________________
೪೦
ಯಶೋಧರ ಚರಿತೆ
ತೋರಮುಡಿವಿಡಿದು ಕುಡಿಯಂ ನಾರಂ ತದೆದಂತೆ ತದೆದು ಬೀಟೆಯ ಕಾಲಿಂ ಬಾರೇತೆ ಬದಗನೊದೆದೊಡೆ ಕೇರೆ ಪೊರಳ್ಳಂತೆ ಕಾಲಮೇಲೆ ಪೊರಟ್ಟಲ್ ತಡವಾದುದುಂಟು ನಲ್ಲನೆ ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ ತೊಡೆಯೇಜೆಸಿ ಕೇಳಿಕೆಯಾ ದೊಡೆ ನೋಡುತ್ತಿರ್ದೆನುಂತೆ ನಿಲಲುವೆನೇ ಕಿವಿಸವಿ ದನಿ ಕಣವಿ ರೂ ಪವಧರಿಸೆಲೆ ಗಜವೆಡಂಗ ನೀನುಚಿದೊಡೆ ಸಾ ವವಳೆನಗೆ ಮಿಕ್ಕ ಗಂಡರ್ ಸವಸೋದರರೆಂದು ತಿಳಿಸಿದ ನಂಬುಗೆಯಂ ಆಗಳ್ ಬಾಳ್ ನಿಮಿರ್ದುದು ತೊಲ್ ತೂಗಿದುದು ಮನಂ ಕನತ್ಕುದಿರ್ವರುಮನೆರ ಅತ್ಯಾಗ ಮಾಡಲ್ ಕೃತಿ ಬಂ ದಾಗಳ್ ಮಾಣೆಂಬ ತೆಲಿದೆ ಪೇಸಿದನರಸಂ ಪರಪರನಲ್ಲದೀ ಪುಟ ಕರನಳೆವುದೆ ಮದ್ದುಜಾಸಿಯಿದು ಕೈಯಿಕ್ಕಲ್ ಕರಿ ಕರಿಗಲ್ಲದಿಯಿಂಸೆಗೆ | ಪರಿವುದೆ ಹರಿ ಕರಿಯನಲ್ಲದಿವುದೆ ನರಿಯಂ
೫೪ ರಾಜಹಂಸದ ಮೇಲೆರಗುವಂತೆ, ಅವಳ ಬೆನ್ನಿಗೆ ಚರ್ಮದ ಬಾರಿನಿಂದ ಬಲವಾಗಿ ಬಾರಿಸಿದನು. ೫೦. ಅವಳ ತುಂಬುಗೂದಲ ತುರುಬು ಹಿಡಿದು, ಕುಡಿಯನು ನಾರನ್ನು ಜಜ್ಜುವಂತೆ ಅವಳನ್ನು ಜಜ್ಜಿದನು. ಇಷ್ಟೂ ಸಾಲದೆಂಬಂತೆ ಅವಳ ಚರ್ಮವು ಏಳುವಂತೆ ಬಿರಿದ ಕಾಲಿನಿಂದ ಒದ್ದನು. ಆದರೂ ಅವಳು ಅವನ ಕಾಲ ಮೇಲೆ ಬಿದ್ದು ಕೇರೆ ಹೊರಳುವಂತೆ ಹೊರಳಿದಳು. ೫೧. “ನಲ್ಲನೆ, ತಡವಾದುದು ನಿಜ, ಇಷ್ಟಬಂದಂತೆ ಬಡಿ. ಆದರೆ ನನ್ನ ಮೇಲೆ ಕೋಪಿಸುವುದು ಮಾತ್ರ ಬೇಡ. ನಾನು ನಿಷ್ಕಾರಣವಾಗಿ ತಡೆದು ನಿಂತೆನೇ ? ಅರಸನೆಂಬ ಆ ಪಾಪಿ ನನ್ನನ್ನು ತೊಡೆಯೇರಿಸಿಕೊಂಡು ಶೃಂಗಾರಚೇಷ್ಟೆಗೆ ತೊಡಗಿದ. ನಾನು ನೋಡುತ್ತ ಸುಮ್ಮನಿರಬೇಕಾಯಿತು. ೫೨. ಗಜವೆಡಂಗ, ನನಗೆ ನಿನ್ನ ದನಿ ಕಿವಿಗೆ ಸವಿ, ನಿನ್ನ ರೂಪ ನನ್ನ ಕಣ್ಣಿಗೆ ಸವಿ, ನೀನೂ ನನ್ನ ಕೈ ಬಿಟ್ಟರೆ ನನಗೆ ಮರಣವೇ ಶರಣು ! ಬೇರೆ ಗಂಡಸರೆಲ್ಲ, ನನಗೆ ಸಹೋದರಸಮಾನರೇ ಸರಿ, ನಂಬು” ಎಂದು ಹಲವು ರೀತಿಯಲ್ಲಿ ಅವನಿಗೆ ವಿಶ್ವಾಸವುಂಟಾಗುವಂತೆ ಸಮಾಧಾನ ಹೇಳಿದಳು. ೫೩. ಒಡನೆಯೇ ಅರಸನ ಕೈಯ ಖಡ್ಗವು ಮೇಲೆದ್ದಿತು : ತೋಳು ತೂಗಿತು. ಮನಸ್ಸು ಕಿಡಿ ಕಾರಿತು. ಒಂದೆ ಪೆಟ್ಟಿಗೆ ಇಬ್ಬರನ್ನೂ ಇಬ್ಬಾಗ ಮಾಡುವ ಎಣಿಕೆ ಮಸಗಿತು. ಅಷ್ಟರಲ್ಲಿ ಫಕ್ಕನೆ ಸಂಯಮ ತಲೆದೋರಿ, “ಛೇ! ಬೇಡ!” ಎಂದು ಅರಸನ ಮನಸ್ಸು ಹೇಸಿಕೊಂಡಿತು. ೫೪. “ನನ್ನ ತೋಳಿನ ಈ ಕರವಾಲವು ವೈರಿನರೇಂದ್ರರನ್ನು ಇರಿಯಬೇಕೇ ಹೊರತು, ಈ ಕ್ಷುದ್ರರನ್ನು ಇರಿಯಲಾಗದು. ಆನೆ ಆನೆಯನ್ನೆದುರಿಸ