________________
೫೪.
ಯಶೋಧರ ಚರಿತೆ
ಉರಗಿಯನೆಮ್ ಪಿಡಿದೊಡದಂ ಕುರಂಗರಿಪು ಬೆಕ್ಕು ಕೊಕ್ಕನಂ ತವ ಪಿಡಿವಂ ತಿರೆ ಪಿಡಿದುದು ಪರಚಿಂತಾ ಕರ ಏಹಿ ಎನಿಪ್ಪ ಸೂಕ್ತಿ ತಪ್ಪದಮೋಘಂ ಮೀನಾದುದೆಯ್ಯಮ್ಮಗಮುಜೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್ ತಾನಲ್ಲಿ ಮೊಸಳೆಯಾದ ತಾ ನಾಗನುಮಾಗಿ ಬೆಳೆಯ ಮತ್ತೊಂದು ದಿನಂ ನದಿ ಕಣ್ಣೆದಂತೆ ಪೊಳಂ ಕಿದ ಮೀನಂ ಮೊಸಳೆ ಪಾಯ ನರಪತಿಯ ವಿನೋದದ ಗುಜ್ಯ ಸಿಕ್ಕೆ ಪಿಡಿದತದನಧಿಪತಿ ಜಾಲಗಾಲಿರಿಂ ತೆಗೆಯಿಸಿದಂ
ಪಲವಂದದ ನಿಗ್ರಹದಿಂದ ಕೊಲಿಸಿದೊಡಾ ಮೊಸಳೆ ಸತ್ತುಮದುವೆ ಬಟಿಕ್ಕಾ ಪೊಲಗೇರಿಯಾಡಿನೊಡಲೊಳ್ ನೆಲಸಿ ಬಲಿಕೊಯ್ಯನೊಗೆದುದಾಡಿನ ರೂಪಿಂ
೫೦
ಮತ್ತೊರ್ಮೆ ಜಾಲದೊಳ್ ಸಿಕಿತ್ತೆಯಾಗಿರ್ದ ಮೀನದ ಶ್ರಾದಕ್ಕತ್ಯುತ್ತಮ ಲೋಹಿತಮತ್ಮ ಮ
ನುತ್ತಮಮಂದೊಂದು ಕಡೆಯಿನಡಿಸಿದನರಸಂ ಹೆಚ್ಚಿದ ಹಗೆಯಿಂದ ಹಾವನ್ನು ಕೊಂದು ತಿಂದಿತು. ಎತ್ತು ಹುಲ್ಲ ಹಗ್ಗವನ್ನು ಮೇಯುವುದು ಇದೇ ರೀತಿ. ೪೬. ಹಾವನ್ನೇನೋ ಮುಳ್ಳು ಹಂದಿ ನುಂಗಿತು. ಅದನ್ನು ಮಾತ್ರ ಹುಲಿ ಹಿಡಿಯಿತು. ಬೆಕ್ಕು ಕೊಕ್ಕರೆಯನ್ನು ಹಿಡಿಯುವುದೂ ಹೀಗೆಯೆ, ಪರರಿಗೆ ದುಃಖವುಂಟು ಮಾಡುವವನನ್ನು ವಿಧಿ ತನ್ನ ಬಳಿಗೆ ಕರೆಯುವುದು ಸಹಜವೇ ಆಗಿದೆ. ೪೭. ಮುಳ್ಳು ಹಂದಿ ಉಜ್ಜಯನಿಯಲ್ಲಿ ಶೋಭಿಸುತ್ತಿದ್ದ ಸಿಂಪಾನದಿಯಲ್ಲಿ ಮೀನಾಗಿ ಹುಟ್ಟಿತು. ಹಾವಾಗಿದ್ದುದು ಅದೇ ಹೊಳೆಯಲ್ಲಿ ಮೊಸಳೆಯ ಜನ್ಮವನ್ನು ಪಡೆದು ಬೆಳೆಯುತ್ತಾ ಇತ್ತು. ೪೮. ಒಂದಾನೊಂದು ದಿನ ನದಿ ಕಣ್ಣು ಮಿಟುಕಿಸಿತೆಂಬಂತೆ ಆ ಮೀನು ಪಳಕ್ಕನೆ ಮೇಲೆ ಚಿಮ್ಮಿತು. ಅದನ್ನು ಕಂಡು ಮೊಸಳೆ ಅದರ ಕಡೆಗೆ ನುಗ್ಗಿತು. ಆಗ ಅಲ್ಲಿದ್ದ ಯಶೋಮತಿಯ ವಿದೂಷಕನಾದ ಕುಳ್ಳನು ಅದಕ್ಕೆ ಸಿಕ್ಕಿಕೊಂಡನು. ರಾಜನು ಬಲೆಗಾರರಿಂದ ಆ ಮೊಸಳೆಯನ್ನು ಹೊರಕ್ಕೆಳೆಯಿಸಿದನು. ೪೯. ಹಲವು ಬಗೆಯ ಚಿತ್ರಹಿಂಸೆಗಳಿಂದ ಆ ಮೊಸಳೆಯನ್ನು ಕೊಲ್ಲಲಾಯಿತು. ಹೀಗೆ ಸತ್ತ ಮೊಸಳೆ ಅದೇ ಊರಿನ ಹೊಲಗೇರಿಯಲ್ಲಿ ಒಂದು ಆಡಿನ ಬಸಿರನ್ನು ಸೇರಿಕೊಂಡು, ಅಲ್ಲಿಯೇ ಬೆಳೆದು ಆಡಿನ ರೂಪದಿಂದ ಇಳೆಗಿಳಿಯಿತು. ೫೦, ಮತ್ತೊಂದು ದಿನ, ಮುಳ್ಳು ಹಂದಿಯಾಗಿದ್ದುದು ಮೀನಾಗಿ ಹುಟ್ಟಿದ್ದು, ಬಲೆ ಬೀಸಿದಾಗ ಅದಕ್ಕೆ ಸಿಕ್ಕಿಕೊಂಡಿತು. ಅದನ್ನು ಕಂಡ ರಾಜನು ಅದುವೇ ಶ್ರಾದಕ್ಕೆ ಶ್ರೇಷ್ಠವಾದ ಕೆಂಪು ಮೀನೆಂದು