________________
೫೬
ಯಶೋಧರ ಚರಿತೆ
ಇಸೆ ಪಸುಮಟೆ ಯೋನಿಮುಖ ಪ್ರಸವಕ್ಕಲಸಿದವೊಲೇಜ ಬಾಯಿಂ ತಾಯೊ೦ದಸುವೆರಸು ಬಿರ್ದುದಂ ರ ಕ್ರಿಸಲಿಂ ಮಾದರಂಗೆ ಕರುಣದಿನರಸಂ
೬
ಒರ್ಮೆ ಯಶೋಮತಿ ಮೃಗಯಾ ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂದೆರ್ಮೆಯ ಪೋರಿಯನಿಕ್ಕಿದನೂರ್ಮಾರಿಗೆ ಮತ್ತಮದನೆ ಮಹಳಕಿತ್ತಂ
೫೭
ಅದಜಡಗು ಮುಗ್ಗಿ ಪುಟು ಪತಿದೊಡಾಜಲ್ ಪರಪೆ ಕಾಗೆಯುಂ ನಾಯುಂ ಮುಟ್ಟಿದೊಡದನೆ ಶುದ್ಧಮಂ ಮಾಬೀದನಿಂತೆಂದೊದಿದರ್ ಪುರೋಹಿತರೆಲ್ಲಂ
eses
ಶುಚಿರಜರಜಸಿ ಭವೇನ್ಮಾಸ್ ಪಚನೇ ಶೃಕ್ಷ ಪ್ರದೋಷವೆಂಬುದು ವೇದ ಪ್ರಚುರಮೆನೆ ಕೇಳು ನೃಪನಾ ವಚನಮುಮಂ ನಂಬಿ ನೆರೆದ ಪೊಲೆಯರ ಪೋಂತಂ
೫೯
ಯಶೋಮತಿ ಬೇಟೆಗೆ ಹೋಗಿದ್ದನು. ಅವನಿಗೆ ಅಲ್ಲಿ ಒಂದು ಪ್ರಾಣಿಯೂ ಸಿಕ್ಕಲಿಲ್ಲ. ಮಾಂಸ ಬೇಕಾಗಿದ್ದುದರಿಂದ ಎದುರು ಕಾಣಸಿಕ್ಕಿದ ಗರ್ಭಿಣಿಯಾದ ಆಡನ್ನೆ ಬಾಣ ಬಿಟ್ಟು ಕೊಂದಿಕ್ಕಿದನು. ೫೬. ಯೋನಿಯ ಮುಖಾಂತರ ಜನ್ಮತಾಳುವುದು ಉಚಿತವಲ್ಲವೆಂಬಂತೆ ಆ ಎಳೆಯ ಹೋತವು ಬಾಣ ತಾಗಿದ ತಾಯಿಯ ಗಾಯದ ಮುಖಾಂತರ ಕೆಳಕ್ಕೆ ಜಗುಲಿತು. ಅದರ ತಾಯಿಯ ಜೀವವೂ ತೊಲಗಿತು. ರಾಜನಿಗೆ ಆಡಿನ ಮರಿಯ ಮೇಲೆ ಕರುಣೆಯುಂಟಾಯಿತು. ಅವನು ಅದನ್ನು ರಕ್ಷಿಸುವಂತೆ ಮಾದರನೊಬ್ಬನಿಗೆ ಒಪ್ಪಿಸಿದನು. ೫೭. ಯಶೋಮತಿಗೆ ಮತ್ತೊಮ್ಮೆ ಬೇಟೆಯಾಡುವ ಅಭಿಲಾಷೆ ತೀವ್ರವಾಯಿತು. ಅವನು ಮಾರಿಗೆ ಹರಕೆ ಹೇಳಿ ಮುಂಬರಿದನು. ಅಲ್ಲಿ ಅವನಿಗೆ ಜಿಂಕೆಯೊಂದು ಸಿಕ್ಕಿತು. ಅನಂತರ ಅವನು ಒಂದು ಕೋಣವನ್ನು ಕೊಂದು ಊರ ಮಾರಿಗೆ ಬಲಿಕೊಟ್ಟನು. ಅದನ್ನೆ ಮಹಾಲಯಕ್ಕಾಗಿ ಕೊಟ್ಟನು. ೫೮. ಆದರೆ ಅದರ ಮಾಂಸವು ಮುಗ್ಗಿ ಅದರಲ್ಲಿ ಹುಳು ಹುಟ್ಟಿಕೊಂಡಿತು. ಆದುದರಿಂದ ಅದನ್ನು ಒಣಗಿಸುವುದಕ್ಕಾಗಿ ಬಿಸಿಲಲ್ಲಿ ಹರಡಲಾಯಿತು. ನಾಯಿ ಕಾಗೆಗಳು ಬಂದು ಆ ಮಾಂಸವನ್ನು ಮುಟ್ಟಿ ಶುದ್ದಿ ಕೆಡಿಸಿದುವು. ಶುದ್ದೀಕರಣ ವಿಧಾನವನ್ನು ಪುರೋಹಿತರು ತಿಳಿಸಿದರು. ೫೯. “ನಾಯಿ ಮುಟ್ಟಿದ ದೋಷವುಂಟಾದಲ್ಲಿ ಮಾಂಸ ಪಚನಮಾಡುವಾಗ ಆಡಿನ ರಜಸ್ಸನ್ನು ಹಾಕಿದರೆ ಅದು ಶುದ್ಧವಾಗುತ್ತದೆ, ಎಂದು ವೇದದಲ್ಲಿ ಸ್ಪಷ್ಟವಾಗಿ ಇದೆ”. ಈ ಮಾತನ್ನು ಕೇಳಿದ ರಾಜನು ಇದನ್ನು