________________
ಮೂರನೆಯ ಅವತಾರ
ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರವಾಗಿರೆ ತಾಳಿದ ರಾರೊ ಯಶೋಧರನೃಪೇಂದ್ರ ನೀನಲ್ಲದವರ್ ನಿನಗೆ ಶುಭವೆಂದ ವಂದಿಯ ಮನೆಯಂಗಣದೊಳಗೆ ಪಣು ಪರ್ವಿದ ಮಂದಾ ರ ನಮೇರು ಪಾರಿಜಾತದ ಬನದೊಳ್ ಸಿರಿ ಮೆರೆವುದಕ್ಕೆ ವನಕೇಳಿಗಳಂ ಮನಸಿಜ ಕಲ್ಪಲತಾನಂ ದನಮೆನೆ ಬಿಂಕಕ್ಕೆ ಕೊಂಕಿದಬಲಾಜನಮಂ ನನೆಕೊನೆವೋಗಿಸುತಿರ್ಪುದು ಮನುಜ ಮನೋಭವ ಭವದ್ಗೀಳಾಸವಸಂತಂ ಬಳೆಗೋದುದು ಕೀರ್ತಿದಿಶಾ ಕಳಭಂಗಳ ನಿಗವಂಗಳೊಳ್ ರಿಪುಕಾಂತಾ ವಳಿಯೊಳ್ ಭವತಾಪಂ ಬಳೆಗಳೆಲಸ ತಾನದಕ್ಕೆ ಮಚ್ಚರಿಸುವವೋಲ್ ಉದಧಿಪರಿಯಂತಮಿಳೆಯೊಳ ಗೊದವಿದ ನಿನ್ನಾಜ್ಞೆ ಮಣಿಕಿರೀಟಂಗಳನೀ ಅದೆದುರುಳೆ ನೂಂಕಿ ಕುಳ್ಳಿ
ರ್ದುದು ನೆತ್ತಿಯ ಮೇಲೆ ಸಕಲಭೋಪಾಲಕರಾ
೧. “ಯಶೋಧರ, ವಿಸ್ತಾರವಾದ ಎದೆಯಲ್ಲಿ ನಿತ್ಯವಸಂತವನ್ನು ನೆಲೆ ಗೊಳಿಸಿ, ಅಲ್ಲಿ ಶ್ರೀವನಿತೆಗೆ ಆಣಿಮುತ್ತಿನ ಹಾರವನ್ನು ಉಯ್ಯಾಲೆಯಾಗಿ ಮಾಡಿ, ಅದರಲ್ಲಿ ಅತ್ತಿತ್ತ ತೊನೆದಾಡುವಂತೆ ಮಾಡುವ ಭೂಪತಿಗಳು ನೀನಲ್ಲದೆ ಇನ್ನಾರಿದ್ದಾರೆ.೪೦ ೨. ನಿನಗೆ ಮಂಗಲಾಶಂಸನ ಮಾಡುತ್ತಿದ್ದಾರೆ ಎಂದಿಗಳು. ಅವರ ಮನೆಯಂಗಳದಲ್ಲಿ ಲಕ್ಷ್ಮಿದೇವಿ ವನಕ್ರೀಡೆಯನ್ನಾಡುತ್ತಾ ಇದ್ದಾಳೆ. ಇದಕ್ಕೆ ಅಲ್ಲಿ ಫಲವತ್ತಾಗಿ ಹಬ್ಬಿ ಬೆಳೆದ ಮಂದಾರ, ನಮೇರು (ಸುರಗಿ) ಪಾರಿಜಾತ ಮುಂತಾದ ಮರಗಳೇ ಒಂದು ತೋಪಾಗಿ ಪರಿಣಮಿಸಿವೆ.೪೧ ೩. ಮನುಷ್ಯರಲ್ಲಿ ನೀನೇ ಮನೋಭ ವನಾಗಿದ್ದೀಯೆ ಕಾಮನ ಕಲ್ಪವಲ್ಲಿವಿತಾನದ ನಂದನದಂತಿರುವ ಅಬಲಾಜನರು, ನಿನ್ನ ವಿಲಾಸವಸಂತದಲ್ಲಿ, ಬೆಡಗಿನ ಬಿಂಕದಿಂದ ಬಾಗಿಕೊಂಡಿದ್ದು, ನನೆಕೊನೆವೋಗು ತ್ತಿದ್ದಾರೆ.೪೨ ೪. ನಿನ್ನ ಪ್ರತಾಪ ಶತ್ರುಪತ್ನಿಯರ ಕೈಗಳಲ್ಲಿರುವ ಬಳೆಗಳನ್ನು ಕಂಡು ಅಸೂಯೆಯಿಂದ ಅವುಗಳನ್ನು ಕಳಚಿ, ಕೀರ್ತಿದಿಶಾಕಳಭಗಳ ದಾಡೆಗಳಿಗೆ ಆ ಬಳೆಗಳನ್ನು ತೊಡಿಸುತ್ತಾ ಇದೆ.೪೩ ೫. ನಿನ್ನ ಆಜ್ಞೆ ಕಡಲತಡಿಯವರೆಗೂ ವ್ಯಾಪಿಸಿದೆ. ಅಷ್ಟೇ ಅಲ್ಲ, ಎಲ್ಲ ಭೂಪಾಲಕರ ರತ್ನಕಿರೀಟಗಳನ್ನೆಲ್ಲ ಸೆಳೆದು, ತುಳಿದು ಉರುಳಿಸಿ, ತಳ್ಳಿ ಅವರ ನೆತ್ತಿಯ ಮೇಲೆಯೇ ಕುಳಿತುಕೊಂಡಿದೆ.