________________
20
ದೊರೆಕೊಳೆ ಸಮಾಧಿಮರಣಂ ಚರಣಾಯುಧಯುಗಳಮಲೆದು ಕುಸುಮಾವಳಿಯಂ
ಬರಸಿಯ ಬಸಿರೊಳ್ ಬಂದವು ನರಯುಗಳಕವಾಗಿ ನಚ್ಚನಚೊತ್ತಿದವೊಲ್
ಅಭಿಯರುಚಿಯಭಯಮತಿಯಂ
ಬಭಿಧಾನದೆ ಚಂದ್ರಮತಿ ಯಶೋಧರರಮಳಿ ಶುಭಲಕ್ಷಣಮೊಪ್ಪುತ್ತಿರೆ
ಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕು೦
ನುಣುರುಳ ಪೊಳೆವ ಕಪ್ಪು
ಕಣ್ಣಗಳಮಾದ ಮೆಯ್ಯ ಬೆಳಗೆಸೆವಿನಮಾ
ಪೆಣ್ಣಂಡು ರಾಜ್ಯಲಕ್ಷ್ಮಿ ಯ
ಕಣ್ಣಳ ದೊರೆಯಾಗಿ ಸಮನೆ ಬಳೆವಿನಮಿತ್ತಲ್
ಬೇಂಟೆಗೆ ನಡೆಯೆ ಯಶೋಮತಿ
ಗೆಂಟಳಾರಣ್ಯವಾಸಿಗಳ್ ನಿಲೆ ಕಂಡಾಬೇಂಟೆ ಪರಿಯದೊಡೆ ಬಿನದದ ಕಂಟಕನೀ ಸವಣನೆನುತೆ ಬರುತಂ ಮುನಿದಂ
ಮುನಿದಯ್ಯುಂ ಕುನ್ನಿಗಳನಿತುಮನೊರ್ಮೊದಲೆ ತೋಟೆ ಕೊಳ್ಳೋಳಿಗೆ ಮಹಾ ಮುನಿ ತಳರದೆ ಮೇರುವೊಲಿರೆ ವನಮೃಗದವೊಲುರ್ಕನಡೆದು ಸುಟಿದುವು ನಾಲ್ಕ
ಯಶೋಧರ ಚರಿತೆ
26
೪೦
೪೧
೪೨
೪೩
ಕೋಳಿಗಳನ್ನು ಒಮ್ಮೆಲೆ ಕೊಂದಿಕ್ಕಿತು, ಎರಡಕ್ಕೂ ಆಯುಸ್ಸು ಒಂದೇ ಆಗಿತ್ತೆಂಬಂತೆ. ೩೯. ಕೋಳಿಗಳೆರಡಕ್ಕೂ ದೊರೆತುದು ಸಮಾಧಿ ಮರಣ.* ೫೮ ಹೀಗೆ ಸತ್ತು ಅವೆರಡೂ ಕುಸುಮಾವಳಿಯ ಗರ್ಭದಲ್ಲಿ ಆ ದಂಪತಿಗಳ ಪ್ರೇಮವನ್ನೇ ಅಚೊತ್ತಿದಂತೆ ಅವಳಿಮಕ್ಕಳಾಗಿ ಜನಿಸಿದವು. ೪೦. ಅಭಯರುಚಿ, ಅಭಯಮತಿ ಎಂಬ ಹೆಸರಿನಿಂದ ಹೀಗೆ ಯಶೋಧರ ಚಂದ್ರಮತಿಯರು ಹುಟ್ಟಿದರು. ಈ ಮಕ್ಕಳು ಒಳ್ಳೆಯ ಲಕ್ಷಣವುಳ್ಳವರಾಗಿ ಸ್ವಾಭಾವಿಕ ರೀತಿಯಲ್ಲಿ ಬೆಳೆಯತೊಡಗಿದರು. ೪೧. ಚೆಲುವಾದ ಕೂದಲ ಕಪ್ಪುಕಾಂತಿಯೂ ಕಣ್ಣಿಗೆ ಮೆಚ್ಚಿನ ದೇಹದ ಬಿಳುಪೂ ಆ ಹೆಣ್ಣು ಗಂಡು ಮಕ್ಕಳಲ್ಲಿ ಶೋಭಾವಹವಾಗಿದ್ದು ರಾಜ್ಯಲಕ್ಷ್ಮಿಯ ಕಣ್ಣುಗಳಂತೆ ಅವರು ಬೆಳೆಯು ತಿದ್ದರು. ೪೨. ಒಂದು ದಿನ ಯಶೋಮತಿ ಮೃಗಯಾವಿಹಾರಕ್ಕೆ ತೆರಳಿದನು. ದೂರದಲ್ಲಿ, ಕಾಡಿನಲ್ಲಿ ವಾಸಿಸುವ ತಪಸ್ವಿಗಳೊಬ್ಬರಿದ್ದರು. ಅವರನ್ನು ನೋಡಿದ ಬಳಿಕ ಒಂದೇ ಒಂದು ಪ್ರಾಣಿಯೂ ಬೇಟೆಗೆ ದೊರೆಯಲಿಲ್ಲ. ಈ ಬೇಟೆಯ ವಿನೋದಕ್ಕೆ ಕಂಟಕ ಪ್ರಾಯರಾದವರೇ ಈ ಸವಣರು ಎಂದು ಅರಸನಿಗೆ ಬಹಳ ಸಿಟ್ಟು ಬಂತು. ೪೩. ಕ್ರೋಧದಿಂದ ರಾಜನು ತನ್ನ ಐನೂರು ನಾಯಿಗಳನ್ನು ಒಮ್ಮೆಲೆ ಭೂ ಬಿಟ್ಟನು. ಅವರು ಮಾತ್ರ ಕದಲಲೇ ಇಲ್ಲ. ಮೇರುವಿನಂತೆ ನಿಶ್ಚಲರಾಗಿ ಅವರಿದ್ದಾಗ ನಾಯಿಗಳು