________________
980
ಯಶೋಧರ ಚರಿತೆ
ಪೊಡೆಯ ಕೃಕವಾಕು ನಿನದಂ ಬಿಡದುಣುತಿರಲೆ ಕಯ್ಯ ಬಾಲ್ ಬೀಳ್ತರೆ ಪೊಯ್ ವಡೆದಂತೆ ಪಂದೆಯಂ ಪಾವಡರ್ದಂತಾಗಿರೆ ಯಶೋಧರಂ ಬೆಳಗಾದಂ ಏಕೆ ಕನಸೆಂದು ನುಡಿದೆನಿದೇಕಂಬಿಕೆ ಬಲಿಯನೊಡ್ಡಿದಲ್ ಕೂಗಿದುದೇಕೀ ಕೃತಕತಾಮ್ರಚೂಡನಿದೇಕೆಂದಾರಟೆವರಯ್ಯ ವಿಧಿವಿಳಸನಮಂ ಅಮೃತಮತಿಯೆಂಬ ಪಾತಕಿ ಯ ಮಾಯೆ ಬನಮಾಯ ಚಂದ್ರಮತಿಮಾತೆಯ ಮಾತೆಮಗೆ ಬಲೆಯಾಯ್ತು ಹಿಂಸನ ಮಮೋಘಶರಮಾಯ್ತು ಕೆಡೆದುದಾತ್ಮಕುರಂಗಂ ಎಂದು ಮನಂ ಮಲಗುವಿನಂ. ನೊಂದಲ್ಲಿಂ ತಳರ್ದು ಮನೆಗೆ ಉಜ್ಜಿಗಮೆ ದೊದ್ವಂದದೆ ಬಂದೀ ರಾಜ್ಯದ ದಂದುಗಮೇಕೆಂದು ತೊಜತೆಯಲುದ್ಯತನಾದಂ ಪರಿವಾರಮಂ ಪ್ರಧಾನರನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋಧರನಿಂತು ತಪಕೆ ನಡೆಯರೆ ಮೃತ್ಯುವಿನಂತೆ ಅರಸಿ ಬಂದಿಂತೆಂದಳ್
೩೦
ಕೂಗಿ ಕರೆಯುವುದೋ . ಎಂಬಂತಿತ್ತು ಆ ಆಕ್ರಂದನ, ತುಂಡಾದ ತಲೆಯನ್ನು ಬಿಡಲಾರೆನೆನ್ನುವಂತೆ ಆ ಕೋಳಿಯ ಶರೀರವು ಸ್ವಲ್ಪ ದೂರಕ್ಕೆ ಹಾರಿತು. ೨೬. ಖಡ್ಗ ಪ್ರಹಾರವಾದ ಕೂಡಲೇ ಕೋಳಿಯ ಕೂಗು ಕೇಳಿಸಿದುದೇ ತಡ, ರಾಜನ ಕೈಯ ಕತ್ತಿ ಕೆಳಕ್ಕುರುಳಿತು. ತನ್ನನ್ನೇ ಯಾರೋ ಕಡಿದಂತೆಯೂ, ಹೇಡಿಯ ಮೇಲೆ ಹಾವು ಹರಿದಂತೆಯೂ ಅವನು ಬೆರಗಾದನು. ೨೭. “ಅಯ್ಯೋ! ಕನಸೆಂದು ನಾನೇಕೆ ಹೇಳಿದೆ? ನನ್ನ ತಾಯಿಯಾದರೂ ಆ ರೀತಿ ಬಲಿಕೊಡಿಸಿದುದೇಕೆ ? ಈ ಕೃತಕವಾದ ಕೋಳಿ ಹೀಗೇಕೆ ಕೂಗಿಕೊಂಡಿತು ? ಹೀಗಾದುದೇಕೆಂಬ ವಿಧಿವಿಲಾಸವನ್ನು ಯಾರು ಅರಿಯುವರು? . ೨೮: “ಅಮೃತಮತಿಯೆಂಬ ಪಾತಕಿಯ ಮಾಯೆಯೇ ವನವಾಯಿತು. ತಾಯಿಯಾದ ಚಂದ್ರಮತಿಯ ಮಾತೇ ನನಗೊಂದು ಬಲೆಯಾಗಿ ಪರಿಣಮಿಸಿತು. ಹಿಂಸೆಯೇ ಅಮೋಘವಾದ ಬಾಣವಾಯಿತು. ಆತ್ಮವೆಂಬ ಜಿಂಕೆಯು ಇದಕ್ಕೆ ಬಲಿಬಿದ್ದಿತು.”೫೧ - ೨೯. ರಾಜನ ಮನಸ್ಸು ಮರುಕಕ್ಕೆ ಒಳಗಾಗಿ ಸಂಕಟಗೊಂಡಿತು. ಅಲ್ಲಿಂದ ಹೊರಟು ಅವನು ಮನೆ ಸೇರಿದನು. ಅಲ್ಲಿಯೂ ಉದ್ವೇಗವು ತಗ್ಗಲಿಲ್ಲ. ಅವನು ತನಗೆ ಈ ರಾಜ್ಯಭಾರದ ಹೊರೆಯೇಕೆ ಎಂದು ಎಣಿಸಿಕೊಳ್ಳುತ್ತಾ ಅದನ್ನು , ಬಿಟ್ಟು ಬಿಡುವ ನಿರ್ಧಾರವನ್ನು ಕೈಕೊಂಡನು. ೩೦. ಪರಿವಾರವನ್ನೂ ಪ್ರಧಾನರನ್ನೂ ಇರಿಸಿಕೊಂಡು, ತನ್ನ ಮಗನಾದ