________________
ಮೂರನೆಯ ಅವತಾರ
ಎನೆ ತಾಯ ಮೋಹದಿಂದಂ ಜನವನೊಡಂಬಟ್ಟು ಮನದೊಳಿಂತೆಂದಂ ಭಾ ವನೆಯಿಂದಮಪುದಾಸ್ತವ ಮೆನಗಿನ್ನೆಂತಪ್ಪ ಪಾಪಮಿದಿರ್ವಂದಪುದೊ ಮಾಡದೊಡೆ ತಾಯೆ ಮರಣಂ ಮಾಡಿದೊಡನೊಂದು ಗತಿಗೆ ಕೇಡಿಂದೇನಂ ಮಾಡುವೆನೆಂದಾಂದೋಳಮ ನಾಡೆ ಮನಂ ತಮಮನಪ್ಪುಕೆಯ್ದನಿಳೇಶಂ ಆ ನೃಪತಿ ಬಳಿಕ ತಾಯುಂ ತಾನುಂ ಚಂಡಿಕೆಯ ಪೂಜೆಗೆಂದೆಂದಂ ನಾನಾ ವಿಧದರ್ಚನೆಯಿಂ ಮಾನೋಮಿಯ ಮುಂದೆ ಬಂದ ಭಮಾಷ್ಟಮಿಯೊಳ್ ಕರಮೆಸೆಯ ಸಮೆದು ಬಂದುದು ಚರಣಾಯುಧಮದಲ್ಲಿ ಚಿತ್ರಪರಿಶೋಭೆಗೆ ಬೆಂ ತರನೊಂದಾಶ್ರಯಿಸಿರ್ದುದು ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ ತಲೆಯಿಂ ಕುಕೂಕೂ ಎಂ. ಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬ ಲ್ಕುಲಿಯೆನೆ ಪಿಟ್ಟಿನ ಕೋಟೆಯ
ತಲೆಯಂ ಪಿಡಿವಂತಿರಟ್ಟೆ ಪಾಡಿದುದಿನಿಸಂ ಇಂದು ಬಲಿ ಕೊಡಲೇಬೇಕು, ಕಂದ! ಇದನ್ನು ನೀನು ಮೀರಿದೆಯೆಂದಾದರೆ, ಆ ದೇವಿಗೆ ನನ್ನನ್ನೇ ಆಹುತಿಯನ್ನಾಗಿ ಕೊಡುತ್ತೇನೆ. ಇದರಿಂದಲಾದರೂ ಇಂದು ಬಂದ ಈ ದುರಿತವನ್ನು ಪರಿಹರಿಸದೆ ಇರಲಾರೆ, ಮಗನೆ!” ೨೧. ಇಷ್ಟು ಹೇಳಿದಾಗ ಯಶೋಧರನಿಗೆ ತಾಯಿಯ ಮಾತನ್ನು ನಿರಾಕರಿಸುವುದಾಗಲಿಲ್ಲ. ಅವನು ಮಾತೆಯ ಮೇಲಿನ ಮೋಹದಿಂದಾಗಿ ಅವಳ ಮಾತಿಗೆ ಒಪ್ಪಿಗೆಯನ್ನಿತ್ತನು. ಮನಸ್ಸು ಮಾತ್ರ ವಿಚಾರಪರವಾಯಿತು. ಆಸ್ರವವುಂಟಾಗುವುದು ಮನಸ್ಸಿನ ಎಣಿಕೆಯಿಂದಲೇ, ಇನ್ನು ನನಗೆ ಎಂತಹ ಪಾಪ ಎದುರಾಗುವುದೋ! ೨೨. ತಾಯಿ ಹೇಳಿದಂತೆ ಮಾಡದಿದ್ದರೆ ಮಾತೆಯ ಮರಣವನ್ನು ಕಾಣಬೇಕಾಗುತ್ತದೆ ; ಮಾಡಿದರೆ ನನಗೆ ಸದ್ಧತಿಗೆ ಕೇಡುಂಟಾಗುತ್ತದೆ. ಏನು ಮಾಡಲಿ! ಎಂದು ಯಶೋಧರನ ಮನಸ್ಸು ಹಿಂದೆ ಮುಂದೆ ಉಯ್ಯಾಲೆಯಾಡಿತು. ಕಟ್ಟಕಡೆಗೆ ಅರಸನು ಅಜ್ಞಾನದ ದಾರಿಯನ್ನೇ ಅವಲಂಬಿಸಿದನು. ೨೩. ಅವನೂ ಚಂದ್ರಮತಿಯೂ ಮಹಾನವಮಿಯ ಹಿಂದಣ ಭೌಮಾಷ್ಟಮಿಯ೫೦ ದಿನ ಹಲವು ವಿಧದ ಅರ್ಚನೆಯಿಂದ ಚಂಡಿಕಾದೇವಿಯ ಪೂಜೆಯನ್ನು ನೆರವೇರಿಸುವುದಕ್ಕಾಗಿ ಬಂದರು. ೨೪, ಬಲಿ ಕೊಡುವುದಕ್ಕಾಗಿ ಹಿಟ್ಟಿನ ಒಂದು ಕೋಳಿಯನ್ನು ಬಹಳ ಸೊಗಸಾಗಿ ನಿರ್ಮಾಣ ಮಾಡಲಾಯಿತು. ಅದರ ವಿಶೇಷವಾದ ಚೆಲುವು ಒಂದು ಪಿಶಾಚಿಯನ್ನು ಆಕರ್ಷಿಸಿತು. ಅದು ಆ ಕೋಳಿಯೊಳಗೆ ಸೇರಿಕೊಂಡಿತು. ಸಕಾಲಕ್ಕೆ, ಚಂದ್ರಮತಿ ಗಟ್ಟಿಯಾಗಿ ಮಗನನ್ನು ಆಶೀರ್ವದಿಸುತ್ತಿದ್ದಂತೆ ರಾಜನು ಆ ಕೋಳಿಯನ್ನು ಕಡಿದಿಕ್ಕಿದನು. ೨೫. ತಕ್ಷಣದಲ್ಲಿಯೇ, ಆ ಹಿಟ್ಟಿನ ಕೋಳಿಯೂ ಕೊಕ್ಕೋಕೋ ಎಂದು ಕೂಗಿತು. ಮುಂದೆ ಬರಲಿರುವ ಕಷ್ಟಗಳನ್ನೇ ಹೀಗೆ