________________
ಮೂರನೆಯ ಅವತಾರ
ಆಸನದಿಂ ಬಾಯಿಂ ಪೊಯ್ ಸಾಸವೆ ಮೆಣಸುಪುಗೂಡಿ ನಿಲವಿನ ಸೂಡಿಂ ಲೇಸಾಗಿ ಬೆಂದ ಬಾಡಂ ಬಾಸಣಿಸಿಟ್ಟದನೆ ಅಮೃತಮತಿಗಟ್ಟಿಸಿದಂ ಅದು ಸತ್ತು ಸವೆದೋಡಾ ಮಾಂ ಸದ ಸವಿಗಂಡರಸಿ ಬಾಣಸಿನ ಮನೆಯೋಳ್ಕ ಟ್ಟಿದ ಪೊಂತಂ ತಿಂಗು ಮಾಡಿದಳದನರಿವಲ್ಲಿ ತೊತ್ತಿರೆಂಗುಂ ತಮ್ಮೊಳ್ ಬಸಿದಪುದು ಮೆಯ್ಯ ಕೀವುಂ ರಸಿಗೆಯುಮೊಡಲಟಿದುದಾದೊಡಂ ಮಾಣಲೆ ನಾಮ್ ಬಸನಿಗತನಮಂ ಮಾಣೀ ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ ಮದನನ ಮಾಜಿಂಕದ ಚೆಂದದ ಗಂಡನನಮ್ಮತದನ್ನಳತೆಯನಿವವದೆ ಕೊಂದಳ್ ಪಾಪಂ ತಿನೋದು ಪಾತಕಿ ಪುಲೆತೊಡಲ್ಲದೇಂ ಸತ್ತವಳೇ ತೊನ್ನನ ಕೂಟದಿನಾದುದು ತೊನ್ನಿ ರೋಗಕ್ಕೆ ಬಾಡು ಕಳ್ ವಿಷಮೆನೆಯುಂ ಮನ್ನಿಸಳೆ ಮಗನ ಮಾತನಿದೇಂ ನಾಯಕನರಕಮೀಕೆಗೊಚ್ಚತಮಾಯೋ
೭೪
ಕೊಬ್ಬು ತುಂಬಿದ ಮಾಂಸವನ್ನು ಮಾತ್ರ ಅಲ್ಲಿಂದ ತೆಗೆಯಲಾಯಿತು. ೭೦. ಅದರ ಹಿಂಬದಿಯಿಂದಲೂ ಮುಂದಣ ಬಾಯಿಯಿಂದಲೂ ಸಾಸಿವೆ ಮೆಣಸು ಉಪ್ಪು ಬೆರಸಿ ಒಳಗೆ ತಳ್ಳಲಾಯಿತು. ಅನಂತರ ಅದನ್ನು ಒಂದೇ ರೀತಿಯ ಉರಿಯಿಂದ ಬೇಯಿಸಲಾಯಿತು. ಈ ಬೆಂದ ಮಾಂಸವನ್ನು ಮುಚ್ಚಿಟ್ಟು ಅಮೃತಮತಿಗೆ ಕಳುಹಿಸಿದನು, ಯಶೋಮತಿ, ೭೧. ಅಂತೂ ಅದು ಸತ್ತಿತು ; ಹೋಯಿತು. ಅದರ ಮಾಂಸವನ್ನು ಉಂಡು ಸವಿಗಂಡ ಅಮೃತಮತಿ ಅಡಿಗೆಯ ಮನೆಯ ಬಳಿ ಕಟ್ಟಿದ್ದ ಹೋತವನ್ನು ತಿನ್ನುವುದಕ್ಕೆ ಉಪಯೋಗಿಸಿದಳು. ಅದನ್ನು ಕೊಚ್ಚಿ ಕೊಲೆ ಮಾಡುತ್ತಿದ್ದಾಗ ಅವಳ ದಾಸಿಯರು ತಂತಮ್ಮೊಳಗೆ ಆಕೆಯನ್ನು ಕುರಿತು ಮಾತಾಡತೊಡಗಿದರು. ೭೨. ಇವಳ ಮೆಯ್ಯಂದ ಕೀವೂ ರಸಿಕೆಯೂ ಸುರಿಯುತ್ತ ಇದೆ. ದೇಹವು ಪೂರ್ಣ ಹಾಳಾಗಿ ಹೋಗಿದೆ. ಆದರೂ ಈ ನಾಯಿಬುದ್ದಿಯನ್ನು ನಿಲ್ಲಿಸಲಿಲ್ಲ. ಈ ಹೊಲಸು ನಾರುವವಳನ್ನು ಕೊಂಡೊಯ್ಯುವುದಕ್ಕೆ ಯಮನೂ ಹೇಸಿದನೊ ಏನೊ. ೭೩. ಮದನನ ಪ್ರತಿ ರೂಪದಂತೆ ಸುಂದರನಾಗಿದ್ದನು, ಈಕೆಯ ಗಂಡ ; ಇವಳ ಅತ್ತೆ ಅಮೃತದಂತಿದ್ದಳು. ಇವಳಿಗೆ ಅವರಿಬ್ಬರೂ ಮೆಚ್ಚಲಿಲ್ಲ: ಇಬ್ಬರನ್ನೂ ಕೊಂದುಹಾಕಿದಳು. ಇವಳನ್ನು ಈಕೆಯ ಪಾಪವೂ ನುಂಗುವುದಿಲ್ಲವಲ್ಲ! ಈ ಪಾತಕಿ ಹುಳುತುಂಬಿಯೇ ಸಾಯಬೇಕಲ್ಲದೆ ಅನ್ಯಥಾ ಇವಳಿಗೆ ಮರಣ ಬಾರದು. ೭೪. “ಕುಷ್ಠರೋಗಿಯ ಸಂಪರ್ಕ ಮಾಡಿದ ಇವಳಿಗೆ ಅದೇ ಕುಷವು ಅಂಟಿಕೊಂಡಿದೆ. ಈ ರೋಗಕ್ಕೆ ಮಾಂಸವೂ ಮದ್ಯವೂ ವಿಷವೆಂದು ಮಗ ಹಲವು ಬಾರಿ