________________
ಒಂದನೆಯ ಅವತಾರ.
ಗುಣಿಗಳ ಗುಣರತ್ಮವಿಭೂ ಷಣಮೆಸೆವುದೆ ವಿಕಳಹೃದಯರಾದರ್ಗೆ ನೃಪಾ ಗ್ರಣಿ ಪೇಟಿಕ್ ತುಪ್ಪದ ದ ರ್ಪಣದೊಳ್ ಪಜ್ಜಳಿಸಲಾರ್ಪುದೇ ಪ್ರತಿಬಿಂಬ ಇಂತೆಂಬುದುಮಾ ಕುವರನ ದಂತಪ್ರಭೆಯೆಂಬ ಶೀತಕರನುದಯದಘ ಧ್ವಾಂತೌಘಮಧುಪಮಾಲಿಕೆ ಯಂ ತೊಲಗಿಸಿ ಮುಗಿದುದವನ ಕರಸರಸಿರುಹಂ ಧನಮಂ ಕಂಡ ದರಿದ್ರನ ಮನದವೊಲೆಗಿದುವು ಪರಿಜನಂಗಳ ನೊಸಲಾ ವಿನಯನಿಧಿಗಾ ಕುಮಾರಕ ನನುರಾಗದೆ ಮಾರಿದತ್ತವಿಭುಗಿಂತೆಂದಂ ಭಲರೆ ನೃಪೇಂದ್ರಾ ದಯೆಯೊಳ್ ನೆಲೆಗೊಳಿಸಿದೆ ಮನಮನಮಮ ನೀನ್ ಕೇಳುದು ಸ ಉಲಮಾಯು ಧರ್ಮಪಥದೊಳ್ ಸಲೆ ಸಂದಪ ಕಾಲಲಬ್ಬಿ ಪೊಲಗೆಡಿಸುವುದೇ ಎಂತು ಬೆಸಗೊಂಡೆ ಬೆಸಗೊಂ ಡಂತಿರೆ ದತ್ತಾವಧಾನನಾಗು ಜಯಶ್ರೀ ಕಾಂತಿಯುಮಂ ಪರಮಶ್ರೀ ಕಾಂತೆಯುಮಂ ನಿನಗೆ ಕುಡುಗುಮೀ ಸತ್ಕಥನಂ
- ೭೦ ಯಾವುದು ಪಥ್ಯವೆನಿಸುವುದೋ ಅದನ್ನು ನೀನು ನೆರವೇರಿಸಬಹುದು. ನಮಗಂತೂ ಬುಡದಿಂದ ತುದಿಯವರೆಗೆ ಎಲ್ಲ ವಿಷಯವೂ ಅಂಗೈನೆಲ್ಲಿಯಾಗಿದೆ. ಭವಬಂಧನವೇ ನಮ್ಮನ್ನು ಬಗೆ ಬಗೆಯ ದುಃಖಗಳಿಗೆ ಈಡುಮಾಡಿದೆ. ೬೬. ಮಹಾರಾಜ, ಗುಣವಂತರ ಗುಣ ರತ್ನಾಭರಣಗಳು, ಕೆಟ್ಟ ಹೃದಯವುಳ್ಳವರಿಗೆ ಸೊಗಸಾಗಿ ಕಾಣಲಾರವು. ಕನ್ನಡಿಗೆ ಜಿಡ್ಡು ತಾಗಿದ್ದರೆ ಅದರಲ್ಲಿ ಪ್ರತಿಬಿಂಬವು ಉಜ್ವಲವಾಗಿ ಕಾಣುವುದೆ ? ಎಂದು ಹೇಳಿದನು ಅಭಯರುಚಿ. ೬೭. ಒಡನೆಯೇ ಮಾರಿದತ್ತನ ಕರಕಮಲವು ಮುಚ್ಚಿಕೊಂಡಿತು. ಅಭಯರುಚಿ ಕುಮಾರನು ಮಾತಾಡುತ್ತಿದ್ದಾಗ ಅವನ ಹಲ್ಲಿನ ಕಾಂತಿ ಹಬ್ಬಿ ಚಂದ್ರೋದಯವಾಗುವಂತಾಯಿತು. ಆಗ ಪಾಪದ ಕತ್ತಲೆಯ ಮೊತ್ತವೆಲ್ಲ ಎತ್ತೆತ್ತಲೋ ಮಾಯವಾಯಿತು. ತಾವರೆ ಮುಚ್ಚಿಕೊಳ್ಳುವಾಗ ಭ್ರಮರಗಳು ಎದ್ದು ಹೋಗುವಂತೆ ಮಾರಿದತ್ತನ ಪಾಪಗಳು ತೊಲಗಿದವು.೨೬ ೬೮. ಧನವನ್ನು ಕಂಡಾಗ ದರಿದ್ರನ ಮನಸ್ಸು ಅದಕ್ಕೆರಗುತ್ತದೆ. ಹಾಗೆಯೇ ರಾಜನ ಸೇವಕ ಜನರೆಲ್ಲರ ಲಲಾಟಗಳೂ ಆ ವಿನಯನಿಧಿಯಾದ ಅಭಯರುಚಿಗೆ ಮಣಿದವು. ಆಗ ಆ ಕುಮಾರನು ಮಾರಿದತ್ತನಿಗೆ ಪ್ರೀತಿಪೂರ್ವಕವಾಗಿ ಹೀಗೆಂದನು. ೬೯. “ಶಹಭಾಸ್ ರಾಜೇಂದ್ರ ! ನಿನ್ನ ಮನಸ್ಸನ್ನು ಈಗಲೀಗ ದಯೆಯಲ್ಲಿ ನೆಲೆಗೊಳಿಸಿದೆ. ಅಹಹಾ ! ನೀನು ಪ್ರಶ್ನೆ ಮಾಡಿದುದು ಒಳ್ಳೆಯದಕ್ಕೆ ಆಯಿತು. ಇನ್ನು ಮುಂದೆ ನೀನು ಧರ್ಮಮಾರ್ಗದಲ್ಲಿ ಸರಿಯಾಗಿ ಸಾಗಲಿರುವೆ. ಕಾಲಲಬಿ ದಾರಿತಪ್ಪಿಸುವುದೇ ?೨೭ ೭೦. ಮಹಾರಾಜಾ,