________________
ಯಶೋಧರ ಚರಿತೆ
ಶ್ರೀಮತೀರ್ಥಾಧಿಪನ ವದನಾಂಭೋಜದಿಂ ಸರ್ವಭಾಷಾ ಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೊಮಾರ್ಗದಿಂ ಮ ತಾಮುಂ ಕಂಡುಂಡುದ ಕಥೆಯಂ ಪೇಷೆಂ ಕೇಳಿಮೆಂದಾ ಭೂಮೀಶಂಗಂದಭಯರುಚಿಯಿಂತೆಂದು ಪೇಜಲ್ ತಗುಬ್ಬಿಂ ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ ರಭಸಮತಿಗೆ ಸಯ್ಯಂ ಪೇಟ್ಟು ಧರ್ಮಕ್ಕೆ ತಂದೀ ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ ಪ್ರಭುಸಭೆಗೆಸೆದಿರ್ಕು೦ ಮಂಗಳಂ ಶ್ರೀವಿಲಾಸಂ
ನೀನು ಹೇಗೆ ಕೇಳಿದೆಯೋ ಅದೇ ರೀತಿಯಲ್ಲಿಯೇ ಮನಸ್ಸು ಕೊಟ್ಟು ಆಲಿಸು. ನಾನು ಹೇಳಲಿರುವ ಒಳ್ಳೆಯ ಕಥೆ ನಿನಗೆ ಜಯಶ್ರೀಯನ್ನೂ ಮುಕ್ತಿಕಾಂತೆಯನ್ನೂ ಕೊಡುವುದರಲ್ಲಿ ಸಂದೇಹವಿಲ್ಲ. ೭೧. ಶ್ರೀಮತೀರ್ಥಂಕರನ ಮುಖಕಮಲದಿಂದ ಹೊರಟಿತು ಮಂಗಲವಚನ. ಅದು ಎಲ್ಲ ಭಾಷೆಗಳಿಗೂ ಸಮಾನವಾದುದು. ಆ ವಚನಮಾರ್ಗವಾಗಿಯೇ, ನಾವು ಕಂಡು ಉಂಡುದರ ಕಥೆಯನ್ನು ಹೇಳುತ್ತೇವೆ, ಕೇಳಿರಿ” ಎನ್ನುತ್ತ ಅಭಯರುಚಿಕುಮಾರನು ಮಾರಿದತ್ತ ರಾಜನಿಗೆ ಕಥೆಯನ್ನು ಹೇಳಲಾರಂಭಿಸಿದನು. ೭೨. ಹಿಂಸೆಯಲ್ಲೇ ಮನಸ್ಸು ಮುಂದಾಗುತ್ತಿದ್ದ ಮಾರಿದತ್ತನಿಗೆ ಅಭಯರುಚಿಕುಮಾರನು ಪುಣ್ಯದ ವಿಷಯವನ್ನು ಕೇಳಿ ಅವನನ್ನು ಧರ್ಮದ ದಾರಿಗೆ ತಂದನು. ಇಂತಹ ಈ ಮಂಗಲಕರವಾದ ಕಥೆಯನ್ನು ಅತ್ಯಾನಂದದಿಂದ ಕೇಳುವ ಭವ್ಯಪ್ರಭುಸಭೆಗೆ ಮಂಗಲ ಸಂಪದ್ವಿಲಾಸವು ಶೋಭಿಸುತ್ತದೆ.೨೮