________________
88.5
ಬೇಡಂ ಪಿಳುಕೊತ್ತಿನ ತಾಮ್ ಓಡಲ್ ಬಿಟ್ಟಲ್ಲಿ ಪಿಡಿದು ತಂದಾ ಪಿಳುಕಂ ಬೇಡಿತಿಗೆ ಸಲಹಲಿತ್ತೊಡೆ ಗೂಡಿನೊಳದು ಬಳೆದು ತಳೆದುದಂಗಚ್ಛವಿಯಂ
ನವರತ್ನದ ಪಂಜರದೊಳ್
ದಿವಿಜ ಶರಾಸನದ ಮಲೆಯನಿರಿಸಿದವೋಲೆತುವ ಸೋಗೆಯ ಸುತ್ತಿನೊಳಾ
ಡುವ ಕೇಕಿಯ ಭಂಗಿ ಲೋಕಮಂ ಸೋಲಿಸುಗುಂ
ಕರಹಟದೊಳ್ ಬೇಂಟೆಯ ಕು
ಕುರಿಯಾದಳ್ ಸತ್ತು ಚಂದ್ರಮತಿಯುಂ ಬಟೆಕಾಯೆರಡುಮುಪಾಯನ ಘಟನೆಯಿ
ನರಮನೆಯಂ ಸಾರ್ದುವಾ ಯಶೋಧರಸುತನಾ
ತವಗಂಜುವವರ್ಗೆ ತಾವಂ
ಜುವರೆಂಜಲನಾಯ್ಡುತಿಂಬರೆಂಜಲ ತಾವ್ ತಿಂ ಬವನಿಪರಾದಲ್ಲಿಯೆ ನಾಯ್
ನವಿಲ ನಿತಾಯ್ತು ನೋಡ ಪಾಪದ ಫಲದಿಂ
ನವಿಲಮೃತಮತಿಯ ಸೆಜ್ಜೆಯ
ದವಳಾರದೊಳಾಡುತ್ತಿರ್ದು ಬದಗನುಮಂ ತ ನ್ನವಳೊಡಗೂಡಿರೆ ನಿಟ್ಟಿಸಿ ಭವರೋಷದಿನಿಯದುದಷ್ಟವಂಕನ ಕಣ್ಣಂ
ಯಶೋಧರ ಚರಿತೆ
&と
22
೩೮
2,6
೪೦
ಬಲವೂ ಬಂದಿರಲಿಲ್ಲ ; ಮರಿ ಸರಿಯಾಗಿ ಕಣ್ಣು ತೆರೆಯಲೂ ಇಲ್ಲ. ಈ ಅವಸ್ಥೆಯಲ್ಲಿದ್ದಾಗ ಯಮನ ದೂತನಂತೆ ಬೇಡನೊಬ್ಬನು ಬೇಟೆಯಾಡುತ್ತ ಆ ಕಾಡನ್ನು ಮುತ್ತಿದನು. ೩೬. ಬಂದವನೇ ಆ ಬೇಟೆಗಾರನು ಮರಿಯೊಡನಿದ್ದ ತಾಯಿಯನ್ನು ಓಡಿಸಿಬಿಟ್ಟನು ; ಮರಿಯನ್ನು ಮಾತ್ರ ಬಿಡಲಿಲ್ಲ. ಅದನ್ನು ಹಿಡಿದು ತಂದು ತನ್ನ ಹೆಂಡತಿಯ ಕೈಗಿತ್ತು ಸಾಕುವಂತೆ ಹೇಳಿದನು. ಅವಳು ಅದನ್ನು ಗೂಡಿನೊಳಗಿಟ್ಟು ಪೋಷಿಸತೊಡಗಿದಳು. ಕ್ರಮೇಣ ಬೆಳೆದು ಅದಕ್ಕೆ ಸಹಜವಾದ ದೇಹಶೋಭೆ ಕಾಣಿಸಿ ಕೊಂಡಿತು. ೩೭. ಕಾಲಾಂತರದಲ್ಲಿ ಆ ನವಿಲು ಬೆಳೆದು ನವರತ್ನದ ಪಂಜರದೊಳಗೆ ಇರಿಸಿದ ಕಾಮನ ಬಿಲ್ಲಿನ ಮರಿಯಂತೆ ತನ್ನ ಸೋಗೆಯನ್ನೆತ್ತುತ್ತ ಸುತ್ತಲೂ ಕುಣಿದಾಡ ತೊಡಗಿತು. ಅದರ ಚೆಲುವು ಲೋಕವನ್ನೆಲ್ಲ ಸೋಲಿಸಿತು. ೩೮. ಸತ್ತ ಚಂದ್ರಮತಿಯು ಕರಹಟದಲ್ಲಿ ಒಂದು ಬೇಟೆಯ ನಾಯಿಯಾಗಿ ಹುಟ್ಟಿಕೊಂಡಳು. ಈ ನಾಯಿಯನ್ನೂ ಆ ನವಿಲನ್ನೂ ಅವರವರು ಬೇರೆ ಬೇರೆಯಾಗಿ ತಂದು ರಾಜನಿಗೆ ಕಾಣಿಕೆಯಾಗಿ ಒಪ್ಪಿಸಿದರು. ಹೀಗೆ ತಾಯಿ ಮಕ್ಕಳು ಅರಮನೆಯನ್ನೇ ಸೇರಿಕೊಂಡರು. ೩೯. ತಮಗೆ ಅಂಜುತ್ತಿದ್ದವರಿಗೇ ತಾವು ಅಂಜುವ ಪರಿಸ್ಥಿತಿ ಅವರಿಬ್ಬರಿಗೂ ಈಗ ಬಂದೊದಗಿತು. ತಮ್ಮ ಎಂಜಲನ್ನು ತಿನ್ನುತ್ತಿದ್ದವರ ಎಂಜಲನ್ನು ತಾವು ತಿನ್ನಬೇಕಾಯಿತು. ಎಲ್ಲಿ ಅರಸು ತನವನ್ನು ಮೆರೆದರೊ ಅಲ್ಲಿಯೇ ಅವರಿಬ್ಬರೂ ನಾಯಿ ನವಿಲುಗಳಾಗಿ ಇರ ಬೇಕಾಯಿತು. ಅರಸ, ಪಾಪದ ಫಲವನ್ನು ನೋಡು ! ೪೦. ಒಮ್ಮೆ ಅಮೃತಮತಿಯ ಧವಳ ಶಯ್ಯಾಗಾರದಲ್ಲಿ ನವಿಲು ಆಡುತ್ತಾ ಇತ್ತು. ಅಲ್ಲಿಗೆ ಮಾವುತ ಅಷ್ಟವಂಕನು