________________
೪೮
ಯಶೋಧರ ಚರಿತೆ
ಎಂದೊಡೆ ಮುನಿದಂಬಿಕೆಯಿಂ ತೆಂದಳ್ ನಿಜಮಪ್ಪ ಮೋಹದಿಂ ಸಲುಗೆಯಿನೆ ಝಂದಳ್ ನಾಡೆ ನೃಪೇಂದ್ರನ ಮುಂದಣ ಗತಿಗಪ್ಪ ಬಟ್ಟೆಯಂ ಕಟ್ಟುವವೊಲ್ ಪರಿಹರಿಸೆಯಮ್ಮ ನುಡಿಯಂ ಗುರುವಚನಮಲಂಘನೀಯಮೆನ್ನದೆ ನೀನಾ ದರದಿಂ ಕೈಕೊಳ್ ಧರ್ಮದೊ ಆರಸುಗಳೇಂ ಶಾಂತಿಯೆಂದೊಡನುಸರಿಸರ ಪ್ರೇಮ್ ಇವು ಧರ್ಮಮೆಂದು ಬಗೆವೊಡ ಮವಿವೇಕದೆ ಶಾಂತಿಮಾಡೆ ಭೇತಾಳಂ ಮೂ ಡುವ ತೆಱದೆ ಹಿಂಸೆಯಿಂ ಮೂ ಡುವ ಮುಂತಣ ಕೇಡನೆಂತು ಕಟಿವೆಂ ಬಲೆಯಂ ಜೀವದಯೆ ಜೈನಧರ್ಮ೦ ಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂ. ಭಾವಿತಮೆ ತಪಿನುಡಿದಿರ್ ಕಾವರೆ ಕಣೆಗೊಳೊಡಬೈ ಬಾರಿವರೊಳರೇ ಆದೊಡೆ ಪಿಟ್ಟಿನ ಕೋಟೆಯ ನಾದೊಡಮಿಂದೊಂದನಿಕ್ಕವೇಟ್ಟುದು ಮಿಕ್ಕಂ ದಾ ದೇವಿಗೆನ್ನನಿಕ್ಕಿಯು ಮೀ ದುರಿತಮನಿಂದು ಮಗನೆ ಪರಿಹರಿಸದಿರೆಂ
ವಾಗಿರುತ್ತದೆಯೆ ? ಬುದ್ದಿವಂತನಾದವನು ಈಗಲೋ ಇನ್ನಷ್ಟು ಹೊತ್ತಿನಲ್ಲೋ ಸಾಯುವ ಕುದುರೆಗೆ ಹುಲ್ಲು ಹಾಕಿ ಹಾಳಾಗುತ್ತಾನೆಯೆ”? ಎಂದು ತಾಯಿಗೆ ಸಮಾಧಾನ ಹೇಳಿದನು ಯಶೋಧರ. ೧೬. ಈ ಮಾತನ್ನು ಕೇಳಿದೊಡನೆಯೇ ತಾಯಿಯ ಮುನಿಸು ಮಸಗಿತು. ಆದರೂ ಅವಳು ಮೋಹದಿಂದಲೂ ಸಲುಗೆ ಯಿಂದಲೂ ಯಶೋಧರನ ಬಳಿಗೆ ಬಂದು ಹೀಗೆ ನುಡಿದಳು, ಅವನ ಮುಂದಿನ ಸದ್ಧತಿಯ ದಾರಿಗೆ ಪ್ರತಿಬಂಧಕ ಹಾಕುವಂತೆ. ೧೭. “ನಮ್ಮ ಮಾತನ್ನು ನಿರಾಕರಿಸುವೆಯಾ? ಗುರುವಚನವು ಅಲಂಘನೀಯವೆನ್ನುವುದೂ ಗೊತ್ತಿಲ್ಲವೆ ನಿನಗೆ ? ನನ್ನ ಮಾತನ್ನು ಆದರದಿಂದ ಅಂಗೀಕರಿಸು. ಧರ್ಮದಿಂದಲೇ ಶಾಂತಿ ಎಂಬುದನ್ನು ಅರಸರು ಅನುಸರಿಸುವುದಿಲ್ಲವೆ? ಹೇಳು” ಯಶೋಧರನು ನುಡಿದನು. ೧೮. “ಇವು ಧರ್ಮ ಎಂದು ಬಗೆದರೂ ಅವಿವೇಕದಿಂದ ಇಂತಹ ಶಾಂತಿಯನ್ನು ಮಾಡಿದರೆ ಸರಿಯಾದೀತೆ ? ಹಿಂಸೆಯನ್ನು ಮಾಡಿದರೆ ಮುಂದೆ ಬೇತಾಳಾಕಾರದಿಂದ ಕೇಡೇ ಮೂಡಿಬಂದೀತು! ಅದನ್ನು ಆಮೇಲೆ ತೊಲಗಿಸುವುದಾದರೂ ಹೇಗೆ ? ೧೯. ಜೀವದಯೆಯೇ ಜೈನಧರ್ಮ. ಪ್ರತಿಯೊಂದು ಜೀವಿಗೂ ಹಿತವಾಗಬೇಕೆಂದು ನಂಬುವವರಿಗೆ ಹಿಂಸೆಯ ಮೋಹವಾದರೂ ಎಣಿಕೆಗೆ ಬಂದೀತೆ ? ನಿಮ್ಮ ಮಾತು ಸರಿಯೆನ್ನಿಸಲಾರದಮ್ಮ! ಕಾಯುವವರೇ ಕಣೆ ಹಿಡಿಯುವುದಾದರೆ ತಡೆಯುವವ ರಾರಿದ್ದಾರೆ ?” ತಾಯಿ ಮತ್ತೆ ಹೇಳಿದಳು : ೨೦. “ಆದರೆ ಹಿಟ್ಟಿನ ಕೋಳಿಯನ್ನಾದರೂ