________________
ಎರಡನೆಯ ಅವತಾರ
ಅಗುಬಡಪುವ ಕಾಲದ ಗರ ಟಿಗೆಯೋಳ್ ಪಚಿತಚೋರನಂ ತೋಳುವ ದೀ ವಿಗೆಯೆನೆ ಸಂಮುಖಮಾಯೊ ಲಗದೊಳ್ ನಿರ್ದಿಷ್ಟ ಪಳಿತಚಿಕುರಂ ಮುಕುರಂ ನರೆಯೆಂಬ ಹೊಲಸು ಮೊಗಮೆಂ ಬರಮನೆಯಂ ಪೊಕೊಡಂಗನಾಲೋಕನಮೆಂ ಬರಸೆಂತಿರ್ದಷನೆಂದಾ ನರನಾಥಂ ತೋಱದನಖಿಳವಿಷಯಾಮಿಷಮಂ
ಧರಣೀಭಾರಕ್ಕೆ ಯಶೋ ಧರನನೊಡಂಬಡಿಸಿ ನೂರ್ವರರಸುಗಳೊಡನಾ ದರದಿಂ ಕಂಬಂದಪ್ಪಿದ ಕರಿಯಂತೆ ತಪೋವನಕ್ಕೆ ನಡೆದನಿಳೇಶಂ ಧರಣೀಗಣಿಕೆ ಯಶ್‌ಘನ ವಿರಹದ ಪರಿತಾಪಮಂ ಯಶೋಧರನ ಯಶೋ ಹರಿಚಂದನಚರ್ಚೆಯಿನು
ದುರ ದಾನಾಸಾರಸೇಕದಿಂ ಮಗ್ಗಿಸಿದ ಬಂಗಾರದ ರತ್ನಾಭರಣವನ್ನು ಅವನ ಮೇಲೆ ಹೊರಿಸಿ ತಾನು ಮನ್ಯಥಾನುರಾಗದ ಕಡಲಲ್ಲಿ ಓಲಾಡುವುದಕ್ಕೆ ಅವಕಾಶಮಾಡಿಕೊಂಡನು. ೧೧. ಕಳ್ಳನು ಕನ್ನವನ್ನು ಕೊರೆದು ಸಿಕ್ಕಿ ಬೀಳುವ ಸಂದರ್ಭವು ಬಂದಿತು ; ಆಗ ಅವನನ್ನು ಅನಿರೀಕ್ಷಿತವಾಗಿ ಕಾಣಿಸಿ ಕೊಡುವುದು ಒಂದು ಸಣ್ಣ ದೀಪದ ಬೆಳಕು, ಶೃಂಗಾರರಸಮಗ್ನನಾಗಿ ತಪ್ಪುದಾರಿ ಹಿಡಿದಿದ್ದ ಯಶೌಘನೂ ಸರಿದಾರಿಗೆ ಬರುವ ಸುಸಂದರ್ಭವು ತನ್ನಿಂದ ತಾನೇ ಬಂದಂತೆ, ಒಂದು ದಿನ ಅವನು ರಾಜಸಭೆಯಲ್ಲಿ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿದಾಗ ತನ್ನ ಕೂದಲು ನರೆತುದು ಕಾಣಿಸಿತು. ೧೨. ವಿಚಾರದ ಬೆಳಕಿನಲ್ಲಿ ಅವನು ಬೇರೊಂದನ್ನೇ ಕಂಡನು. “ಅರಮನೆಯಂತಿರುವ ತನ್ನ ಮುಖದೊಳಕ್ಕೆ ನರೆಯೆಂಬ ಕಾಡು ಪಾರಿವಾಳವು ಹೊಕ್ಕು ಅಮಂಗಲವನ್ನುಂಟುಮಾಡಿದೆ. ಈ ಅರಮನೆಯಲ್ಲಿ ಕಾಮಿನೀದರ್ಶನ ಎಂಬ ಅರಸನು ಉಳಿಯುವುದಾದರೂ ಹೇಗೆ ?” ಈ ಯೋಚನೆ ಬಂದ ಒಡನೆ ಯಶೌಘನು ಎಲ್ಲ ಇಂದ್ರಿಯಾಕರ್ಷಣೆಗಳನ್ನೂ ಪರಿತ್ಯಾಗ ಮಾಡಿದನು. ೧೩. ಆದುದರಿಂದ ಭೂಮಿಯ ಭಾರವನ್ನು ವಹಿಸಿಕೊಳ್ಳುವಂತೆ ಯಶೋಧರನನ್ನು ಒಪ್ಪಿಸಿದನು. ಈಗ ಯಶೌಘನಿಗೆ ಕಂಬಕ್ಕೆ ಕಟ್ಟಿ ಹಾಕಿದ ಆನೆಗೆ ಬಿಡುಗಡೆ ದೊರೆತಂತೆ ಸಂತೋಷವಾಯಿತು. ಅವನು ತಪೋವನಕ್ಕೆ ತೆರಳಿದನು. ಅವನನ್ನು ಹಿಂಬಾಲಿಸಿ ಬೇರೆ ನೂರ್ವರು ರಾಜರೂ ಹೊರಟು ಹೋದರು. ೧೪. ಯಶೌಘನು ಹೊರಟುಹೋದುದರಿಂದ ಭೂದೇವಿಗೆ ವಿರಹದ ಸಂತಾಪ ಹೆಚ್ಚಿ ಕೊಂಡಿತು. ಈ ಉರಿಯನ್ನು ಉಪಶಮಿಸುವುದಕ್ಕಾಗಿ ಅವಳು ಯಶೋಧರನ ಕೀರ್ತಿ ಯೆಂಬ ಹರಿಚಂದನದ ಲೇಪವನ್ನು ಬಳಿದುಕೊಂಡಳು ; ಮಾತ್ರವಲ್ಲ, ಯಶೋಧರನು ನಿರಂತರವೂ ದಾನ ಮಾಡುವಾಗ ಹೊಯುವ ನಿರಂತರವಾದ ನೀರ ಮಳೆಯಿಂದಲೂ