________________
ಎರಡನೆಯ ಅವತಾರ
ಗಹಗಹಿಕೆವಡೆದ ವಹಿಣಿಯ ಸುಹಾಹೆ ಝಂಪೆಯದೊಳಮರೆ ಠಾಯದೊಳಂ ನಿ ರ್ವಹಿಸಿ ನೆಲೆಗೊಳಿಸಿ ಬನ್ನಿಕೆ ಮಹಚಾಳೆಯಲ್ಲಿ ಮೂರ್ತಿವಡೆದುದು ರಾಗಂ
ಮಾಳಿಗೆಯೊಳಗಣ ಸೊಡರ್ಗುಡಿ ಡಾಳಂಬಡೆದಂತೆ ರಂಗರಕ್ತಿಯೊಳಮರ್ದು೦ ಪಾಳಿಕೆವಡೆದು ಬಜಾವಣೆ ಮಾಳವಸಿರಿಯೆಂಬ ರಾಗಮಂ ಚಾಳಿಸಿದಂ,
ತಾಳದ ಲಯಮಂ ನೆನೆಯದೆ ಕೇಳಲೊಡಂ ಠಾಯೆ ಜಾತಿಯೋ ಗ್ರಾಹಯುತಂ ಕೇಳಲೊಡಂ ಗೀತಮನೆಂ ದಾಳತಿಯೊಳ್ ಮೆಳೆದು ಪಾಡಿದಂ ರೂಪಕಮಂ
ಅಂತೆಸೆಯೆ ಪಾಡುತಿರೆ ತ ದ್ದಂತಿಪನತಿನೂತ್ನಗೀತ ಪಾತನ ವಿಕಲ ಸ್ವಾಂತೆಗೆ ನೋಡುವ ಕೂಡುವ ಚಿಂತೆ ಕಡಲ್ವರಿದುದಂದು ಬೆಳಗಪ್ಪಿನೆಗಂ
ಉಡುಗೊರೆಯನ್ನಾಗಿ ತೆತೇಬಿಟ್ಟಳು. ೨೯. ಅತ್ಯಾನಂದಗೊಂಡ ಬೆಡಗಿನ ಒಳ್ಳೆಯ ಧ್ವನಿ ಝಂಪೆಯ (ಇದು ಮಾತ್ರೆಗಳ ನಡೆಯುಳ್ಳ ದೇಶೀತಾಳ ವಿಶೇಷ)ದಲ್ಲಿ ಸೇರಿಕೊಂಡಿತು. ಅಲ್ಲಿಂದ ಅದು ಪ್ರಬಂಧ ವಿಶೇಷದಲ್ಲಿ ಮುಂದುವರಿಯಿತು. ಆಮೇಲೆ ವೈಶಿಷ್ಟದ ನರ್ತನಗತಿಯಲ್ಲಿ ಹರಿದು, ಒಂದು ಬಗೆಯ ಕೃತಕದ ನೆಗೆತದಲ್ಲಿ ಆ ರಾಗವು ರೂಪುವಡೆಯಿತು. ೩೦. ಅದೇ ಮಾಳವ ಶ್ರೀಯೆಂಬ ದೇಶೀರಾಗ, ಮಾಳಿಗೆಯೊಳಗಿನ ದೀಪದ ಜ್ವಾಲೆ ಹೆಚ್ಚು ಪ್ರಕಾಶಪಡೆದಂತೆ ಈ ರಾಗವು ರಂಗಶೃಂಗಾರವನ್ನು ಪಡೆಯಿತು. ಅದು ಅಂತೆಯೇ ಸುರಕ್ಷಿತವಾಗಿ ಮುಂಬರಿದು ಸರಿಯಾದ ರೀತಿಯಲ್ಲಿ ನಡೆಯಿತು. ೩೧. ತಾಳದ ಲಯವನ್ನೂ ಎಣಿಸಿಕೊಳ್ಳದೆ ಕೇಳುವಾಗಲೇ ಪ್ರಬಂಧವು ಆಯಾ ಜಾತಿಯ ತಾಳಗತಿಗಳಲ್ಲಿ ತಾನಾಗಿ ಸೇರಿಕೊಂಡೇ ಕೇಳುತ್ತಿತ್ತು. ಈ ರೀತಿಯಲ್ಲಿ ಅವನು ಆ ಹಾಡನ್ನು, ಅದಕ್ಕೆ ಸರಿಯಾದ ರೂಪವನ್ನು ಕೊಟ್ಟು, ಹಾಡುತ್ತಾ ಇದ್ದನು. ೩೫ ೩೨. ಆ ಮಾವುತನು ಆ ರೀತಿ ಅತಿಮಧುರವಾಗಿ ಹಾಡುತ್ತಿದ್ದಾಗ, ಅವನ ಅತಿನೂತನ ವಾದ ಹಾಡು ಕಿವಿಗೆ ಬೀಳುತ್ತಲೇ ಇತ್ತು. ಅಮೃತಮತಿಯ ಮನಸ್ಸು ಆಗ ಕದಡಿ ಹೋಯಿತು. ಅವಳಿಗೆ ಕಣ್ಣಲ್ಲೇ ಬೆಳಗಾಯಿತು. ಬೆಳಗಾಗುವವರೆಗೂ ಅವನನ್ನು ಹೇಗೆ ನೋಡಲಿ, ಹೇಗೆ ಕೂಡಿಕೊಳ್ಳಲಿ ಎಂಬ ಚಿಂತೆಯೇ ಕಡಲಂತೆ ಉಕ್ಕಿ ಹರಿಯಿತು.