________________
೬೬
ಕುದಿರೊಳ್ ಕಳ್ಳನನಿಕ್ಕಿಸಿ ಸೊದೆಯಿಟ್ಟರೆ ಬಳಿದು ಬಳಕ ತಂದೊಳಗಂ ನೋಡಿದೆನಾತ್ಮನಿಲ್ಲ ತನುವಿ ರ್ಪುದು ಬೇಕೆಂಬಾತನಂ ನೆಲಂ ನುಂಗಿದುದೋ
ತೂಗಿಸಿ ತೊಲೆಯೊಳ್ ಬಾಯಂ
ಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂ ತೂಗಿದೊಡೆ ಕುಂದದಾತ್ಮವಿ ಭಾಗಂ ಬೇರೆಲ್ಲ ಜೀವನೆಂತುಂ ದೇಹಂ
ಎಂದೊಡೆ ದಂಢಧರಂಗಿಂ
ತಂದರ್ ಗುರುಗಳ ವಿಮೋಹಮೃಗಮಂ ಮಿಥ್ಯಾ ಕಂದರದೊಳ್ ಬೆದಟ್ಟುವ
ದುಂದುಭಿರವದಂತಿರೊಗೆಯೆ ಗಂಭೀರರವಂ
ತಲೆದೊಡೆ ಕಡಿದೊಡೆ ಸೀಳ್ಕೊಡೆ
ಪೊಲಮಡುವುದೆ ಕಿಚ್ಚು ಕಾಷ್ಠದಿಂ ಪೊಸೆಯಲೊಡಂ ಪೊಮಡುವುದಂತೆ ಜೀವಂ
ಪೆಜತೊಡಲಿಂ ತೋಲುಗುಂ ವಿವೇಕಕ್ರಿಯೆಯಿಂ
ಕುದಿರೊಳಗಿರ್ದೂದಿದ ಶಂ
ಖದ ದನಿ ನಿಶ್ಚಿದ್ರಮಾದೊಡಂ ಪೊಣದ ಶಂ ಖದಿನನಮಲ್ಲದೇಂ ಪೊ
ಣಿದ ನಾದಂ ಕಾಯದಿಂದ ಜೀವನುಮನ್ಯಂ
ಯಶೋಧರ ಚರಿತೆ
OG
೨೧
وو
೨೩
೨೪
ದೊರೆಯಲಿಲ್ಲ. ಆತ್ಮನಿದ್ದಾನೆಂದಾದರೆ ಅವನೆಲ್ಲಿಗೆ ಹೋದನು ? ೨೦. ಒಬ್ಬ ಕಳ್ಳನನ್ನು ಹಗೇವಿನಲ್ಲಿ ತಳ್ಳಿ ಮೇಲೆಲ್ಲ ಸುಣ್ಣವನ್ನು ಸುರಿದು ಬಳಿದು ಆಮೇಲೆ ತೆರೆದು ನೋಡಿದೆ. ಒಳಗೆ ಎಲ್ಲಿಯೂ ಆತ್ಮನಿಲ್ಲ ; ದೇಹ ಮಾತ್ರ ಎಲ್ಲಿಗೂ ಹೋಗಲಿಲ್ಲ. ದೇಹಕ್ಕಿಂತ ಭಿನ್ನನೆನ್ನಿಸಿದ ಆ ಆತ್ಮವನ್ನು ನೆಲವು ನುಂಗಿತೇ ? ೨೧. ಇನ್ನೊಬ್ಬ ಕಳ್ಳನನ್ನು ತಕ್ಕಡಿ ಯಲ್ಲಿಟ್ಟು ತೂಗಿದೆ. ಅನಂತರ ಅವನ ಮೂಗು ಬಾಯಿಗಳನ್ನು ಬಲವಾಗಿ ಒತ್ತಿಟ್ಟು ಕೊಲೆ ಮಾಡಲಾಯಿತು. ಅನಂತರ ಅವನ ದೇಹವನ್ನು ತೂಗಿ ನೋಡಿದಾಗ ತೂಕ ವೇನೂ ಕಡಿಮೆಯಾಗಲಿಲ್ಲ. ಎಂದ ಮೇಲೆ ಆತ್ಮವೆಂಬ ಪ್ರತ್ಯೇಕ ವಿಭಾಗವೇ ಇಲ್ಲ.ದೇಹ ಮಾತ್ರ ಇರುತ್ತದೆ.” ೨೨. ತಳಾರನಾದ ಚಂಡಕರ್ಮನ ಮಾತನ್ನೆಲ್ಲ ಕೇಳದ ಮೇಲೆ ಗುರುಗಳು ಮಾತಿಗಾರಂಭಿಸಿದರು. ಅವರ ಗಂಭೀರಧ್ವನಿ ಮಿಧ್ಯೆಯೆಂಬ ಕಂದರದಲ್ಲಿದ್ದ ವಿಮೋಹ (ಅಜ್ಞಾನ)ವೆಂಬ ಮೃಗವನ್ನು ಹೆದರಿಸಿ ಓಡಿಸುವ ದುಂದುಭಿಯ ಧ್ವನಿಯಂತೆ ಮೊಳಗಿತು. ೨೩. ಕಟ್ಟಿಗೆಯೊಂದನ್ನು ತೆಗೆದುಕೊಂಡು ಕೊಚ್ಚು ; ಕಡಿ ; ಸೀಳು, ಹೇಗೆ ಮಾಡಿದರೂ ಅದರಿಂದ ಬೆಂಕಿ ಹೊರಡುವುದಿಲ್ಲ. ಅದನ್ನು ತಿಕ್ಕಿದಾಗ ಮಾತ್ರ ಅದರಿಂದ ಅಗ್ನಿ ಉದ್ಭವಿಸುತ್ತದೆ. ಹಾಗೆಯೇ ಜೀವವೇ ಬೇರೆ. ಅದು ವಿವೇಕ ಕ್ರಿಯೆಯಿಂದ ದೇಹಕ್ಕಿಂತ ಭಿನ್ನವೆಂದು ಕಂಡುಬರುತ್ತದೆ. ೨೪, ಹಗೇವಿನೊಳಗೆ ಇದ್ದುಕೊಂಡು ಶಂಖವನ್ನು ಊದಿದರೆ, ಆ ಶಂಖದ ಧ್ವನಿ ಹಗೇವಿನಲ್ಲಿ ಯಾವ ಬಿರುಕಿಲ್ಲದಿದ್ದರೂ, ಹೊರಗೆ ಹೊಮ್ಮುವುದಿಲ್ಲವೆ ? ಆ ಧ್ವನಿ ಶಂಖದಿಂದ ಬೇರೆಯ ಅಲ್ಲವೆ ? ಹಾಗೆಯೇ