________________
ನಾಲ್ಕನೆಯ ಅವತಾರ
ಎಲೆ ದೇವರೆ ಪುತ್ತುಂ ಬ ತಲೆಯುಂ ಬಜೆದಿಲ್ಲದೆಂಬರದು ಕಾರಣದಿಂ ನೆಲೆಯಾಂದೆಗನಚ್ಚಿಯವೋ
ಲೆಲೆಮಿಡುಕದೆ ನೆನೆಯುತಿರ್ದಿರೇನಂ ಮನದೊಳ್
ಅವಧಾರಿಸಿ ಕೇಳ್ವುದುಮದ ರವಧಿಯಿನಾಸನ್ನಭವನೆಂಬುದನದಿಂತವರಿಂತು ನುಡಿದರಾತ್ಮನ
ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ
ಆವೆಡೆಯೊಳಿರ್ದನಾತಂ
ಗಾವುದು ಕುಲಪೆಂದೊಡಂಗಿಯಂಗದೊಳೆಲ್ಲಂ ತೀವಿರ್ಪ೦ ಭೂತಚತು
ಸ್ವಾವಯವದಿನನ್ಯನಾತನತಿ ಚೈತನ್ಯಂ
ಎಂದೊಡೆ ತಳಾಱನಾಯಕ
ನೆಂದಂ ನೀಮೆಂದ ಮಾತು ಪೊಲ್ಲದು ನೋಡ
ಲೆಂದು ಪಲರಂ ವಿಚಾರಿಸಿ
ಕೊಂದಂ ತನುವಲ್ಲದಾತನಂ ಕಂಡತಿಯೆಂ
ಕಡಿದು ಕಿಟೆಕಿದನೆಲುವಂ
ಪುಡಿಗುಟ್ಟಿಸಿ ತೊವಲನುಗಿದು ಕರುಳ ತೊಡಂಕಂ ಬಿಡಿಸಿ ನಡೆ ನೋನೊಳಗೆ ಲ್ಲಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂ
289
೧೫
೧೬
02
೧೮
೧೯
?
ಮಾತಿಗುಪಕ್ರಮಿಸಿದನು. ೧೫. “ದೇವರೇ, ಹುತ್ತವೂ ಬತ್ತಲೆಯೂ ಬರಿದಿಲ್ಲ ಎನ್ನುತ್ತಾರೆ. ಆದ ಕಾರಣ ನೀವು ಒಂದು ಕಡೆ ಕುಳಿತ ಗೂಗೆಯ ನಿಶ್ಚಲವಾದ ಕಣ್ಣುಗಳಂತೆ ಒಂದಿಷ್ಟೂ ಅಲುಗಾಡದೆ ಕುಳಿತುಕೊಂಡು ಮನಸ್ಸಿನಲ್ಲಿ ಏನೇನೋ ನೆನೆಯುತ್ತಿದ್ದಿರಲ್ಲ! ಏನನ್ನು ?” ೧೬. ಅಕಂಪನರಿಗೆ ಅವನು ಆಸನ್ನಭವ್ಯನೆಂಬುದು ತಮ್ಮ ಅವಧಿಜ್ಞಾನದಿಂದ ಗೊತ್ತಾಯಿತು. ಆದುದರಿಂದ ಅವರು “ಯಾವ ವಿಕಲ್ಪವೂ ಇಲ್ಲದೆ ಆತ್ಮನನ್ನು ನೆನೆಯುತ್ತಾ ಇದ್ದೆ” ಎಂದರು. ಚಂಡಕರ್ಮ ಮತ್ತೆ ಪ್ರಶ್ನೆ ಹಾಕಿದನು. ೧೭. ಆತ್ಮನೆಲ್ಲಿದ್ದಾನೆ ? ಆತನಿಗೆ ಗುರುತೇನು ?” “ದೇಹಧಾರಿಯಾಗಿರುವವರೆಲ್ಲರ ಅವಯವಗಳಲ್ಲಿಯೂ ಆತ್ಮನು ವ್ಯಾಪಿಸಿಕೊಂಡಿದ್ದಾನೆ. ಮಣ್ಣು, ನೀರು, ಗಾಳಿ ಮತ್ತು ಬೆಂಕಿಯೆಂಬ ನಾಲ್ಕು ಬಗೆಯ ಭೂತಗಳಿಂದಾದ ದೇಹಕ್ಕಿಂತ ಬೇರೆಯಾಗಿರುವವನು ಆತ್ಮ ಅವನ ಚೈತನ್ಯವು ಅಪರಿಮಿತ.” ೧೮. ನಿಮ್ಮ ಮಾತು ಒಪ್ಪತಕ್ಕದ್ದಲ್ಲ. ಆತ್ಮನನ್ನು ಕಾಣಬೇಕೆಂದು ಹಲವರನ್ನು ವಿಚಾರಿಸಿದೆ ; ಹಲವು ಪ್ರಾಣಿಗಳನ್ನು ಕೊಂದು ನೋಡಿದೆ. ಎಲ್ಲ ಸಂದರ್ಭದಲ್ಲಿಯೂ ದೇಹವನ್ನು ಕಂಡೆನಲ್ಲದೆ ಆತನನ್ನು ಕಾಣಲೇ ಇಲ್ಲ. ೧೯. ಆತ್ಮನಲ್ಲಿ ಅಡಗಿದ್ದಾನೆಂದು ನೋಡಬೇಕೆಂದು ಒಂದು ಜೀವಿಯ ದೇಹವನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ಎಲುಬನ್ನು ಹುಡಿಮಾಡಿ, ಚರ್ಮವನ್ನು ಸುಲಿದು ಕರುಳ ಸಿಕ್ಕನ್ನೆಲ್ಲ ಬಿಡಿಸಿ ಒಳಗೆಲ್ಲ ಪರೀಕ್ಷೆ ಮಾಡಿ ನೋಡಿದೆ. ಎಲ್ಲಿಯೂ