________________
ಯಶೋಧರ ಚರಿತೆ
೭೧
ದೈವದಿನೆಂತಕ್ಕಂದಿನ ಸಾವೊಸರಿಸಿದುದು ಕರ್ಣಭೂಷಾವಳಿ ಭೂ ಪಾವಳಿಯಾಗದೆ ಸೆಳೆದೊಡೆ ಸಾವಲ್ಲಿಗೆ ಕಯ್ಯುವಾಯ್ತು ನೆಲ ಕುಸುಮಂ ಪೋದಿರುಳಿನ ಕಿಡನುಂ ಮೂದಲೆಯಾಗಿಂತು ನುಡಿದೊಡದುದನಚಿದಾ ಪಾದರಿ ಬೇಸತ್ತವೊಲಿರೆ ಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರ ಮಗನ ಮೊಗಮಂ ನೀಡುಂ ನೋಡುತ್ತುಮುಳುರ್ಕೆಯಿಂ ದುಗುವ ಮೊಲೆವಾಲ್ ಪುಣ್ಯಸ್ಮಾನಾಂಬುವಾಗೆ ಪದಾಬ್ಬದಿಂ ನೆಗಪಿ ಪಲವಪ್ಪಾಶೀರ್ವಾದಂಗಳಿಂದಮರ್ದಪ್ಪಿ ಜೊ ಲುಗುವ ಕುರುಳಂ ತಿರ್ದುತ್ತುಮಿಂತೆಂದಳಂದಿನ ಭಂಗಿಯಂ ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ಯಂ ಪೇಯ್ದು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ ಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ
೭೨ ಈಕೆ ಅತ್ಯಂತ ಸುಕುಮಾರಿ, ಎತ್ತಿ ಉಪಚರಿಸಿರಿ!” ಎಂದು ಕೊಂಕಾಗಿ ನುಡಿದನು. ಅಣಕಾಟವನ್ನು ಸವಣನಾದರೂ ಸಹಿಸಿಕೊಂಡಾನೇ! ೬೯. ದೈವಾನುಗ್ರಹದಿಂದ ಇಂದು ಬರಬಹುದಾಗಿದ್ದ ಮರಣವು ತೊಲಗಿ ಹೋಯಿತು ! ಕಿವಿಯ ಆಭರಣವಾದ ನೆಯ್ದಿಲ ಹೂ ಇಂದು ಕರ್ಣಾಭರಣವಾಗದೆ, ಸಾಯುವ ಸಂದರ್ಭವು ಸನ್ನಿಹಿತವಾದ ಕಾರಣ, ಸೆಳೆದ ಒಂದು ಆಯುಧದಂತಾಯಿತಲ್ಲ ! ೭೦. ಹಿಂದಣ ರಾತ್ರಿ ಸಂಭವಿಸಿದ ಹೊಲಸಿನ ಕೆಲಸವನ್ನು ಯಶೋಧರನು ಈ ರೀತಿ ಮೂದಲೆಯ ಮಾತಾಗಿ ತಿಳಿಸಿದನು. ಜಾರೆಯಾದ ಅಮೃತಮತಿಗೆ ಇದು ಗೊತ್ತಾಗದಿರಲಿಲ್ಲ. ಆಗ ಅವಳು ಒಮ್ಮೆ ಬೇಸತ್ತಳು. ಚೇತರಿಸಿಕೊಳ್ಳುವಾಗ ಯಶೋಧರನು ಅಲ್ಲಿರಲಿಲ್ಲ. ಅವನು ಮನಸ್ಸು ಕದಡಿದುದರಿಂದ ಅಲ್ಲಿ ನಿಲ್ಲಲಾರದೆ ತಾಯಿಯ ಬಳಿಗೆ ತೆರಳಿದ್ದನು. ೭೧. ಮಗನು ಬಂದಾಗ ಚಂದ್ರಮತಿ ಅವನ ಮುಖವನ್ನೇ ಗಮನವಿಟ್ಟು ನೋಡಿದಳು. ಪುತ್ರವಾತ್ಸಲ್ಯದ ಆಧಿಕ್ಯದಿಂದ ಅವಳ ಮೊಲೆಹಾಲು ತಾನಾಗಿಯೆ ಉಕ್ಕಿ ಹರಿಯಿತು. ಅದುವೇ ಯಶೋಧರನಿಗೆ ಪವಿತ್ರ ಸ್ನಾನಜಲ ವಾಯಿತು. ತಾಯಿಯ ಪಾದಗಳಿಗೆರಗಿದ ಮಗನನ್ನು ಮೇಲಕ್ಕೆತ್ತಿ ತಾಯಿ ಚಂದ್ರಮತಿ ಹಲವು ರೀತಿಯಲ್ಲಿ ಅವನನ್ನು ಹರಸಿದಳು ; ಪ್ರೀತಿಯಿಂದ ಅಪ್ಪಿಕೊಂಡಳು. ಅತ್ತಿತ್ತ ಕೆದರಿ ಹೋದ ಮುಂಗುರುಳನ್ನು ಹಿಂದಕ್ಕೆ ನೇವರಿಸುತ್ತ ಅವಳು ಮಗನ ಅಂದಿನ ರೀತಿಯನ್ನು ಆಡಿ ತೋರಿಸಿದಳು. ೭೨. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿಕುಮಾರನು ಸರಿಯಾದ (ಪುಣ್ಯದ) ವಿಷಯವನ್ನು ಹೇಳಿ, ಅವನನ್ನು ಧರ್ಮದ ದಾರಿಗೆ ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ ಭವ್ಯಪ್ರಭುಸಭೆಗೆ ಮಂಗಲ ಸಂಪದ್ವಿಲಾಸವು ಶೋಭಿಸುತ್ತದೆ.