________________
ನಾಲ್ಕನೆಯ ಅವತಾರ
ಇತಹಾನಿ ಹಿಂಸೆಯೋಂದೀ ಗತಿಗಿಕ್ಕಿದುದುಳೆದ ನಾಲ್ಕುಮಾದೊಡೆ ಬಡೆಕೇಂ ಚತುರಂಗಬಲ ಸಮೇತಂ ಪ್ರತಿಪಕ್ಷಂ ಶೂರನಾದೊಡೇನಂ ಮಾಡಂ ಅದಳೆಂ ತನ್ನಂತಿರೆ ಬಗೆವುದು ಪೆರಂ ಪ್ರಾಣಿಹಿಂಸೆಯಂ ಮಾಡಲ್ವೆಡ ದಯಾಮೂಲಂ ಧರ್ಮ೦ ಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ ಗುರುವಿಂತು ಬೆಸಸೆ ಜಾತಿಸರಂಗಳಾಗಿರ್ದು ಪಕ್ಕಿಗಳ್ ಕೇಳೆರ್ದೆಯೊಳ್ ಪರಮೋತ್ಸವದಿಂ ತಮಂ ಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂ ಕಲೆ ನಿಜಹರ್ಷಬಾಷದ ಮತೆವನಿ ಧರ್ಮಾನುರಾಗ ಮೇಘಧ್ವನಿವೋಲ್ ಮೋಳಿಗುವಿನಮೇಜಿಂಕೆಯ ಪೊಯಿಲ್ ಫಟೆಲನೆ ಕೂಗಿದುವು ಕೇಳತ್ತ ನೃಪಾಲಂ ಸ್ವರವೇದವಿದ್ಯೆಯಂ ತನರಸಿಗೆ ಮೇಯಿ ದೇವಿ ನೋಡೆನುತೆಚೆಂ ಸರಿಯಿಸೆ ಕೆಡೆದುವವಂತೆರಡರ್ಕಾಯುಃ ಪ್ರಮಾಣವೊಂದಾದುದೆನಲ್
ಹುಟ್ಟಿದ್ದಾರೆ. ಈ ಮೊದಲು ಅನೇಕ ಪ್ರಾಣಿಜನವನ್ನು ಪಡೆದು ಬೇಕಾದಷ್ಟು ಬಳಲಿದ್ದಾರೆ. ೩೪. ಅಹಿಂಸೆ ಎಂಬ ಒಂದು ವ್ರತಕ್ಕೆ ಈ ಬಗೆಯ ಅಪಚಾರ ಸಂಭವಿಸಿದುದರಿಂದ ಅವರಿಗೆ ಈ ಗತಿಯೊದಗಿತು. ಉಳಿದ ನಾಲ್ಕು ವ್ರತಗಳಿಗೂ ಭಂಗವುಂಟಾದರೆ ಇನ್ನೇನಾಗದು ? ಶೂರನೊಬ್ಬನು ಚತುರಂಗಬಲ ಸಮೇತನಾಗಿ ಬಂದರೆ ಏನು ಮಾಡಲಾರ ? ೩೫. ಆದುದರಿಂದ ಪರರನ್ನು ತನ್ನಂತೆ ಬಗೆಯಬೇಕು. ಪ್ರಾಣಿಹಿಂಸೆಯನ್ನು ಮಾಡಬಾರದು. ಧರ್ಮವು ದಯಾಮೂಲವಾದುದು, ಮಗು ! ನೆಮ್ಮದಿಯಿಂದ ಕೇಳು : ಇದು ಇಹಪರಲೋಕಗಳ ಭವಕ್ಕೂ ಹಿತನ್ನುಂಟು ಮಾಡುತ್ತದೆ”. ೩೬. ಗುರುಗಳು ಕೊಟ್ಟ ಉಪದೇಶವನ್ನು ಕೇಳುತ್ತಿದ್ದಂತೆ ಪೂರ್ವಜನ್ಮದ ಸರಣೆಯುಂಟಾದ ಆ ಕೋಳಿಗಳೆರಡೂ ಅಂತರಂಗದಲ್ಲಿ ಆನಂದಗೊಂಡು ಈ ವ್ರತವನ್ನು ಕೈಕೊಂಡವು. ಚಂಡಕರ್ಮನೂ ವ್ರತವನ್ನು ಅಂಗೀಕರಿಸಿದನು. ೩೭. ತಮಗುಂಟಾದ ಆನಂದಬಾಷ್ಪವು ಮಳೆಹನಿಯಾಗಿ ಕೆಳಕ್ಕುದುರಿತು. ಆಗ ಧರ್ಮಾನುರಾಗವೆಂಬ ಮೋಡಗಳು ಗುಡುಗಿದವೋ ಎಂಬಂತೆ ಆ ಕೋಳಿಗಳೆರಡರ ರೆಕ್ಕೆಗಳು ಶಬ್ದ ಮಾಡಿದವು ಮತ್ತು ಸಂತೋಷಾಧಿಕ್ಯದಿಂದ ಕೆಲೆದವು. ಈ ಕೂಗು ರಾಜನ ಕಿವಿಗೆ ಬಿದ್ದಿತು. ೩೮. ಅವನು ತನ್ನ ಸ್ವರವೇದ (ಶಬ್ದವೇಧಿ) ವಿದ್ಯೆಯನ್ನು ತನ್ನ ರಾಣಿಗೆ ತೋರಿಸಿ ಮೆರೆಯಲು ಮನಸ್ಸು ಮಾಡಿದನು. 'ದೇವಿ ನೋಡು !' ಎಂದು ಹೇಳುತ್ತಾ ಅವನು ಒಂದು ಬಾಣವನ್ನು ಪ್ರಯೋಗಿಸಿದನು. ಆ ಬಾಣವು ಎರಡೂ