________________
೫೮
ಯಶೋಧರ ಚರಿತೆ
ಇತ್ತಲ್ ನೃಪನಂದೆಚೊಡೆ ಸತಾಡು ಕಳಿಂಗದಲ್ಲಿ ಕೋಣನ ಮೆಯ್ಯಂ ಪೆರೆ ಬೆನ್ ಮುಆವಂತಿರೆ ಪಿತ್ತಳೆಯಂ ಪೇಟೆ ತಂದು ಬಿಟ್ಟ೦ ಪರದಂ ನೀರಡಸಿ ಕುಡಿದು ಸಿಂಪೆಯ ನೀರೊಳಗರೆಮುಲುಗಿ ಮಗ್ಗುಲಿರ್ದುದು ಮುನೀರಂ ನೀಲಾಚಲದಿಂ ಸಾರಂಗಟ್ಟಿದವೊಲಿರೆ ಬುಲ್ಲು ಲುಲಾಯಂ ಆಯೆಡೆಗೆ ನೀರುಣಲ್ಲರೆ ಜಾಯಿಲಮರಸನ ಪಸಾಯಿತಂ ಕೊಡೆರಡುಂ ಕೊಯೆ ಸೆಳೆದತ್ತಮಹಿಷ ನ್ಯಾಯಂ ನಿಲೆ ಕೊಂದುದಂತದಂ ಕೇಳರಸಂ ಕಡೆಯೋಳ್ ಕೋಣನ ಪೊರ್ಕುಳಿ ಗಿಡುವಿಗೆ ಮಿತ್ತೆಂಬ ತಂದೆ ಪರದನ ಬೀಡಂ ಬಿಡೆ ಸೂರೆಗೊಂಡು ತನ್ನಂ ಪಿಡಿತರಿಸಿ ವಿಚಿತ್ರಮಪ್ಪ ಕೋಲೆಯಂ ಕೊಂದಂ ಸೊಡರಿಂ ಮುಡುಪಿಂದಂ ಪಿಂತಣ ಮುಂತಣ ಕಾಲ್ಕಳಲ್ಲಿ ಬೆಟ್ಟಿಸಿ ದಸಿಯಂ ನೆಣಮುರ್ಚೆ ಬೆಂಕಿಯಿಂ ಕೆಳ ಗಣ ಮೆಯ್ಲಿಂದುರುಪಿ ಬರಿಯ ಬಾಡಂ ತೆಗೆದು
೬೯
ಅವನ ಕಷ್ಟಗಳಿಗೆ ಕೋಡು ಮೂಡಿದಂತೆ೫೩ ಈ ಯೋಚನೆಯೂ ಅವನಿಗೆ ತಲೆದೋರಿತು ; ಸಂಕಟ ಹೆಚ್ಚಿತು. ೬೫. ಇತ್ತ ಯಶೋಮತಿಯ ಬಾಣದ ಪೆಟ್ಟಿನಿಂದ ಸತ್ತ ಆಡು ಕಳಿಂಗದಲ್ಲಿ ಕೋಣನ ದೇಹವನ್ನು ಪಡೆಯಿತು. ಅದು ಒಬ್ಬ ವ್ಯಾಪಾರಿಯ ವಶವಾಯಿತು. ಒಂದು ದಿನ ಅವನು ಅದರ ಬೆನ್ನ ಮೇಲೆ ಹೊರಲಾರದಷ್ಟು ಹಿತ್ತಾಳೆಯ ಹೊರೆಯನ್ನು ಹೇರಿ ತಂದು ಬಳಿಕ ಹೊರೆಯಿಳಿಸಿ ದಡದಲ್ಲಿ ಅದನ್ನು ಬಿಟ್ಟನು. ೬೬. ಅದಕ್ಕೆ ಬಾಯಾರಿಕೆ ತೀವ್ರವಾಯಿತು. ಹತ್ತಿರದಲ್ಲೇ ಇದ್ದ ಸಿಂಪಾನದಿಯ ನೀರನ್ನು ಕುಡಿದು ಅದು ಅಲ್ಲೇ ನೀರಲ್ಲಿ ಅರ್ಧ ಮುಳುಗಿ ಮಲಗಿಕೊಂಡಿತು. ಆಯಾಸ ಗೊಂಡ ಕೋಣವು ಕಡಲಿಗೆ ನೀಲಾಚಲದ ಕಟ್ಟೆ ಕಟ್ಟಿದಂತೆ ಕಾಣುತ್ತಿತ್ತು. ೬೭. ಅರಸನ ಅಚ್ಚುಮೆಚ್ಚಿನ ನಾಯಿಯೂ ಅಲ್ಲಿಗೆ ನೀರು ಕುಡಿಯಲು ಬಂತು ಈ ಕೋಣವು ಅದನ್ನು ತನ್ನೆರಡೂ ಕೋಡುಗಳಿಂದ ತಿವಿದು ಕೊಂದೇಬಿಟ್ಟಿತು. ಇದು ಅಶ್ವಮಹಿಷ ನ್ಯಾಯದಂತೆ ಪರಿಣಮಿಸಿತು. ರಾಜನಿಗೆ ಈ ಸುದ್ದಿ ತಿಳಿಯಿತು. ೬೮. ಕೋಣನ ಕದನ ಕುತೂಹಲವು ಗಿಡಕ್ಕೆ ಮೃತ್ಯು ಎಂಬಂತೆ ರಾಜನು ಆ ವ್ಯಾಪಾರಿಯ ಬೀಡನ್ನೆಲ್ಲ ಸೂರೆ ಮಾಡಿದನು. ಆ ಕೋಣವನ್ನು ಹಿಡಿತರಿಸಿದನು ; ವಿಚಿತ್ರವಾದ ರೀತಿಯಲ್ಲಿ ಅದನ್ನು ಕೊಂದನು. ೬೯. ಅದರ ಹಿಂದಣ ಮತ್ತು ಮುಂದಣ ಕಾಲುಗಳಿಗೆ ದಸಿಯನ್ನು ನಾಟಿಸ ಲಾಯಿತು. ಅದರ ನೆರವಿನಿಂದ ಅಡಿಮೇಲಾಗಿ ತೂಗಾಡಿಸಿ ಕೆಳಬದಿಯಿಂದ ದೀಪದ ಜ್ವಾಲೆಯನ್ನು ಕೋಣನ ಹೆಗಲಿನ ಭಾಗಕ್ಕೆ ಹಿಡಿದು ಅಷ್ಟು ಭಾಗವನ್ನು ಮಾತ್ರ ಉರಿಸಲಾಯಿತು. ಅಲ್ಲಿಂದ ಕೊಬ್ಬು ಹೊರಗೆ ಸ್ರವಿಸತೊಡಗಿತ್ತು. ಅಂತಹ