________________
ಯಶೋಧರ ಚರಿತೆ
ಬದಗುಳಿಗನ ತೋಳುಟ್ಟಿದ ಸುದತಿಯೊಳಿಂಬಾಗದಂತೆ ಕೆಟ್ಟುದು ಪುತಿ ಮು ಟ್ಟಿದ ದುಗ್ಗದಂತೆ ನೀರ್ಮು ಟ್ಟಿದ ಜೇನೆಯ್ಯಂತೆ ಪತಿಗೆ ಶಯಾತಳದೊಳ್ ಆ ಗಂಡನನಪ್ಪಿದ ತೋಳ್ ಪೊಗಂಡನನಪುವಂತೆ ಮಾಡಿದ ಬಿದಿಯಂ ಮೂಗಂ ಕೊಟ್ಟಿಗೆಯೊಳ್ ಪೋಗೊರಸದೆ ಕಂಡೆನಾದೊಡೇಂ ಬಿಟ್ಟವೆನೇ ಎನೆ ಕೇಳು ಮಾರಿದತ್ತಾ ವನಿಪನವಂಗಭಯರುಚಿ ಬಿಕ್ಕಿಂತೆಂದಂ ಮನಸಿಜನ ಮಾಯೆ ವಿಧಿವಿಲ್ಲ ಸನದ ನೆರಂಬಡೆಯೆ ಕೊಂದು ಕೂಗದೆ ನರರಂ
ಪದವಿಯ ರೂಪಿನ ಸೊಬಗಿನ ಮದಮಂ ಮಾಡುವರ ಮೂಗಿನೊಳ್ ಪಾತ್ರಮನಾ ಡದೆ ಮಾಣದನಂಗನ ಕೃತಿ ಸುದತಿಯರ ವಿಕಾರವೆಂಬ ವಿದ್ಯಾಬಲದಿಂ ಆ ರಾಜಕುಮಾರ ಬಟ್ ಕಾರೂಪಿನ ಪೆಂಡಿರಿಂತು ಕಟಿಪಾದೊಡೆ ಚಿಃ ಕೂರಿಸುವ ಕೂರ್ಪ ಮಾತಂ | ಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂದಂ
೬೩
೫೯. ಹಾಲಿಗೆ ಹುಳಿ ತಾಗಿದರೆ, ಜೇನಿಗೆ ನೀರು ಬೆರೆತರೆ ಸವಿಯುಳಿಯುತ್ತದೆಯೆ ? ಯಶೋಧರನಿಗೂ ಹಾಸಿಗೆಯಲ್ಲಿದ್ದಾಗ, ಅತ್ಯಂತ ಕುತ್ತಿತನೊಬ್ಬನ ತೋಳು ತಗುಲಿದ ತನ್ನ ಪತ್ನಿಯಲ್ಲಿ ಒಂದಿಷ್ಟೂ ಸವಿಯುಳಿಯದೆ ಹೋಯಿತು. ೬೦. ಇಷ್ಟು ಹೇಳು ತ್ತಿದ್ದಂತೆಯೇ ತನ್ಮಯತೆಯಿಂದ ಕೇಳುತ್ತಿದ್ದ ಮಾರಿದತ್ತನು ಉದ್ರಿಕ್ತನಾದನು. ಅಂತಹ ಗಂಡನನ್ನು ಅಪ್ಪಿಕೊಂಡಿದ್ದ ತೋಳು ಪೋಗಂಡ (ವಿಕೃತ ಮನುಷ್ಯನನ್ನು ಅಪ್ಪುವಂತೆ ಮಾಡಿದುದು ಆ ವಿಧಿ. ಅದರ ಮೂಗನ್ನು ಕೊಯ್ದು ಇಟ್ಟಿಗೆಯಲ್ಲಿ ಹಾಕಿ ತಿಕ್ಕದೆ ಬಿಟ್ಟೇನೆ” ಎಂದು ಉದ್ಗರಿಸಿದನು. ೬೧. ಇದನ್ನು ಕೇಳಿ, ಅಭಯರುಚಿ ಕುಮಾರನು ಅವನಿಗೆ ವಿಧಿಯ ಸ್ವಭಾವವನ್ನು ವಿವರಿಸಿದನು. “ವಿಧಿವಿಲಾಸದ ನೆರವು ದೊರೆತಾಗ ಮನಸಿಜನ ಮಾಯೆ ಮನುಷ್ಯರನ್ನು ಸರ್ವನಾಶಗೊಳಿಸಿ ಜಯಘೋಷವನ್ನು ಮಾಡುತ್ತದೆ. ೬೨. ಈ ಆಟಕ್ಕೆ ದೊರೆಯುವ ರಂಗಸ್ಥಳವೆಂದರೆ ಅಧಿಕಾರಮದ, ರೂಪಮದ ಮತ್ತು ಸೌಭಾಗ್ಯ ಮದವುಳ್ಳವರ ಮೂಗು. ಈ ರೀತಿ ದುರಭಿಮಾನ ಪಡುವವರ ಕಣ್ಣ ಎದುರಿನಲ್ಲಿಯೇ ಕಾಮನು ಕಾಮಿನಿಯರ ಮುಖಾಂತರ ಬಗೆ ಬಗೆಯ ನಾಟಕಗಳನ್ನು ಆಡಿಸುತ್ತಾನೆ”೩- ೬೩. ಮಾರಿದತ್ತನಿಗೆ ಮನಸ್ಸು ತಡೆಯಲಿಲ್ಲ. “ಅಂತಹ ರೂಪವತಿಯಾದ ಪತ್ನಿಯೂ ಹಾಗೆ ತ್ಯಾಜ್ಯಳಾದಳೆಂದರೆ, ಪತ್ನಿಯನ್ನು ಪ್ರೀತಿಸುವ, ಅಥವಾ ಅವರಿಂದ ಪ್ರೀತಿಯನ್ನು ಪಡೆಯುವ ಮಾತು ಮಾರಿಗೇ ತೃಪ್ತಿ ! ಅಂಥವರ ಐಶ್ವರ್ಯವನ್ನೆಲ್ಲ ರಾಶಿ ಮಾಡಿ ಬೆಂಕಿಗೆ ಹಾಕಬೇಕು! ಆಃ!*