________________
ಮೂರನೆಯ ಅವತಾರ
ಆನ್ ಬೆಂದೆನೆಂದು ನವಿಲಂ
ಪಾಣೋ ಕನಡಸಿ ಪೊಯೆ ಮೇಗಣ ನೆಲೆಯಿಂ ದಂ ಬಿರ್ದುದು ಪಚ್ಚೆಯ ಪದಕಂ ಬೀಳ್ಕೊಂತಿರೆ ಸುಧಾಂಶುಬಿಂಬದ ಕೊರಲಿಂ
ಅರಸನುಮಾಗಳೆ ನೆತ್ತದ ಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂದರೆ ಮತ್ತು ಪಿಡಿದುದಂಬಾ
ಚರಿ ಕುಕ್ಕುರಿ ನೊಂದು ಬಿಟ್ಟಿ ನಂದನಚರನಂ
ಮತ್ತೆ ನೃಪಂ ನಾಮ್ ತಿಂದುದು ನೃತ್ಯಚಮತ್ಕಾರನಂ ಮಯೂರನನೆಂದಾ ನೆತ್ತದ ಮಣೆಯಿಂದಿದೊಡೆ ನೆತ್ತಿ ಪಿಸುಳತ್ತು ಸತ್ತುವಂತಾ ಎರಡುಂ
ಮಲಗಿದನಿಳೇಶನಾ ಎರ
ಡು ಸಾವಿಂ ತಂದೆ ತಾಯ್ದಿರದಂತಿರೆ ಕ ಇಳಯದೊಡಂ ಕರುಳಯದೆ ಮುಗಿಸದಿರ್ಪುದೆ ಭವಾಂತರವ್ಯಾಮೋಹಂ
ಆ ವಿಂಧ್ಯನಗದೊಳಾ ನಾಯ್
ಪಾವಾಯ್ತಾ ನವಿಲುಮೆಯ್ಯಮ್ಮಗಮಾಯ್ತಾ ಎಮ್ ಪಾವಂ ಪಗೆಮಿಗೆ ತಿಂದುದು
ಮೇವಂತಿಗೆ ಪುಲ್ಲಸರವಿಯಂ ಪುಲಿ ಗೋಣಂ
92
లం
೪೨
೪೩
೪೪
೪೫
ಬಂದನು. ಅಮೃತಮತಿ ಎಂದಿನಂತೆ ಅವನ ಸಮಾಗಮಕ್ಕೆ ಸಂದಳು. ಇದನ್ನು ಕಂಡ ಕೂಡಲೆ ನವಿಲು ಪೂರ್ವಜನ್ಮದ ರೋಷದಿಂದ ಅಷ್ಟವಂಕನ ಕಣ್ಣನ್ನು ಕುಕ್ಕಿಬಿಟ್ಟಿತು. ೪೧. “ಅಯ್ಯೋ, ಸತ್ತೆ ನಾನು !” ಎನ್ನುತ್ತ ಆ ಕುಲಟೆಯು ನವಿಲ ಕಡೆಗೆ ನುಗ್ಗಿ ಅದನ್ನು ಹೊಡೆಯಲು ಚಂದ್ರಬಿಂಬದ ಕುತ್ತಿಗೆಯಿಂದ ಪಚ್ಚೆಯ ಪದಕವೊಂದು ಕೆಳಗುರುಳುವಂತೆ ಉಪ್ಪರಿಗೆಯಿಂದ ಕೆಳಕ್ಕೆ ಬಿದ್ದು ಸತ್ತಿತು. ೪೨. ಅದೇ ಸಮಯಕ್ಕೆ ನೆತ್ತವನ್ನಾಡುವ ಆವೇಶದಲ್ಲಿದ್ದ ಯಶೋಮತಿ “ತೆಕ್ಕೊ !” ಎಂದು ದಾಳವನ್ನು ಇಕ್ಕಿದನು. ಬೀಳುವ ನವಿಲನ್ನು ತೆಗೆದುಕೊಳ್ಳುವಂತೆ ರಾಜನು ಹೇಳುವನೆಂದು ಗ್ರಹಿಸಿ ನಾಯಿಯು ಬೀಳುತ್ತಿದ್ದ ನವಿಲನ್ನು ಹಿಡಿದುಕೊಂಡಿತು. ೪೩. ಚಮತ್ಕಾರದ ನರ್ತನವನ್ನು ಮಾಡುವ ಮಯೂರವನ್ನು ಈ ನಾಯಿ ತಿಂದಿತು. ಎಂದು ತಡೆಯಲಾರದ ಸಿಟ್ಟು ಬಂತು ರಾಜನಿಗೆ. ಅವನು ಆ ನೆತ್ತದ ಮಣೆಯಿಂದಲೇ ನಾಯಿಯ ತಲೆಯನ್ನು ಬಡಿದನು. ಅದರ ನೆತ್ತಿ ಒಡೆದು ಹಿಸಿಯಿತು. ಅದೂ ಸತ್ತಿತು. ೪೪. ನವಿಲೂ ನಾಯಿಯೂ ಸತ್ತುದನ್ನು ಕಂಡಾಗ ರಾಜನಿಗೆ ತಂದೆತಾಯಿಗಳು ತೀರಿಕೊಂಡರೆ ಆಗುವಷ್ಟು ದುಃಖ ವುಂಟಾಯಿತು. ಕಣ್ಣು ಅರಿಯದಿದ್ದರೂ ಕರುಳು ಅರಿಯುವುದಿಲ್ಲವೆ? ಜನ್ಮಾಂತರದ ವ್ಯಾಮೋಹವು ಈ ರೀತಿ ಮರುಗಿಸದೆ ಇರುವುದಿಲ್ಲ. ೪೫, ಸತ್ತ ನಾಯಿ ವಿಂಧ್ಯ ಪರ್ವತದಲ್ಲಿ ಹಾವಾಗಿ ಹುಟ್ಟಿಕೊಂಡಿತು. ನವಿಲೂ ಕೂಡ ಅಲ್ಲಿಯೇ ಮುಳ್ಳುಹಂದಿಯಾಗಿ ಜನ್ಮ ಪಡೆಯಿತು. ಈ ಮುಳ್ಳು ಹಂದಿ