________________
೬೪
ಬೆಳತಿಗೆವಸದನಮೆಸೆದಿರೆ
ತಳಿರ್ಜೊಂಪದೊಳುಯ್ಯಲಾಡಿ ಮೆದಳದೊರ್ವಳ್ ಜಳಜದ ಮಣಿಮಂಡಪದೊಳ
ಗಳವೆಯಂ ತೂಗಿ ತೊಟ್ಟಿಲೊಳ್ ಸಾರ್ಚಿದವೊಲ್
ಕೊಳದೊಳಗೋಲಾಡಿ ತಳಿರ್ತೆಳಮಾವಿನೊಳುಯ್ಯಲಾಡಿ ನರಪತಿ ಕುಸುಮಾವಳಿಯೊಳ್ ರತಿರಾಗದಿನೋಕುಳಿಯಾಡಿ ವಿಲಾಸಗೋಷ್ಠಿಯೊಳ್ ಕುಳ್ಳಿರ್ದಂ
ಗರಟಿಗೆಗಿತ್ತಲ್ ತದ್ದನ
ಪರಿಸರದೊಳ್ ಬರುತಮಿರ್ದಕಂಪನರೆಂಬರ್ ತರುಮೂಲದೊಳಿರೆ ನಿಧಿಯಂ
ಕುರುಡಂ ಕಾಂತೆ ಚಂಡಕರ್ಮಂ ಕಂಡಂ
ಮನುಮಿರೆ ಪುರ್ವಿನ ಮೊದಲೊಳ್
ಮನದೊಳಗಿರೆ ವಾಯು ಕರಣತತಿ ವಾಯುವಿನೊಳ್
ಕುನಿದಿರೆ ಪದ್ಮಾಸನದೊಳ್
ತನುವಿಗೆ ಯೋಗೀಂದ್ರನಾತಚಿಂತೆಯೊಳಿರ್ದಂ
ಎಳಗಿದನಾತಂ ಗೌರವ
ಮತಿಯದೆಯುಂ ದೀಪವರ್ತಿ ನಿಧಿಗಾಣುದುಮೊಲೆಣಗುವ ತೆಲದಿಂ ಮುನಿ ಕಣೆದೊಯ್ಯನೆ ನೋಡಿ ಪರಸೆ ಬಡೆಕಿಂತೆಂದಂ
ಯಶೋಧರ ಚರಿತೆ
00
Go
GO
02
೧೪
೧೦. ಇನ್ನೊಬ್ಬಳು ಬಿಳಿಯ ಬಟ್ಟೆಯನ್ನುಟ್ಟುಕೊಂಡು ಚಿಗುರ ಚಪ್ಪರದಲ್ಲಿ ಉಯ್ಯಾಲೆ ಯಾಡುತ್ತಾ ಮೆರೆಯುತ್ತಿದ್ದಳು. ಆಗ ತಾವರೆಯ ರತ್ನಮಂಟಪದಲ್ಲಿ ಬಾಲಚಂದ್ರನನ್ನು ತೊಟ್ಟಿಲಲ್ಲಿಟ್ಟು ತೂಗುವಂತೆ ಚೆಲುವು ಚೆಲ್ಲುತ್ತಿತ್ತು. ೧೧. ಯಶೋಮತಿಯೂ ಕುಸುಮಾವಳಿಯೊಂದಿಗೆ ಸರೋವರದಲ್ಲಿ ಓಲಾಡಿದನು ; ಚಿಗುರಿದ ಎಳೆಯ ಮಾವಿನ ಮರದಲ್ಲಿ ಉಯ್ಯಾಲೆಯಾಡಿದನು. ಪ್ರೇಮಾನುರಾಗದಿಂದ ಓಕುಳಿಯಾಡಿದನು. ಅನಂತರ ಒಂದು ಕಡೆ ವಿಲಾಸಗೋಷ್ಠಿಯಲ್ಲಿ ಕುಳಿತುಕೊಂಡನು. ೧೨. ಚಂಡಕರ್ಮನು ಎಂದಿನಂತೆ ತಿರುಗಾಡುತ್ತಾ ಆ ಉದ್ಯಾನದ ಕಡೆಗೆ ಬಂದನು. ಅವನಿಗೆ ಅಲ್ಲಿ ಮರವೊಂದರ ಬುಡದಲ್ಲಿ, ಅಕಂಪನರೆಂಬುವರು ಕುಳಿತುಕೊಂಡಿದ್ದುದು ಕಾಣಿಸಿತು. ಅವನಿಗೆ ಆಗ ಕುರುಡನು ಕೊಪ್ಪರಿಗೆಯನ್ನು ಕಂಡಂತಾಯಿತು. ೧೩. ಅವರು ಮನಸ್ಸನ್ನು ಕೇಂದ್ರೀಕರಿಸಿ ಹುಬ್ಬುಗಳ ನಡುವೆ ನಿಲ್ಲಿಸಿದ್ದರು. ಆ ಮನಸ್ಸಿನಲ್ಲಿ ವಾಯುಗಳನ್ನು ನಿಲ್ಲಿಸಿದ್ದರು. ಆ ವಾಯುವಿನಲ್ಲಿ ಇಂದ್ರಿಯಗಳನ್ನೆಲ್ಲ ನಿಲ್ಲಿಸಿದ್ದರು. ಅವರು ಪದ್ಮಾಸನ ಹಾಕಿ ಆತ್ಮಾನುಸಂಧಾನದಲ್ಲಿ ಮಗ್ನರಾಗಿದ್ದ ಯೋಗಿವರ್ಯರಾಗಿದ್ದರು. ೧೪. ಗೌರವವೆಂದರೇನೆಂದರಿಯದಿದ್ದರೂ ಚಂಡಕರ್ಮನು ತನ್ನಿಂದ ತಾನೇ ಅವರೆದುರು ತಲೆಬಾಗಿಸಿದನು. ನಿಧಿಯನ್ನು ಕಂಡ ಕೂಡಲೆ ದೀಪದ ಕುಡಿ ಆ ಕಡೆ ಬಾಗಿಕೊಳ್ಳುವುದಷ್ಟೆ! ಚಂಡಕರ್ಮನು ನಮಸ್ಕರಿಸಿದ ಹೊತ್ತಿಗೆ ಆ ಮುನಿಗಳು ಕಣ್ಣು ತೆರೆದರು! ಮಣಿದವನನ್ನು ನೋಡಿ ಹರಸಿದರು. ಚಂಡಕರ್ಮನು