________________
ಮೂರನೆಯ ಅವತಾರ
ಉಳಿದ ಕಡೆ ಜೀವಮೇಜು
ಟೆಯುತ್ತಿರೆ ನೀರೊಳಿರಿಸಿ ಜೀವಶ್ರಾದ್ಧಕುಣಿದಿರ್ದ ಮಾಜನಂಗಳ್ ಕಳೆಯುಂಡಾಪೋಶಿಪಲ್ಲಿ ನೆನೆದುದು ತನ್ನ ಮೀನಾಗಿ ಸಾಯುತಿರ್ದಪನಾನೀ ಪಾರ್ವರ್ ಯಶೋಧರಂ ಸುಖದಿಂದಿ ರ್ಕಾ ನಾಕದೊಳೆಂದೂಳಪರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ ಎನುತುಂ ಜಾತಿಸರನಪ್ರನಿಮೇಷಂ ಜೀವಿತಾಂತ್ಯದೊಳ್ ಮುನ್ನೆಗೆದಾಡಿನ ಬಸಿಲ್ ಬಂದುದು ಪೋರಿತಿನ ರೂಪಿಂ ಬೆಳೆದು ಬಟಿಕ ಮದನೋನ್ಮತಂ ಬೆದೆಯಾದ ತಾಯನೇಟಿಇದು ಸೋರ್ಕಿದ ಗೂಳಿ ತಾಯನೇಚಿತ್ತೆಂಬಂದದೆ ಮತ್ತದೊಂದು ಬಸ್ತಕಮದನಿಕೆಯಲ್ ಸತ್ತು ಪೊಕ್ಕುದಜೆಯೊಳ್ ಜೀವಂ ಅಲ್ಲಿಯೆ ಪೋಂತಪುದುಮದು ಮೆಲ್ಲನೆ ತನೆ ತೀವಿ ಸುಳೆಯೆ ಕಂಡೊರ್ಮೆ ಮಹೀ ವಲ್ಲಭನುಂ ಬೇಂಟೆಯೊಳಡಗಿಲ್ಲದೆ ಬರುತೆಚ್ಚನಿದಿರೊಳಜಗರ್ಭಿಣಿಯಂ
೫೫ ಗ್ರಹಿಸಿಕೊಂಡು ಅದನ್ನು ಒಂದು ಕಡೆಯಿಂದ ಅಡುಗೆ ಮಾಡಿಸಿದನು.೨ ೫೧. ಜೀವಶ್ರದ್ದಾಕ್ಕಾಗಿ ಅದನ್ನು ನೀರಿನಲ್ಲಿರಿಸಿ ಬೇಯಿಸುತ್ತಾ ಇದ್ದಾಗ ಅದರ ಜೀವ ಏರುತ್ತಲೂ ಇಳಿಯುತ್ತಲೂ ಇತ್ತು. ಶ್ರಾದಕ್ಕೆ ಬಂದ ಮಹಾಜನಗಳು ಹೊಟ್ಟೆ ತುಂಬ ಊಟ ಮಾಡಿ ಉತ್ತರಾಪೋಷಣವನ್ನು ತೆಗೆದುಕೊಳ್ಳುತ್ತಿದ್ದರು. ಆಗ ಆ ಮೀನು ತನ್ನ ವಿಷಯವನ್ನು ನೆನೆದುಕೊಂಡಿತು : ೫೨. “ನಾನಿಲ್ಲಿ ಮತ್ತ್ವ ಜನವನ್ನು ಪಡೆದು ಸಾಯುತ್ತಾ ಇದ್ದೇನೆ ; ಈ ಬ್ರಾಹ್ಮಣರು ಯಶೋಧರನು ಸ್ವರ್ಗದಲ್ಲಿ ಸುಖವಾಗಿರಲಿ !” ಎಂದು ಒದರುತ್ತಾ ಇದ್ದಾರೆ ! ಅವರ ಮಾತನ್ನು ಈ ಭೂಪತಿಯೂ ನಂಬಿಕೊಂಡಿ ದ್ದಾನೆ. ಅಯೋ ವಿಧಿಯೇ !” ೫೩. ಪೂರ್ವಜನ್ಮದ ಸ್ಮರಣೆಯಿಂದ ಮೀನು ಈ ರೀತಿ ತನ್ನಲ್ಲೇ ಹೇಳಿಕೊಳ್ಳುತ್ತಾ ಜೀವವನ್ನು ಕಳೆದುಕೊಂಡಿತು. ಚಂದ್ರಮತಿ ಈ ಮೊದಲೇ ಆಡಾಗಿ ಜನಿಸಿದ್ದಳಷ್ಟೇ. ಆ ಮೀನು ಆ ಆಡಿನ ಗರ್ಭದಲ್ಲಿ ಹೋತವಾಗಿ ಹುಟ್ಟಿತು, ಬೆಳೆಯಿತು. ಸಾಕಷ್ಟು ಪ್ರಾಯವಾದಾಗ ಈ ಹೋತವು ಕಾಮದಿಂದ ಸೊಕ್ಕಿತು. ೫೪. ತಾಯಿಗೂ ಬೆದೆಯ ಕಾಲವಾಗಿತ್ತು. ಸೊಕ್ಕಿದ ಹೋತವು ಅದಕ್ಕೇ ಹತ್ತಿತು. “ಸೊಕ್ಕಿದ ಗೂಳಿ ತಾಯನ್ನು ಹತ್ತಿತು” ಎಂಬಂತಾಯಿತು ನಡೆದ ಘಟನೆ ! ಆಗ ಇನ್ನೊಂದು ಹೋತವು ಬಂದು ಈ ಹೊತಕ್ಕೆ ಹಾದು ಇದರ ಜೀವವನ್ನೆ ತೆಗೆಯಿತು. ಸತ್ತ ಈ ಆಡು ತಾಯಿಯ ಬಸಿರನ್ನೇ ಸೇರಿಕೊಂಡಿತು. ೫೫. ಅಲ್ಲಿ ಹೋತವಾಗಿ ಬೆಳೆಯುತ್ತಾ ಇತ್ತು. ಬಸಿರು ಮೆಲ್ಲಮೆಲ್ಲನೆ ತುಂಬಿ ಬೆಳೆಯಿತು. ತಾಯಿ ಆಡು ಮೆಲ್ಲನೆ ಸಂಚರಿಸುತ್ತಾ ಇತ್ತು.