________________
ಮೂರನೆಯ ಅವತಾರ
ದೇವರ ಬಲೆಯೊಳೆ ಬರ್ಪಂ ಪೂವಿನ ಸೌರಭದ ಮಾಪಿಳ್ಳೆಯಿಂ ಗಮನಪ್ರಸ್ವಾವನೆಯೊಳಿಂದು ನೀಮುಂ ದೇವಿಯುಮಾರೊಗಿಸಲಕ್ಕೆ ಎನ್ನರಮನೆಯೊಳ್ ಎನೆ ಜನಪತಿ ಮನಮಲ್ಲದ ಮನದೊಳೊಡಂಬಟ್ಟು ಬಂದು ತಾಯೊಡನುಣೆ ನಂಜಿನ ಲಡ್ಡುಗೆಯಂ ಮಾಡಿದು ದನುಣ್ ಮಹಾರಾಜ ಎಂಬಿನಂ ಸವಿದುಂಡಂ ಅರಸನ ಮೂದಲೆ ಮನದೊಳಗಿರೆ ಮೇಳಿಸಿಕೊಂಡು ಬಂದು ಪಾತಕಿ ಕೊಂದ ಬೆರಗಿಂ ಗಂಡನನಾ ಸೀಚರಿತಮಂ ಕಳೆಯಲರಿದು ಪೆಂಡಿರ ಕೃತಕಂ ಆ ಪಕ್ವಾನ್ನಮೆ ಮೃತಿಗು~ ದೀಪನಪಿಂಡದವೊಲಾಗೆಯಘದಿಂ ಬೀಜಾವಾಪಮನೆ ಜಲತೆಗೆ ಕಲಾಪಿಯುದರದಲ್ಲಿ ವಿಂಧ್ಯದೊಳೊಗೆದಂ ಅಂತೊಗದು ಮೊಟ್ಟೆಯೊಡೆದ ಲಿಂ ತೊಲಗದು ತುಪ್ಪುಳೆಡದು ಕಾಲ್ಬಲಿಯದು ಕಇಂ ತೆಳತಿಯದೆಂಬ ಪದಕೆ ಕೃತಾಂತನ ಹರಿಯಂತೆ ಕವಿದು ಬೇಂಟೆಯೊಳೊರ್ವ೦
೩೫
ಯಶೋಮತಿಗೆ ರಾಜ್ಯವನ್ನೊಪ್ಪಿಸಿ ತಪಸ್ಸಿಗೆ ಹೊರಡಬೇಕೆಂದು ಸಂಕಲ್ಪಿಸಿದನು. ಅಷ್ಟರಲ್ಲಿ ಮೃತ್ಯುವೇ ಎದುರು ಬಂದಂತೆ ಅಮೃತಮತಿ ಅಲ್ಲಿಗೆ ಬಂದಳು. ೩೧. “ದೇವಾ, ನಾನೂ ನಿಮ್ಮೊಂದಿಗೆ ತಪೋವನಕ್ಕೆ ಬರುತ್ತೇನೆ. ಹೂವನ್ನು ಬಿಟ್ಟು ಪರಿಮಳವಿರುವುದೆ ? ಆದರೆ ಹೋಗುವ ಮುನ್ನ ಈ ದಿನ ನೀವೂ ದೇವಿಯರಾದ ಅತ್ತೆಯೂ ನನ್ನ ಅರಮನೆಗೆ ದಯಮಾಡಿಸಿ ಊಟಮಾಡಿ ತೆರಳಬೇಕು” ಎಂದು ಒತ್ತಾಯಿಸಿದಳು. ೩೨. ಯಶೋಧರನಿಗೆ ಮನಸ್ಸಿಲ್ಲವಾದರೂ ಹೇಗೋ ಒಪ್ಪಿ ಕೊಂಡನು. ತಾಯಿಯನ್ನು ಕೂಡಿಕೊಂಡು ಅಮೃತಮತಿಯ ಅರಮನೆಗೆ ಬಂದನು. ಅಲ್ಲಿ ಅವನೂ ಅವನ ತಾಯಿಯೂ ಆಕೆ ಉಣಬಡಿಸಿದ ವಿಷದ ಲಡ್ಡುಗೆಯನ್ನು ಸವಿದುಂಡರು. ೩೩. ಅರಸನ ಅಣಕದ ಮಾತು ಅಮೃತಮತಿಯ ಚಿತ್ತದಲ್ಲಿ ಕೀಲಿಸಿ ನಿಂತಿತು. ಆದರೂ ಬಾಹ್ಯದಲ್ಲಿ ಬೆಡಗನ್ನು ತೋರಿಸುತ್ತಾ ಬಂದು ಆ ಪಾಪಿ ಮರ್ಯಾದೆ ಮೀರಿ ತನ್ನ ಗಂಡನನ್ನೇ ಕೊಂದಳು, ಹೆಂಗಸಿನ ವರ್ತನೆ ಎಷ್ಟು ಆಶ್ಚರ್ಯಕರ ! ಸ್ತ್ರೀಯರ ಕಪಟವೃತ್ತಿಯನ್ನು ಕಳೆಯುವುದಕ್ಕೆ ಸಾಧ್ಯವಿಲ್ಲವಲ್ಲ ! ೩೪. ಯಶೋಧರನಿಗೆ ಅಲ್ಲಿ ಉಂಡ ಊಟವೇ ಮರಣಕ್ಕೆ ಉದ್ದೀಪನಪಿಂಡದಂತಾಯಿತು ; ಮಾತ್ರವಲ್ಲ, ಜನ್ಮಲತೆಗೆ ಅವನೆಸಗಿದ ಪಾಪವೇ ಬೀಜವಾಗಿ ಪರಿಣಮಿಸಿತು. ಅವನು ಅಲ್ಲಿ ಸತ್ತು ವಿಂಧ್ಯದಲ್ಲಿ ಒಂದು ಹೆಣ್ಣು ನವಿಲಿನ ಹೊಟ್ಟೆಯಲ್ಲಿ ಹುಟ್ಟಿ ಬಂದನು: ೩೫. ಹೀಗೆ ಹುಟ್ಟಿ, ಮೊಟ್ಟೆಯೊಡೆದು ಮರಿಯಾಯಿತು ಆ ಜೀವ. ಅಲ್ಲಿಂದ ಮುಂದೆ ಹರಿಯುವಷ್ಟೂ ಅದಕ್ಕೆ ಶಕ್ತಿಯುಂಟಾಗಿರಲಿಲ್ಲ ; ಎಳೆಯ ಗರಿಗಳೂ ಮೂಡಿರಲಿಲ್ಲ ; ಕಾಲುಗಳಿಗೆ