________________
ನಾಲ್ಕನೆಯ ಅವತಾರ
ಎಲೆ ಸುಲಿದೆಡೆಗಳ್ ಕಣ್ ಕಸೆಲೆಯೆಡೆ ಗೆಂಟೊಡೆದು ಮೊನಸಿ ನನೆಕೊನೆದು ಮುಗುಛಲರ್ದು ಮಣಿದುಂಬಿಗಂ ತೆಂ~ ಬೆಲರ್ಗ೦ ಮುದ್ದಾದುವಲ್ಲಿ ಪೊಸಮಲ್ಲಿಗೆಗಳ್ ಪೊಂಬಾಟಿ ಚಾಮರಂ ಚಂದ್ರಂ ಬೆಳೊಡೆ ಕೇಳಿಶಿಖರಿ ಸಿಂಹಾಸನಮಾ~ ಯೆಂಬಿನೆಗಮಂಗಜಂ ಮಾವೆಂಬ ಕುಮಾರಂಗೆ ಪಟ್ಟಮಂ ಕಟ್ಟಿಸಿದಂ ಕಡೆಗಣ್ಣಲ್ ಕೇದಗೆಯಂ ಪಡೆದುವು ಮಲ್ಲಿಗೆಗೆ ಸೆಳುಗುರ್ ಸಂಪಗೆಯಂ ಪಡೆದುವು ಪಾದರಿಗೆನೆ ಸಂಗಡರಿಂದಲರ್ಗೊಯ್ಯ ವಾರವನಿತೆಯರೆಸೆದರ್ ಮಳಯಜದ ಮೋಲೆಯ ಕುಂಕುಮದಳಕದ ಕತ್ತುರಿಯ ಬಣ್ಣವಣಿಗೆ ಕೊಳದೊಳ್ ತಳರ್ದಿರೆ ಜಲರುಹಮುಖಿಯರ್' ಜಳಕೇಳಿಯ ನೆವದಿ ದೂಳಿಚಿತ್ರಂ ಬರೆದರ್ ತೆರೆಮುಗಿಲನಡರ್ವ ವಿದ್ಯಾಧರಿಯೆಂಬಿನಮೊರ್ವಳೇಟೆ ಕೃತಕಾದ್ರಿಯನೇಂ ದೊರೆಯಾದಳೊ ರತಿನಾಥನ
ಕರುಮಾಡದ ಮದನಮೋಹಿನೀ ಪುತ್ರಿಕೆವೊಲ್ ೫. ಎಲೆಯುದುರಿದ ಸ್ಥಳಗಳಲ್ಲಿ ಕಣ್ಣು ಕಣ್ಣುಗಳಲ್ಲಿ, ಎಲೆಯ ಎಡೆಯಲ್ಲಿ ಮಲ್ಲಿಗೆಯ ಬಳ್ಳಿ ಗಂಟೊಡೆಯಿತು. ಅದೇ ಗಂಟು ಮೊನಚಾಗಿ ನನೆಕೊನೆವೋಯಿತು. ಆ ಬಳಿಕ ಮುಗುಳು ಕಾಣಿಸಿಕೊಂಡು ಅದೇ ಅರಳತೊಡಗಿತು. ಈ ಹೊಸಹೂಗಳು ಮರಿ ದುಂಬಿಗಳಿಗೂ ದಕ್ಷಿಣಾನಿಲಕ್ಕೂ ಮುದ್ದಾದವು. ೬. ಮಾವೆಂಬ ರಾಜಕುಮಾರನಿಗೆ ಕಾಮನು ಪಟ್ಟ ಕಟ್ಟಿಸಿದನು. ಆಗ ಹೊಂಬಾಳೆ ಚಾಮರವಾಗಿ ಬೀಸಿತು. ಎತ್ತಿದ ಬೆಳ್ಕೊಡೆಯಾಗಿ ಚಂದ್ರನು ಶೋಭಿಸಿದನು. ನರ್ತಿಸುವ ನವಿಲೇ ಸಿಂಹಾಸನವಾಗಿ ಪರಿಣಮಿಸಿತು. ೭. ಅಲ್ಲಿ ವಾರವನಿತೆಯರು ಹೂ ಕೊಯ್ಯುವ ಸೊಗಸೇ ಸೊಗಸು. ಅವರ ಕಡೆಗಣ್ಣುಗಳು ಮಲ್ಲಿಗೆಗೆ ಕೇದಗೆಯನ್ನು ಜತೆಗೊಳಿಸಿದವು, ಪಾದರಿಗೆ ಅವರ ಸೆಳ್ಳುಗುರು ಸಂಪಗೆಯನ್ನು ಒಂದುಗೂಡಿಸಿತು. ೮. ಕೆಲವರು ಕಮಲಮುಖಿಯರು ಅಲ್ಲಿ ನೆವಕ್ಕೆ ನೀರಾಟವಾಡುತ್ತಾ ಇದ್ದರು. ನಿಜವಾಗಿ ನೋಡಿದರೆ ಅವರು ಕುಚಗಳಿಗೆ ಲೇಪಿಸಿಕೊಂಡ ಗಂಧ, ಮುಂಗುರುಳಿಗೆ (ಬೈತಲೆಗೆ) ಹಚ್ಚಿದ ಕುಂಕುಮ, ಕೆನ್ನೆಗೆ ಹಾಕಿದ ಕಸ್ತೂರಿಯ ಚಿತ್ರಾಲಂಕಾರ - ಇವುಗಳ ಬಗೆಬಗೆಯ ಬಣ್ಣಗಳಿಂದ ನೀರ ಮೇಲೆ ರಂಗವಲ್ಲಿಯನ್ನು ಬಿಡಿಸುವಂತೆ ಭಾಸವಾಗುತ್ತಿತ್ತು. ೯. ತೆರೆದ ಮುಗಿಲನ್ನೇರಿ ಹೋಗುವ ವಿದ್ಯಾಧರಿಯಂತೆ ಒಬ್ಬಳು ಅಲ್ಲಿದ್ದ ಕೃತಕಗಿರಿಯನ್ನೇರಿದಳು. ಆಗ ಅವಳು ಕಾಮೇಶ್ವರನ ಅರಮನೆಯ ಮದನಕ್ಕೆ ಬೊಂಬೆಯಂತೆ ಬಹಳ ಚೆಲುವಾಗಿ ತೋರುತ್ತಿದ್ದಳು.