SearchBrowseAboutContactDonate
Page Preview
Page 37
Loading...
Download File
Download File
Page Text
________________ & ೨ ಯಶೋಧರ ಚರಿತೆ ಗುರು ಬಿಟ್ಟ ರಾಜ್ಯಲಕ್ಷ್ಮಿ ಗೆ | ವರನಾದೆ ಕಷ್ಟಮೆಲೆ ಯಶೋಧರ ನಿನೊಳ್ ನೆರೆದಿರ್ಪುದಲ್ಲದೆಂಬಂ ತಿರೆ ಪೋದಳ್ ಕೀರ್ತಿಕಾಂತೆ ದೆಸೆಯಂತುವರಂ ಅಳುರ್ವ ನಿಜವಿಜಯ ತೇಜೋ ಬಳದಿಂ ಪರಪರ ಗಂಡಗಾಳಿಕೆಯನಂ ಕಳೆದ ನೃವತಿ ವಸುಂಧರೆ | ಪೊಳಪಂ ತಳೆದೆಯೆ ರಾಗಮಂ ಬೀಜುವಿನಂ ಅಳವಡೆ ಭುಜದೋಳ್ ಮೃಗಮದ ತಿಳಕದವೋಲ್ ಸಕಲಧರಣಿ ಯೌವನ ಭೂಪಾ ವಳಿಯೆನೆ ತಿರ್ದುವನಾ ನೃಪ ಕುಳಶೇಖರನಮೃತಮತಿಯ ಮುಖದರ್ಪಣದೊಳ್ ಅವನಿಪನೊರ್ಮೆ ಸಭಾಮಣಿ ಭವನದಿನಂಬರ ತರಂಗಿಣೀ ಪುಳಿನಮನೇ ಅವ ಹಂಸನಂತೆ ಶಯಾ ಧವಳ ಪ್ರಾಸಾದತಳಮನೇಲಿದನರಸಾ ಪರಿಮಳದ ತೂಬನೆತ್ತಿದ ನರಲಂಬಂ ಜನಮನೋವನಕ್ಕೆನೆ ಕಾಳಾ ಗರುಧೂಮಲತಿಕೆ ಜಾಲಾಂ ದರದಿಂದೊಗೆದುದು ಕಪೋತ ಪಕ್ಷಚ್ಚುರಿತಂ ನೆರವು ಪಡೆದಳು. ೧೫. “ಅಯ್ಯೋ, ಕಷ್ಟವೇ ! ತಂದೆ ತೊಲಗಿಸಿ ಬಿಟ್ಟ ರಾಜ್ಯಲಕ್ಷ್ಮಿಯನ್ನು ನೀನು ಕೈಹಿಡಿದೆಯಲ್ಲಾ ! ನಿನ್ನಂಥವನ ಒಡನಾಟವು ನನಗೆ ಸಲ್ಲದು” ಎಂಬಂತೆ ಯಶೋಧರನನ್ನು ಬಿಟ್ಟು ದಿಗಂತದವರೆಗೂ ಹೋದಳು, ಅವನ ಕೀರ್ತಿ ಕಾಮಿನಿ.೭೬ ೧೬. ಅವನ ವಿಜಯದ ತೇಜಸ್ಸು ಎಲ್ಲ ಕಡೆಗೂ ಪಸರಿಸಿತು. ಇದರ ಬಲದಿಂದ ಅನ್ಯ ನರಪತಿಗಳ ಗಂಡಗಾಳಿಕೆಯೆಲ್ಲ ಕಳೆದು ವಸುಂಧರೆ ಉಜ್ವಲತೆಯನ್ನು ತಾಳಿಕೊಂಡಳು ; ಯಶೋಧರನಲ್ಲಿ ಬಹಳ ಅನುರಾಗವನ್ನು ಬೀರಿದಳು. ೧೭. ಇಡೀ ಭೂಮಂಡಲವು ಅವನ ಹೆಗಲೇರಿತು. ಆದರೆ ಆ ರಾಜಕುಲ ಶೇಖರನಿಗೆ ಅದು ಕಸ್ತೂರಿಯ ತಿಲಕದಂತೆ ಅಲಂಕಾರಪ್ರಾಯವಾಗಿತ್ತೇ ಹೊರತು, ಹೊರೆಯಾಗಿರಲಿಲ್ಲ. ತಾರುಣ್ಯದ ಆಭರಣದಂತೆ ಒದಗಿದ ಭೂಮಿಯನ್ನು ಅವನು ಅಮೃತಮತಿಯ ಮುಖದರ್ಪಣದಲ್ಲಿ ತಿದ್ದಿಕೊಳ್ಳುವನು. ೧೮. ಒಮ್ಮೆ ಅರಸ ಯಶೋಧರನು ರತ್ನಖಚಿತವಾದ ಸಭಾಮಂದಿರದಲ್ಲಿದ್ದವನು, ಅಲ್ಲಿಂದೆದ್ದು ಆಕಾಶ ಗಂಗೆಯ ಪುಲಿನಸ್ತಳಕ್ಕೆ ಏರಿ ಹೋಗುವ ಹಂಸದಂತೆ ಶುಭ್ರವಾದ ಪ್ರಾಸಾದವನ್ನೇರಿ ತನ್ನ ಶಯ್ಯಾಗೃಹವನ್ನು ಪ್ರವೇಶಿಸಿದನು. ೧೯. ಕಾಮನು ಜನಮನೋವನಕ್ಕೆ ಪರಿಮಳದ ತೂಬನ್ನು ತೆರೆದು ಬಿಟ್ಟನೋ ಎಂಬಂತೆ ಕಾಳಾಗರುವಿನ ಹೊಗೆಬಳ್ಳಿ ಕಿಟಕಿಯಿಂದ ಹೊರಹಬ್ಬುತ್ತಾ ಇತ್ತು ಆ ಶಯ್ಯಾಗೃಹದಿಂದ. ಆ ಹೊಗೆಯು ಪಾರಿವಾಳದ ರೆಕ್ಕೆಯಂತೆ
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy