SearchBrowseAboutContactDonate
Page Preview
Page 24
Loading...
Download File
Download File
Page Text
________________ ಒಂದನೆಯ ಅವತಾರ ಅದರೊಳಗೆ ಮೇಲೆದ ಮಣಿ ಮಾಡವ ಲೋವೆಗಳಲ್ಲಿ ಕೋದ ಪೊಸಮುತ್ತಿನ ಮೊ ತದ ಬೆಳಗು ಚಂದನಾಲೇಪದ ಪದನಂ ಕುಡುವುದುರಿವ ರವಿಗೆಡವಗಲೊಳ್ ಕಾರಿರುಳೊಳಮೇಳವಿಸಿಲಂ ಪೂರಂ ಪರಿಯಿಪುವು ಬೀದಿಯೊಳ್ ನಿಜರುಚಿಯಿಂ ಹೀರೆಯ ಹೂವಿನ ಬಣ್ಣದ ನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್ ನೆಲೆಮಾಡದೊಳೆಡೆಯಾಡುವ ಕಲಹಂಸಾಲಸವಿಳಾಸವತಿಯರ ಮುಖಮಂಡಲಕೆ ಸರಿಯಾಗಲಾಚಿದೆ ಸಲೆ ಮಾಟ್ಟಿಂ ಚಂದ್ರನಿಂತು ಚಾಂದ್ರಾಯಣಮಂ ಪಗಲನಿರುಳ್ ನಿಜರುಚಿಯಿಂ ಮಿಗಿಸುವ ಜಿನಭವನದರುಣಮಣಿ ಕಲಶಂಗಳ್ ನಗುವುವು ಕೇತುಗಳಿಂ ಕೇತಂಗಳೊಳ್ ಕೆಳಗೊಂಡು ನಿಂದು ರವಿಮಂಡಲಮಂ ಪ್ರಾಕಾರವಾಗಿ ಪ್ರಕಾಶಿಸುತ್ತದೆ. ಒಟ್ಟಿನಲ್ಲಿ ರಾಜಪುರವು ಜಂಬೂದ್ವೀಪದ ಸಾರವನ್ನೆಲ್ಲ ಇಲ್ಲಿಯೇ ಶೇಖರಿಸಿಟ್ಟಿದ್ದಾರೆಂಬಂತೆ ಶೋಭಿಸುತ್ತದೆ. ೨೯. ಆ , ನಗರದಲ್ಲಿ ಮೆರೆಯುತ್ತವೆ ಮಣಿಮಾಡಗಳು, ಅವುಗಳ ಲೋವೆಗಳಲ್ಲಿ ಹೊಸಮುತ್ತಿನ ಸಮುದಾಯವನ್ನೇ ಕೋದು ಅಲಂಕರಿಸಿದ್ದಾರೆ. ಅದರಿಂದ ಹಬ್ಬುತ್ತದೆ ತಂಪಾದ ಬೆಳಕು. ಈ ಬೆಳಕು ಆಕಾಶದಲ್ಲಿ ಹಗಲು ಸಂಚರಿಸುವ ಸೂರ್ಯನಿಗೆ ಶ್ರೀಗಂಧದ ತಂಪಾದ ಲೇಪನವನ್ನು ಲೇಪಿಸುವಂತಿದೆ. ೩೦. ಕಗ್ಗತ್ತಲೆಯಲ್ಲೂ 'ಬೀದಿಯಲ್ಲೆಲ್ಲ ಎಳೆಬಿಸಿಲಿನ ಪ್ರವಾಹವೇ ಹಬ್ಬಿದಂತೆ ತೋರುತ್ತದೆ. ಹೀರೆಯ ಹೂವಿನ ಬಣ್ಣದ ಚಿನ್ನದ ಕುಸುರಿಕೆಲಸದ ಉಪ್ಪರಿಗೆಗಳಿಂದ ಈ ಶುಭ್ರಕಾಂತಿ, ಪಸರಿಸುತ್ತವೆ. ೩೧. ಅತ್ಯುನ್ನತವಾದ ಆ ಉಪ್ಪರಿಗೆಗಳಲ್ಲಿ ಬೆಡಗಿಯರು ರಾಜಹಂಸಗಳಂತೆ' ಮೆಲ್ಲನೆ ಅತ್ತಿಂದಿತ್ತ ಸಂಚರಿಸುತ್ತಾ ಇದ್ದಾರೆ. ಅವರ ಮುಖಮಂಡಲಕ್ಕೆ ಸಮನಾಗಲಾರದೆ ಹೋದುದರಿಂದಲೇ ಚಂದ್ರನು ಚಾಂದ್ರಾಯಣವ್ರತವನ್ನು ಆಚರಿಸುತ್ತಾನೆ.೧೧ ೩೨. ಅನೇಕ ಜಿನಭವನಗಳು ಆ ನಗರವನ್ನು ಅಲಂಕರಿಸಿವೆ. ಅವುಗಳ ಕಲಶಗಳು ಕೆಂಪು ಹರಳುಗಳಿಂದ ನಿರ್ಮಿತವಾಗಿರುವುದರಿಂದ ರಾತ್ರಿಯ ಹೊತ್ತಿನಲ್ಲೂ ಅರುಣೋದಯದ ಹೊಂಬಣ್ಣವನ್ನು ಮೀರಿಸಿ ಬೆಳಗುತ್ತವೆ. ಜಿನಮಂದಿರಗಳ ಧ್ವಜಗಳು ಬಹಳ ಮೇಲೆ ಏರಿ ನಿಂತು ಕೇತುಗ್ರಹಗಳ ಮೈತ್ರಿಯನ್ನು
SR No.034021
Book TitleYasodhara Carita
Original Sutra AuthorN/A
AuthorJanna
PublisherKannada Sahitya Parishattu
Publication Year2015
Total Pages536
LanguageKannada
ClassificationBook_Other & Kavya
File Size16 MB
Copyright © Jain Education International. All rights reserved. | Privacy Policy