SearchBrowseAboutContactDonate
Page Preview
Page 39
Loading...
Download File
Download File
Page Text
________________ ಯಶೋಧರ ಚರಿತ ತನುಸೋಂಕಾಲಿಂಗನ ಚುಂ ಬನದೆ ಸುರತದಿಂ ಸವಿ ರತಪ್ರೌಢಿಯಿನಾ ತನುವಂ ಮಯಿಸೆ ಅಳೆಯದೆ ಮನೋಜನಾಡಿಸುವ ಜಂತ್ರದಂತಿರೆ ನೆರೆದರ್‌ ಸುರತ ಸುಖಪಾರವಶ್ಯಂ ತರೆ ನಿದ್ರಾಭರಮನಿರ್ವರುಂ ಶಿಥಿಲತನೂ ಪರಿರಂಭಣದಚ್ಚಳಿಯದೆ ಪರಿವೇಷ್ಟಿತ ಬಾಹುವಳಯದೊಳ್ ಕಣ್ಣಯ್ಯರ್ ಪುರ್ವೆ೦ಬ ಜವಳಿಗಟ್ಟಿನ ಕರ್ವಿನ ಬಿಲ್ಲಿಂಗೆ ಬಿಗಿದ ಮಧುಕರಮಾಲಾ ಮೌರ್ವಿಯನೆ ಮುಗಿದ ಕಣ್ಣಳ ಪರ್ವುಗೆಯೊಳ್ ಮೆದುದವರ ತಳಮದುಜುಗಲ್ ಹೃದಯ ಪ್ರಿಯರಂತೊಅಗಿದ ಪದದೊಳ್ ಗರಟಗೆಯ ಜಾವದುಕ್ಕಡದುಲಿ ಮ ಗ್ಗಿದ ಪೊತ್ತು ಸೂಟ್ ಕರುಮಾ ಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ ಬಿನದಕ್ಕೆ ಮಾಡುತ್ತಿರೆ ನು ಇನಿ ನಿದ್ರೆಗೆ ಕತಕಬೀಜಮಾಯ್ತನೆ ಮೃಗಲೋ ಚನೆ ತಿಳಿದಾಲಿಸಿ ಮುಟ್ಟಿದ ಮನಮನೆ ತೊಟ್ಟನೆ ಪಸಾಯದಾನಂಗೊಟ್ಟಲ್ ೨೮ ೨೪, ಒಬ್ಬರ ದೇಹ ಇನ್ನೊಬ್ಬರ ದೇಹಕ್ಕೆ ತಾಗಿತು ; ಪರಸ್ಪರ ಆಲಿಂಗಿಸಿಕೊಂಡರು ; ಚುಂಬಿಸಿದರು. ಕಂಠಧ್ವನಿ ಸವಿಯಾಗಿ ಕೇಳತೊಡಗಿತು. ಇಂತಹ ಸಮಾಗಮ ಪ್ರೌಢಿಮೆ ಯಿಂದ ಅವರಿಬ್ಬರೂ ಮೈಮರೆತರು. ಅವರಿಗೆ ಯಾವುದರ ಅರಿವೂ ಇಲ್ಲವಾಯಿತು. ಕಾಮನು ಕುಣಿಸುವ ಯಂತ್ರದಂತೆ ಅವರಿಬ್ಬರೂ ಒಂದುಗೂಡಿದರು. ೨೫. ಸಂಭೋಗ ಸುಖವು ಅವರಿಗೆ ಪರವಶತೆಯನ್ನುಂಟುಮಾಡಿತು. ಆಗ ಅವರು ಶರೀರಾಲಿಂಗನದ ಬಿಗಿ ತಪ್ಪಿದರೂ, ಅಚ್ಚಳಿಯದೆ ಪರಸ್ಪರರ ತೋಳುಗಳು ಹೆಣೆದುಕೊಂಡು ನಿದ್ರಾ ಮುದ್ರಿತರಾದರು. ೨೬. ಗಾಢನಿದ್ರೆಯಲ್ಲಿ ಮುಳುಗಿದ ಅವರ ಕಣ್ಣುಗಳು ಮುಚ್ಚಿ ಕೊಂಡಿದ್ದಾಗ ಅವರ ಹುಟ್ಟು ಎರಡು ಕಬ್ಬುಗಳನ್ನು ಕೂಡಿಸಿ ಕಟ್ಟಿದ ಬಿಲ್ಲಿನಂತೆ ಭಾಸ ವಾಗುತ್ತಿತ್ತು. ಹೀಗೆ ಕಟ್ಟಿದ ಬಿಲ್ಲಿಗೆ ಹೆದೆಯನ್ನಾಗಿ ಭ್ರಮರ ಮಾಲೆಯನ್ನು ಬಿಗಿದಂತೆ ಅವರ ರೆಪ್ಪೆಯ ರೋಮಗಳು ಮೆರೆಯುತ್ತಿದ್ದವು. ೨೭. ಪ್ರಣಯಿಗಳಿಬ್ಬರೂ ಮಲಗಿದ ಹೊತ್ತು. ಜಾವದ ಉಕ್ಕಡಗಳಲ್ಲಿ ಅತ್ತಿತ್ತ ಸುತ್ತುತ್ತಿರುವ ಯಾಮಿಕರ ಸದ್ದೆಲ್ಲಾ ಅಡಗಿತು. ಆಗ ಆ ಅರಮನೆಯ ಪಕ್ಕದಲ್ಲಿದ್ದ ಪಟ್ಟದಾನೆಯ ಮಾವುತನು, ತನ್ನ ಸರದಿ ಬಂದಂತೆ ತನ್ನ ಮನಸ್ಸಂತೋಷಕ್ಕಾಗಿ ಹಾಡತೊಡಗಿದನು. ೨೮. ಅವನ ಹಾಡಿನ ಇಂಪಾದ ಧ್ವನಿ ಅಮೃತಮತಿಯ ನಿದ್ದೆಗೆ ಕತಕಬೀಜ (ತಿಳಿಗೊಳಿಸುವ ಬೀಜ ; ಚಲ್ವಿಜ ಎಂದು ಹೇಳುತ್ತಾರೆ) ವಾದಂತಾಯಿತು. ಅವಳು ನಿದ್ದೆ ತಿಳಿದೆದ್ದಳು ; ಹಾಡನ್ನು ಕಿವಿಗೊಟ್ಟು ಕೇಳಿದಳು. ಅದು ಅವಳ ಮನಸ್ಸನ್ನು ಮುಟ್ಟಿತು. ಕೂಡಲೇ ಆ ಮನಸ್ಸನ್ನು ಮೆಚ್ಚಿನ
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy