________________
0.
ಯಶೋಧರ ಚರಿತೆ
ನೋಡುವ ಕಣ್ಣಳ ಸಿರಿ ಮಾತಾಡುವ ಬಾಯ್ಸಳ ರಸಾಯನಂ ಸಂತಸದಿಂ ಕೂಡುವ ತೋಳಳ ಪುಣ್ಯಂ ನಾಡಾಡಿಯ ರೂಪ ಕುವರ ವಿದ್ಯಾಧರನಾ ಎಳವೆಟ್ಟಿಂಗಳ್ ನಾಗಣೆ ಮಳಯಾನಿಳನಿಲ್ಲಿ ಮೂವರೊಳಗಾರೊ ಕುತೂಹಳಮಾದಪುದೆನ್ನದ ಕಸ್ಕೊಳವೆ ಯಶೋಧರಕುಮಾರನಂ ಕಾಣಲೊಡಂ ಪರಪರ ರಾಜ್ಯಲಕ್ಷ್ಮಿ ಯ ಕುರುಳಾಕರ್ಷಣ ನೀಳ ತೋಳ್ ಮೆಅಶವುದು ಪೇ ರುರದೊಳ್ ನೆಲಸಿದ ಲಕ್ಷ್ಮಿ ಕರಿಣಿಗೆ ಬಾಳಿಸಿದ ರನ್ನದಮಳಂಬದವೊಲ್ ಅಮೃತಮತಿ ಗಡ ಯಶೋಧರ ನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂ ಸುಮನೋಬಾಣಂ ತದ್ರೂ ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕು೦ ಕವಚಹರನಾದ ತನಯನೂ ಭವನೀಭರಮೆಂಬ ಕನಕಮಣಿಮಂಡನ ಭಾ ರವನಿಟಿಪಿ ನೀಡುಮೋಲಾ ಡುವನಂಗಜರಾಗಶರಧಿಯೊಳಗೆ ಯಶೌಘಂ
ಜನಮೋಹನ ಬಾಣವು ಹುಟ್ಟುವಂತೆ೩೦, ೬. ಕುಮಾರ ಯಶೋಧರನು ಸೌಂದರ್ಯದಲ್ಲಿ ಅಸಾಮಾನ್ಯವಾಗಿ ವಿದ್ಯಾಧರನಂತೆ ಅತ್ಯಾಕರ್ಷಕನಾಗಿದ್ದನು. ಅವನನ್ನು ನೋಡುವುದೆಂದರೆ ಕಣ್ಣುಗಳಿಗೆ ಭಾಗ್ಯ. ಅವನೊಡನೆ ಮಾತಾಡುವುದು ಬಾಯಿಗೆ ಅತ್ಯಂತ ಮಧುರವಾದ ರಸಾಯನ. ಅವನನ್ನು ಎತ್ತಿ ಮುದ್ದಾಡುವುದು ತೋಳುಗಳ ಪುಣ್ಯ. ೭. ಅವನನ್ನು ಕಾಣುವಾಗ ಇದೇನು ಬಾಲ ಚಂದ್ರನೋ ಮನ್ಮಥನ ಬಾಣವೋ ಅಥವಾ ಮಲಯಮಾರುತನೋ ಎಂಬ ಕುತೂಹಲವುಂಟಾಗುತ್ತಿತ್ತು, ನೋಡಿದ ಎಲ್ಲರಿಗೂ. ೮. ಅವನ ತೋಳುಗಳೆರಡೂ - ದೀರ್ಘವಾಗಿ ನೀಡಿಕೊಂಡಿದ್ದವು, ಶತ್ರುರಾಜರ ರಾಜ್ಯಲಕ್ಷ್ಮಿ ಯ ಮುಡಿಯನ್ನು ಹಿಡಿದೆಳೆಯುವ ಕಾರ್ಯದಲ್ಲಿ ಅವು ತೊಡಗಿದುದರಿಂದ ಅವನ ವಿಶಾಲವಾದ ಎದೆಯಲ್ಲಿ ನೆಲಸಿದ ಲಕ್ಷ್ಮಿ ಕರಿಣಿ (ಲಕ್ಷ್ಮಿ ಯೆಂಬ ಹೆಣ್ಣಾನೆಯನ್ನು ಬೇರೆಡೆಗೆ ಹೋಗದಂತೆ ತಡೆಯಲು ಇಕ್ಕಡೆಗಳಲ್ಲೂ ಎರಡು ರತ್ನದ ಕಂಬಗಳನ್ನು ನೆಟ್ಟಂತೆ ಅವನ ಬಾಹುಗಳು ಮೆರೆಯು ತ್ತಿದ್ದವು. ೯. ಯಶೋಧರನ ಮನದನ್ನೆಯೇ ಅಮೃತಮತಿ, ಬೇಟೆಗಾರನಾದ ಕಾಮನಿಗೆ ಆ ಭೂಪತಿಯನ್ನು ಆಕರ್ಷಿಸಿ ಸೆರೆಹಿಡಿಯುವ ಮನಸ್ಸಾಯಿತು. ಅವನು ಅಮೃತಮತಿ ಯನ್ನೇ ದೀವವನ್ನಾಗಿ ಮಾಡಿ೩೧ ಮೋಹಗೊಳ್ಳುವಂತೆ ಮಾಡಿದನು. ಯಶೋಧರನು ಅಮೃತಮತಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದನು. ೧೦. ಕವಚವನ್ನು ಧರಿಸಿಕೊಂಡು ಮುಂದಾಗುವ ವಯಸ್ಸು ಮಗನಿಗೆ ಬಂದುದನ್ನು ಕಂಡ ಯಶೌಘನು ರಾಜ್ಯಭಾರತಿಯ