________________
ಎರಡನೆಯ ಅವತಾರ
ಒಲಿಸಿದ ಪೆಣ್ ಪುರೊಳ್ ಸಂ ಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾ ಸಲಿಸಿ ಸಲೆ ನೆರೆವ ಮುಕ್ತಿಯ ನೋಲಿಸುವೆನಿನೊಲ್ಲೆನುಳೆದ ಪೆಂಡಿರ ನಣಂ ಎಂದಿಂತು ಬಹುವಿಕಲ್ಪದ ದಂದುಗದೊಳೆ ಬೆಳಗುಮಾಡಿ ಮೆಯುರಿದೆರ್ದಂ ಬಂದು ತೊಡೆವೊಯ್ದು ಬೋಧಿಸಿ ದಂದದಿನೆಸಗಿತ್ತು ಸುಪ್ರಭಾತಾದ್ಯಂ ಕೃತನಿತ್ಯದಾನನಾವೀಕ್ಷಿತಚ್ಛತನಾಷ್ಟ್ರ ಕಪಿಳನೊಯ್ಯನೆ ಸಾರ್ದ೦ ಕತಿಪಯ ಪರಿಚಿತಪರಿಜನ ಚತುರವಚಃಪ್ರಚಯರುಚಿಯನರಸಿಯನರಸಂ ಲಂಪಣನವೊಲೇನಾನುಮ ಲಂಪಿನ ನಗೆನುಡಿಯ ನೆವದೆ ನೆಯ್ದಿಲ ಪೂವಿಂ ದಂ ಪೊಯ್ಕೆ ಮೂರ್ಛವೋದಟ್ ಸಂಪಗೆಯಲರ್ಗ೦ಪು ಪೊಯ್ದು ತುಂಬಿಯ ತೆದಿಂ ಅಕಟಕಟ ನೋಂದಳೆತಿರೆ | ಸುಕುಮಾರಿಯನೆನುತುಮಿನಿತು ಕೊಂಕಿಂ ನುಡಿದಂ ಪ್ರಕುಪಿತಚಿತ್ತಂ ಭೂ ನಾ
ಯಕನೇನಣಕಕ್ಕೆ ಸವಣನುಂ ಸೈರಿಪನೇ ೬೪. ನಾನು ಒಲಿಸಿಕೊಂಡ ಹೆಂಡತಿ ಚಂಚಲೆಯಾಗಿ ಅನ್ಯಾಸಕ್ತಳಾದಳೆಂದಮೇಲೆ, ಏನು ಸುಖ? ಇದರ ಬದಲಾಗಿ ಮುಕ್ತಿಯನ್ನೇ ಒಲಿಸಿಕೊಂಡರೆ ನನಗೆ ಪರಮಸುಖದ ಸಂಪತ್ತೂ ದೊರೆಯುತ್ತದೆ ; ಆ ಮುಕ್ತಿಯ ಒಲವೂ ನನ್ನ ಮೇಲೆ ಸ್ಥಿರವಾಗಿರುತ್ತದೆ. ಹೀಗೆಂದಾದ ಮೇಲೆ ಉಳಿದ ಸ್ತ್ರೀಯರ ಯಾವ ಬಗೆಯ ನಂಟೂ ನನಗೆ ಬೇಕಾಗಿಲ್ಲ”. ೬೫. ಎಂದೆಲ್ಲ ಹಲವು ಬಗೆಯಾಗಿ ವಿಚಾರ ಮಾಡಿದ ಯಶೋಧರನು ಅದರಲ್ಲಿ ತೊಳಲಾಡಿ ಕಣ್ಣಲ್ಲೆ ಬೆಳಗುಮಾಡಿದನು. ಸುಪ್ರಭಾತದ ಮಂಗಲವಾದ್ಯಗಳು ಮೊಳಗಿದವು. ಆ ಧ್ವನಿ ಅವನನ್ನು ತೊಡೆತಟ್ಟಿ ಎಬ್ಬಿಸುವಂತಿತ್ತು. ೬೬. ಅವನು ಮೆಯುರಿದು ಎದ್ದನು. ನಿತ್ಯದಂತೆ ದಾನವನ್ನಿತ್ತನು. ತುಪ್ಪದಲ್ಲಿ ತನ್ನ ಮುಖವನ್ನು ನೋಡಿಕೊಂಡನು. ಕಪಿಲೆ ಹಸುವನ್ನು ಮೆಯುಟ್ಟಿ ಮುಂಬರಿದನು ; ರಾಣಿಯ ಸಮೀಪವನ್ನು ಸೇರಿದನು. ಅವಳು ಕೆಲವು ಮಂದಿ ಪರಿಚಿತ ಸೇವಕ ಜನರ ಚತುರವಚನಗಳನ್ನು ಕೇಳುತ್ತಾ ಮೆಚ್ಚುಗೆಯನ್ನು - ಪ್ರಕಟಿಸುತ್ತಿದ್ದಳು. ೬೭. ಯಶೋಧರನು ಕಾಮಾಸಕ್ತನೆನ್ನುವಂತೆ ಬಳಿಸಾರಿ ಏನೇನೋ ಶೃಂಗಾರದ ಚಾಟುವಚನಗಳನ್ನಾಡಿ, ಅದೇ ನೆವದಿಂದ ಅವಳನ್ನು ನೆಯ್ದಲ ಹೂವಿನಿಂದ ಹೊಡೆದನು. ಒಡನೆಯೇ ಅಮೃತಮತಿ ಮೂರ್ಛಾಕ್ರಾಂತೆಯಾದಳು. ಸಂಪಗೆಯ ಹೂವಿನ ಕಂಪು ತಾಗಿತೊಡನೆಯೆ ತುಂಬಿ ಮೆಯರೆಯುತ್ತದಷ್ಟೆ. ಅವಳ ನಟನೆಯಿಂದ ಯಶೋಧರನು ರೋಷಾವಿಷ್ಟನಾದನು. ೬೮, ಅದನ್ನು ವಕ್ರವಾರದ ಮಾತಿನ ರೂಪದಲ್ಲಿ ಕಾಣಿಸಿದನು : “ಅಯ್ಯಯ್ಯೋ! ಬಹಳ ಬಹಳ ನೋವಾಯಿತು !