________________
ಎರಡನೆಯ ಅವತಾರ
ಅಸಿಲತೆ ರಣರೌತಮದೀ ಮಸಿಮುಸುಡನ ಜೀವಕಪ್ಪಿನಂ ಕಂದಿದೊಡೆ ಸೈಸೆಯನಡರ್ದನ್ನ ಕೀರ್ತಿ ಪ್ರಸರದ ಕುಡಿ ಕಯ್ಕೆಸೊರೆಯ ಕುಡಿಯವೊಲಕ್ಕುಂ
ಅಳಿಪುಡೆ ನೋಡಿದೊಡ ನಟಿವುದೆ ಪೆಣ್ ತಪ್ಪಿ ನಡೆಯೆ ಚಿಃ ಕಿಸುಗುಳಮೆಂ ದುಡಿವುದೆ ಗೆಲ್ಲಂಗೊಂಡಾ ಪುಟು ಪುಟ್ಟುವ ನರಕದೊಳಗೆ ಬೀಟ್ಟಿನ ಚದುರಂ
೫೬
ಎಂದು ನೆನೆದಿಕೆಯಲೊಲ್ಲದೆ ಬಂದರಸಂ ಮುನ್ನಿನಂತೆ ಪವಡಿಸೆ ತಾನುಂ ಬಂದು ಮದರಸನೋಜಿಗಿದ ನಂದೊಯ್ಯನೆ ಸಾರ್ದು ಪೆಗೆ ಪಟ್ಟಿರ್ಪಾಗಳ
೫೭
೫೮
ಮುಟ್ಟಿದೊಡೆ ಸುಖದ ಸೋಂಕಂ ಪುಟ್ಟಿಸುವಾ ವಾಮೆಯಾದೊಡೆ ಮುನ್ನಂ ಬಟ್ಟಿದುವೆನಿಸುವ ಮೊಲೆ ನಿ
ರ್ವೆಟ್ಟಿದುವಾದುವು ನೃಪಂಗೆ ಬೆನ್ನೋಂಕಲೊಡಂ ಬೇಕಲ್ಲದೆ ಇರುವೆಯನ್ನೆದುರಿಸಬಹುದೆ? ಕೇಸರಿ ಇರಿಯುವುದು ನರಿಯನ್ನಲ್ಲ; ಕರಿಯನ್ನು! ೫೫. ರಣರಂಗದಲ್ಲಿ ವೀರಪುಂಗವರ ರಕ್ತದಲ್ಲಿ ಮಿಂದು ಮಡಿಯಾದ ಈ ಅಸಿಲತೆ ಈ ಕರಿಮುಸುಡನ ಕೊಳಕನ ಜೀವದ ಕೆಸರಿನಿಂದ ಕಾಂತಿ ಕಳೆದು ಕೊಳ್ಳಬೇಕೆ ? ಹಾಗೆ ಆದರೆ ಎಂಟು ದಿಕ್ಕುಗಳ ತುದಿಯವರೆಗೂ ಹಬ್ಬಿದ ನನ್ನ ಕೀರ್ತಿಯ ಕುಡಿಯು ಕಹಿಸೋರೆಯ ಕುಡಿಯಂತಾಗದೆ ? ೫೬. ಅವಳಿಗೆ ಅನ್ಯನಲ್ಲಿ ಆಸೆಯುಂಟಾಗಿದೆಯೆಂಬುದನ್ನು ನಾನು ಈಗ ಕಂಡಿದ್ದೇನೆ. ಆದ ಕಾರಣ ಅವಳನ್ನು ಕತ್ತರಿಸಿ ಬಿಸಾಡಿದರೆ ಅವಳ ಆಸೆ ಕೊನೆಗೊಳ್ಳುವುದೇ ? ಹೆಣ್ಣು ತಪ್ಪಿ ನಡೆದಾಗ ಅವಳನ್ನು “ಚಿಃ ! ಹೊಲಸು!” ಎಂದು ಹಾಗೆಯೇ ಬಿಟ್ಟುಬಿಡುವುದೆ ? ಹಾಗೆ ಗೆಲುವು ಪಡೆದು ಹುಳು ಹುಟ್ಟುವ ನರಕದಲ್ಲಿ ಬೀಳಬೇಕಾದೀತು. ಇದು ಚಾತುರ್ಯವಲ್ಲ!” ೫೭. ಹೀಗೆ ಆಲೋಚಿಸಿ ಖಡ್ಗಪ್ರಹಾರದ ಯೋಚನೆ ಸಲ್ಲದೆಂದೇ ನಿರ್ಧರಿಸಿ ಅವನು ಅಲ್ಲಿ ನಿಲ್ಲದೆ ಅರಮನೆಗೆ ಮರಳಿ ಮೊದಲಿನಂತೆ ಹಾಸಿಗೆಯಲ್ಲಿ ಬಿದ್ದು ಕೊಂಡನು. ಸ್ವಲ್ಪ ಹೊತ್ತಿನಲ್ಲಿ ಅಮೃತಮತಿಯೂ ಹಿಂತಿರುಗಿದಳು. ರಾಜನು ಗಾಢನಿದ್ರೆಯಲ್ಲಿದ್ದಾನೆಂದೇ ಭಾವಿಸಿ, ಮೆಲ್ಲನೆ ಸಮೀಪಿಸಿ ಮಲಗಿದಳು. ೫೮. ಅವನ ಬೆನ್ನಿಗೆ ಅವಳ ಸ್ಪರ್ಶವುಂಟಾಯಿತು. ಮೊದಲು ಅವಳ ಸ್ಪರ್ಶಮಾತ್ರದಿಂದಲೇ ಅವನು ಸುಖವನ್ನನುಭವಿಸುತ್ತಿದನು. ಈಗ ವಾಮೆಯು ಪ್ರತಿಕೂಲೆಯಾಗಲು ಮೊದಲು ವೃತ್ತಪೀನವಾಗಿದ್ದ ಸ್ತನಗಳು ಈಗ ಅವನಿಗೆ ಜೋಲುವ ಮೊಲೆಗಳೆನ್ನಿಸಿದುವು.