________________
ಎರಡನೆಯ ಅವತಾರ
ಆ ಕಥೆ ಮತ್ತೆಂತೆಂದೊಡಿ ಳಾಕಾಂತೆಗವಂತಿವಿಷಯಮಾಸ್ಪದವೊಲ್ ಶೋ ಭಾಕರಮಾದಳ್ ನಾ ಸಾಕುಟ್ಕಳದಂತೆ ಮೆರೆವುದುಜೇನಿಪುರಂ ಆ ಪುರದರಸಂ ನತಭೂ ಮೀಪಾಲರ ಮಕುಟಮಸ್ತಕದೆ ನಿಜತೇಜೋ ರೂಪಕಮೆ ಪದರಾಗದ ದೀಪದವೊಲ್ ಮಜೀವಿನಂ ಯಶಘಂ ಮೆಜಿವಂ
ದೊರೆವಡೆದ ಯಶಘನ ಭೂ ವರತಿಲಕನ ಕಣ್ಣಳಂಗರಕ್ಕರ್ ಮನಮಾ ಭರಣಂ ರಾಜ್ಯಶ್ರೀ ಸಹ ಚರಿಯೆನೆ ಸಂದತ್ತು ಚಂದ್ರಮತಿಗರಸಿತನಂ
ಭರದಿಂದವರ್ಗಳ ಬೇಂಟಮ್ ನಿರುಳಿಂದು ಪಗಲ್ ವಸಂತನಿರುಳುಂ ಪಗಲುಂ ಸುರಭಿಶರನಂಗಜಾತಂ ಗರಟಗೆ ಮೆಯಾಪು ಮೇಜಿತೆಯೆ ಬಿಡದೋಲಗಿಪರ್
ಅನಿತೆಸೆವ ಚಂದ್ರಮತಿಗಂ ಜನಪತಿಗಂ ಪುಟ್ಟಿದಂ ಯಶೋಧರನೆಂಬಂ ಜನಮೋಹಬಾಣಂ ಕ ರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೋಲ್
೧. ಆ ಕಥೆಯು ಹೀಗಿದೆ: ಭೂದೇವಿಯ ಮುಖದಂತೆ ಅವಂತಿದೇಶವು ಶೋಭಿಸುತ್ತಿದೆ. ಅದರಲ್ಲಿ ಮುಗುಳುಮೂಗಿನಂತೆ ಮೆರೆಯುತ್ತದೆ ಉಜ್ಜಯನಿಪುರ, ೨, ಆ ನಗರಕ್ಕೆ ಅರಸನಾಗಿ ಯಶೌಘನು ಮೆರೆಯುತ್ತಿದ್ದನು. ಅನೇಕ ಭೂಪಾಲಕರು ಅವನಿಗೆ ನಮಸ್ಕರಿಸುವಾಗ ಅವರ ಕಿರೀಟವುಳ್ಳ ತಲೆಗಳಲ್ಲಿ ಯಶೌಘನ ತೇಜಸ್ಸೇ ಪದ್ಯರಾಗದ ದೀಪದಂತೆ ಬೆಳಗುತ್ತಿತ್ತು. ೩. ಹೆಸರುಗೊಂಡ ರಾಜರಲ್ಲಿ ತಿಲಕಪ್ರಾಯನಾದ ಯಶೌಘನ ರಾಣಿ ಚಂದ್ರಮತಿ, ಆತನ ಕಣ್ಣುಗಳೇ ಅಂಗರಕ್ಷಕರಂತೆ ಅವಳನ್ನು ಕಾಪಾಡುತ್ತವೆ. ಆತನ ಮನಸ್ಸು ಆಕೆಗೆ ಆಭರಣವಾಗಿದೆ. ರಾಜ್ಯಲಕ್ಷ್ಮಿ ಯೇ ಅವಳ ಒಡನಾಡಿಯಾಗಿದ್ದಾಳೆ ಎಂದ ಮೇಲೆ ಅವಳಿಗೂ ಅರಸಿತನವು ಸರಿಯಾಗಿ ನೆಲೆಗೊಂಡಿದೆ. ೪. ರಾತ್ರಿಯ ಹೊತ್ತು ಚಂದ್ರನೂ, ಹಗಲಿನ ಹೊತ್ತು ವಸಂತನೂ ಸರದಿ ಪ್ರಕಾರ, ಅಂಗರಕ್ಷಕರಾಗಿದ್ದು ಅವರ ಅನುರಾಗವನ್ನು ಕಾಪಾಡುತ್ತಿದ್ದಾರೆ. ಹಗಲೂ ರಾತ್ರಿಯೂ ಕಾಮನೇ ಅವರ ಅನುರಾಗದ ಸೇವೆಯನ್ನು ಮಾಡುತ್ತಿದ್ದಾನೆ. ೫. ಅಷ್ಟೊಂದು ಪ್ರೇಮದಿಂದ ಶೋಭಿಸುತ್ತಿದ್ದ ಚಂದ್ರಮತಿಗೂ ಯಶೌಘನಿಗೂ ಯಶೋಧರನೆಂಬುವನು ಮಗನಾಗಿ ಹುಟ್ಟಿದನು, ಕಬ್ಬಿನ ಬಿಲ್ಲಿಗೂ ನನೆಯ ಹಗ್ಗಕ್ಕೂ