________________
ಯಶೋಧರ ಚರಿತೆ
ಅದು ಪಿರಿಯ ಸಿರಿಯ ಬಾವಿದಲದು ಚಾಗದ ಭೋಗದಾಗರಂ ಸಕಲಸುಖಕದು ಜನ್ಮಭೂಮಿಯೆನಿಸಿದು ದದನಾಳ್ವಂ ಮಾರಿದತ್ತನೆಂಬ ನೃಪಾಲಂ ಆ ಪುರದ ತೆಂಕವಂಕದೊ ಛಾಪೊತ್ತುಮನೇಕ ಜೀವಹತಿ ತನಗೆ ಸುಖೋದೀಪನಮೆನಿಸುವ ಪಾಪಕ ಳಾಪಂಡಿತ ಚಂಡಮಾರಿದೇವತೆಯಿರ್ಪಲ್
ತನಗರಸುವೆರಸು ಪುರಜನ ಮನಿತುಮಿಷಂ ಚೈತ್ರಮೆಂಬ ತಿಂಗಳೊಳಖಿಳಾರ್ಚನೆವೆರಸು ಜಾತ್ರೆ ನೆರೆಯದೆ ಡನಿತುಮನೊರ್ಮೊದಲೆ ವಿಳಯದೊಳ್ ನೆರವಿಸುವಳ್
ಆ ದೇವಿಯ ಜಾತ್ರೆಗೆ ಮೊಳೆ ವೋದೆಳವೆತ ಸಿರದ ಗಾಳಮುರಿಯುಯ್ಯಲೆ ಕೈ ವೊದಗುಕೆ ಕೋಕಿಲಧ್ವನಿ ಮೂದಲೆಯುಲಿಯಾಗೆ ಬಂದುದಂದು ಬಸಂತಂ
ಸಿಸಿರಮನೆ ಪಡೆದು ಪರಕೆಗೆ ವಸಂತನಲರ್ವೊದ ಮಾವಿನಡಿಮಂಚಿಕೆಯೊಳ್ ಕುಸುರಿದದಡಗಿನಂತಿ ಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳಳ್
೩೭ ಪಡೆದು ಸೂರ್ಯಮಂಡಲವನ್ನೇ ಅಪಹಾಸ್ಯ ಮಾಡುತ್ತವೆ.೧೪ ೩೩. ರಾಜಪುರವು ಹೀಗೆ ಸಕಲ ಸಂಪತ್ಸಮೃದ್ಧಿಗೂ ಜನ್ಮಭೂಮಿಯಾಗಿ ತ್ಯಾಗದ ತವರು, ಭೋಗದ ಭವನ ಎಂಬಂತಿತ್ತು. ಅದನ್ನು ಆಳುವವನು ಮಾರಿದತ್ತ ಎಂಬ ಅರಸ. ೩೪. ಆ ರಾಜಪುರದ ದಕ್ಷಿಣ ಪಾರ್ಶ್ವದಲ್ಲಿ ನೆಲಸಿದ್ದಾಳೆ ಚಂಡಮಾರಿ ಎಂಬ ಹೆಸರಿನ ದೇವತೆ. ಯಾವಾಗಲೂ ಅನೇಕ ಜೀವಿಗಳ ಹತ್ಯೆಯೇ ಅವಳಿಗೆ ಸುಖೋದ್ದೀಪನ ಎನಿಸಿದೆ. ಪಾಪದ ಕಲೆಯಲ್ಲಿ ಒಳ್ಳೆಯ ಪಾಂಡಿತ್ಯ ಅವಳದು. ೩೫, ಆ ನಗರದ ಜನರೆಲ್ಲರೂ, ತಮ್ಮ ರಾಜನನ್ನು ಮುಂದುಮಾಡಿಕೊಂಡು, ಆಶ್ವಯುಜ ಮತ್ತು ಚೈತ್ರ ಮಾಸಗಳಲ್ಲಿ ಅಲ್ಲಿ ಜಾತ್ರೆ ಸೇರಬೇಕು ; ಎಲ್ಲ ಬಗೆಯ ಪೂಜೆಗಳನ್ನೂ ಮಾಡಬೇಕು. ಹಾಗೆ ನೆರವೇರಿಸದಿದ್ದಲ್ಲಿ ಆ ದೇವತೆ ಅಷ್ಟು ಮಂದಿಯನ್ನೂ ಒಮ್ಮೆಲೇ ಸಂಪೂರ್ಣ ಧ್ವಂಸಗೊಳಿಸಿಯಾಳು. ೩೬. ಒಮ್ಮೆ ಚೈತ್ರಮಾಸವು ಬಂದಿತು. ಮೂಡಿ ಬಂದ ಬಾಲ ಚಂದ್ರನೇ ದೇವಿಯ ಅರ್ಚನೆಗಾಗಿ ಬಳಸುವ ತಲೆಯ ಗಾಳದಂತಿರಲು, ಚಿಗುರಿದ ಅಶೋಕದ ಮರವು ಬೆಂಕಿಯ ಉಯ್ಯಾಲೆಯಾಗಿರಲು, ಕೋಗಿಲೆಗಳ ಕೂಗುವ ಧ್ವನಿಯೇ ಮೂದಲೆಯ ಮಾತಾಗಿರಲು ವಸಂತ ಋತುವು ಬಂದಿತು.೧೫ ೩೭. ಆ ದೇವಿಗೆ ಹರಕೆಯೊಪ್ಪಿಸುವುದಕ್ಕಾಗಿ ಶಿಶಿರವನ್ನೇ ಹಿಡಿದು ಹೂಬಿಟ್ಟ ಮಾವಿನ ಮರದ ಅಡಿ ಮಂಚಿಕೆಯಲ್ಲಿ ಅವನನ್ನು ಕೊಚ್ಚಿ ಕೊಚ್ಚಿ ಕತ್ತರಿಸಿ ಹಾಕಿದ ಮಾಂಸದ