________________
ನಾಲ್ಕನೆಯ ಅವತಾರ
ಆ ಯತಿಗಾಯತಿಗಿಡೆ ಕೆಳೇಯಕತತಿ ನೃಪತಿ ಕೆಳರ್ದು ಮುಳಿದುರ್ಚಿದ ಕೆ. ಕ್ಷೇಯಕದೆ ಪೊಯ್ಯಲೆಯ ವಿ ನೇಯಂ ಕಲ್ಯಾಣಮಿತ್ರನೆಂಬಂ ಪರದಂ ಕೆಮ್ಮನೆ ಬಾಳಂ ಕಿಜ್ಜಯ್ ಕಿಂ ಮಿತ್ರಂ ಯನ್ನಿವರ್ತಯತಿ ಪಾಪಾತ್ತೆದಾನ್ ಮಾಣಿಸದೊಡೆ ಕೋಟಲೆಯಂ ಮಾಡವೆ ದೇವ ನಿನಗೆ ದುರಿತಶತಂಗಳ್ ಪೊಡವಡಲೆತ್ತುವ ಕೈಗಳ್ ಪೊಡೆಯಲೆತ್ತುಗುಮೆ ಮೂಜುಲೋಕದ ಕೈಗನೃಡಿ ಸಾಮರ್ಥ್ಯದ ಸದ್ಗುಣದೊಡೆಯರೊಳದು ತಕ್ಕುದಲ್ಲದತ್ತಿಡು ಬಾಳಂ ಆ ರುಷಿಯ ಚರಣಕಮಲಮನಾರಾಧಿಸಲೆಂದು ಬಂದು ಕಂಡೆಡೆವೊಕ್ಕುರ್ವಿರಮಣ ದುರ್ಬಲಸ್ಯ ಬಲೋ ರಾಜಾ ಎನ್ನದಿವರ್ಗೆ ಮುಳಿವುದೆ ಮರುಳೇ ಇವರಾರೆಂದಿರ್ದಪೆ ನೀನ್ ಭುವನತ್ರಯತಿಳಕರಮಳಸದ್ಯೋಧ ಸುಧಾರ್ಣವ ಪೂರ್ಣಚಂದ್ರರವನತ ದಿವಿಜನರೊಗರನನ್ಯಸಾಮಾನ್ಯಗುಣರ್
೪೮ ತಮ್ಮ ಕೆಚ್ಚನ್ನೆಲ್ಲ ಕಳೆದುಕೊಂಡು ಕಾಡಿನ ಜಿಂಕೆಗಳಂತಾಗಿ ಅಲ್ಲೆ ಸುತ್ತ ಸುಳಿದವು. ೪೪. ಮುನಿಯ ಮುಂದೆ ನಾಯಿಗಳೂ ತಮ್ಮ ಬಿರುಸನ್ನು ಕಳೆದುಕೊಂಡಾಗ ಅರಸನು ಮತ್ತಷ್ಟು ಕೆರಳಿದನು. ರೋಷದಿಂದ ಖಡ್ಗವನ್ನು ಜಳಪಿಸಿ ಕಡಿದೊಗೆಯು ಮುಂದಾದನು. ಅಷ್ಟರಲ್ಲಿ ಅವನೊಂದಿಗಿದ್ದ ಕಲ್ಯಾಣಮಿತ್ರನೆಂಬ ನಯವಂತನಾದ ವ್ಯಾಪಾರಿಯು, ೪೫, “ಸುಮ್ಮನೆ ಕತ್ತಿಯನ್ನು ಹಿರಿದಿರಲ್ಲ! ಪಾಪ ಮಾಡುವವರನ್ನು ಆ ಅಕೃತ್ಯದಿಂದ ತೊಲಗಿಸದಿದ್ದರೆ, ಅಂತಹ ಮಿತ್ರನು ಮಿತ್ರನೇ ಅಲ್ಲ! ಆದುದರಿಂದ ನಾನೀಗ ನಿಮ್ಮನ್ನು ತಡೆಯಲೇಬೇಕಾಗಿದೆ. ಇಲ್ಲವಾದರೆ ಮುಂದೆ ನೂರಾರು ಕೇಡುಗಳು ನಿಮ್ಮನ್ನು ಬಾಧಿಸದೆ ಇರಲಾರವು” ಎಂದು ಹೇಳಿದನು. ೪೬. “ರಾಜಾ, ನಮಸ್ಕಾರ ಮಾಡುವುದಕ್ಕಾಗಿ ಎತ್ತಬೇಕಾದ ಕೈಗಳನ್ನು ಕಡಿದಿಕ್ಕುವುದಕ್ಕಾಗಿ ಎತ್ತುತ್ತಾರೆಯೆ? ಅವರು ಮೂರು ಲೋಕದ ಕೈಗನ್ನಡಿ, ಸಾಮರ್ಥ್ಯದ ಒಡೆಯರು, ಸದ್ಗುಣಗಳ ಬೀಡು. ಅವರಲ್ಲಿ ಈ ಅಕೃತ್ಯವು ತಕ್ಕುದಲ್ಲ, ನಿಮ್ಮ ಕತ್ತಿಯನ್ನು ಅತ್ತ ಇಡಿರಿ. ೪೭. ಆ ಋಷಿಗಳ ಚರಣಕಮಲವನ್ನು ಆರಾಧಿಸುವ ಸಲುವಾಗಿ ಬರುವುದೂ, ಬಂದು ಅವರನ್ನು ಕಂಡು, ಸಮೀಪಿಸಿ, 'ದುರ್ಬಲರಿಗೆ ಬೆಂಬಲವಾಗಿ ರಾಜನೇ ಇದ್ದಾನೆ' ಎಂದು ಅವರೊಡನೆ ಬಿನ್ನವಿಸುವುದೂ ಕರ್ತವ್ಯವಾಗಿರುವಾಗ ಅವರ ಮೇಲೆ ಸಿಟ್ಟುಗೊಳ್ಳುವುದೆ ? ನಿಮಗೇನು ಹುಚ್ಚೆ? ೪೮. ಇವರು ಯಾರೆಂದು ಗೊತ್ತಿದೆಯೆ ನಿಮಗೆ? ಮೂರು ಲೋಕಕ್ಕೆ ತಿಲಕಪ್ರಾಯರಾದ ಇವರು ನಿರ್ಮಲವಾದ ಸಮ್ಯಜ್ಞಾನವೆಂಬ ಅಮೃತ ಸಾಗರಕ್ಕೆ ಪೂರ್ಣಚಂದ್ರರಾಗಿದ್ದಾರೆ. ದೇವತೆಗಳೂ ಮನುಷ್ಯರೂ ಉರಗರೂ ಇವರಿಗೆ