________________
ಮೂರನೆಯ ಅವತಾರ
ವನಿತೆಯ ಕೇಡಂ ಜನಪತಿ ಕನಸಿನ ನೆವದಿಂದೆ ಮಆಸೆ ತಲ್ಲಣದಿಂ ತಾಮ್ ನೆನೆದಳ್ ಪೊಲ್ಲಮೆಯಂ ವಂ ಚನೆಯೆಲ್ಲಿಯುಮೊನ್ನು ಮಾಡಲಾಳದು ಕಡೆಯೊಳ್ ಅಡಸಿದ ನಲ್ಗಳ ತಪ್ಪಂ ತಡವಿಕ್ಕಿದೊಡೇಲುಭವದ ಕೇಡಡಸುವ ಕಿಮ್ ನುಡಿಯಂ ನುಡಿದ ತಾಯೋಂ ದಡಸಿದೊಡೇವಿಡಸಿತೆಂಬ ನುಡಿ ತಪ್ಪುಗುಮೆ ದೇವ ಕನಸಿದು ಕರಂ ದೋ ಷಾವಹಮಿಳಿಕೆಯ್ಯಲಾಗ ನಿನ್ನಸಿಮುಖದಿಂ ದಾವಣಿಗುಳೆಯಂ ತಲೆದೊಡೆ ದೇವಿ ಶುಭೇತರವಿನಾಶಮಂ ದಯೆಗೆಯುಂ ಮುಂತಣಿವೆ ತಾಯ ವಚನದೊ ಳಂತು ಶುಭೇತರವಿನಾಶಶಬ್ದಮಿಳೇಶಂ ಶಾಂತಂ ಪಾಪಮೆನುತುಂ ಶಾಂತಮನಂ ಪೇಸಿ ಮುಚ್ಚಿಕೊಂಡಂ ಕಿವಿಯಂ ಮೇಗ ಬಗೆವೊಡೆ ವದ್ದೆ ಹಿತ ಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಲ್ ಈಗಳೂ ಮೇಯ್ ಆಗಳ್ ಮೇಖ್ ಸಾಗುದುರೆಗೆ ಪುನಡಕಿ ಕೆಡುವನೆ ಚದುರಂ
೧೫ ಸಂತಾಪಗೊಂಡಿತು”೪೭, ೧೧. ಕೈಹಿಡಿದವಳ ದುರ್ವತ್ರನೆಯನ್ನು ನೇರವಾಗಿ ಹೇಳದೆ ಯಶೋಧರನು ಅದಕ್ಕೆ ಕನಸಿನ ರೂಪವನ್ನು ಕೊಟ್ಟು ಹೇಳಿದನು. ಅದನ್ನು ಕೇಳಿದಾಗ ಚಂದ್ರಮತಿಗೆ ತಲ್ಲಣವಾಯಿತು. ಅವಳು ಅದರಿಂದ ಕೆಟ್ಟದ್ದನ್ನೇ ನಿರೀಕ್ಷಿಸು ವಂತಾಯಿತು. ವಂಚನೆಯಿಂದ ಎಲ್ಲಿಯಾದರೂ ಯಾವಾಗಲಾದರೂ ಕಡೆಗಾದರೂ ಒಳ್ಳೆಯದಾದೀತೆ ? ೧೨. ತನ್ನ ನಲ್ಲೆಯೆನ್ನಿಸಿದವಳ ತಪ್ಪನ್ನು ಅವನು ಮರೆಮಾಡಿ ತಡೆದಿಟ್ಟನು. ಇದರ ಪರಿಣಾಮವಾಗಿ ಅವನ ತಾಯಿ ಮುಂದೆ ಏಳೇಳು ಜನ್ಮಗಳ ಪರಿಯಂತವೂ ಕೆಡುಕಾಗುವ ಕೆಟ್ಟಮಾತನ್ನೇ ಹೇಳಿದಳು. ಒಂದು ಸೇರಿದರೆ ಏಳು ಸೇರಿಕೊಳ್ಳುತ್ತದೆ ಎಂಬ ಮಾತು ತಪ್ಪದಷ್ಟೆ! ೧೩. “ಅಪ್ಪಾ ಈ ಕನಸು ಬಹಳ ಕೆಡುಕುಂಟಾಗುವುದನ್ನೇ ಸೂಚಿಸುತ್ತದೆ. ಆದುದರಿಂದ ಇದನ್ನು ಕಡೆಗಣಿಸಬಾರದು. ನಿನ್ನ ಖಡ್ಗಧಾರೆಯಿಂದ, ಕಟ್ಟಿದ ಕುರಿಯನ್ನು ಕತ್ತರಿಸಿ ಅರ್ಪಿಸಿದೆಯೆಂದಾದರೆ ಚಂಡಿಕಾದೇವಿ ಅಮಂಗಲವನ್ನೆಲ್ಲ ಧ್ವಂಸ ಮಾಡಿ ದಯೆಯನ್ನೂ ತೋರಿಸಿಯಾಳು” ಎಂದು ಸಲಹೆಯಿತ್ತಳು. .೧೪. ತಾಯಿಯ ಮಾತಿನಲ್ಲಿ ಅಮಂಗಲದ ವಿನಾಶದ ನುಡಿ ಬಂದುದು ಅವನಿಗೆ ಮುಂದೆ ಬರುವ ಅಮಂಗಲವನ್ನೇ ಸೂಚಿಸಿದಂತೆ ಭಾಸವಾಯಿತು.೪೮ ಅವನು 'ಶಾಂತಂ ಪಾಪಂ! ಶಾಂತಂ ಪಾಪಂ!” ಎನ್ನುತ್ತ ಕಿವಿ ಮುಚ್ಚಿಕೊಂಡನು. ೧೫. “ಅಮ್ಮಾ ! ಮೇಲೆಯನ್ನು ಬಯಸುವುದಾದರೆ, ಕೊಲೆ ಮನುಷ್ಯನಿಗೆ ಹಿತನವನ್ನುಂಟುಮಾಡಲಾರದು. ಮನುಷ್ಯನ ಬಾಳುವೆ ಶಾಶ್ವತ