________________
20
ಶ್ರಾವಕಜನದುಪವಾಸಂ
ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗಜೀವಸ್ತುಕಥನದಿಂದು
ದ್ಭಾವಿಸಿ ಕವಿಭಾಳಲೋಚನಂ ವಿರಚಿಸಿದಂ
ಇತಿಹಾಸವೆಂಬ ವಿಮಳಾ
ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾನ್ವಿತವಾಗಿರೆ ಕಥೆ ಬುಧಸಂ ತತಿಗಕ್ಷಯಸುಖಮನೀವುದೊಂದಚ್ಚರಿಯೇ
ಪರವುದು ದುರಿತತಮಿಸ್ಸಂ ಪೊರೆಯೇರುವುದಮಳದೃಷ್ಟಿಕುವಳಯವನಮಾಚರಿಪ ಜನಕ್ಕೆ ಯಶೋಧರ
ಚರಿತ ಕಥಾಶ್ರವಣವೆಂಬ ಚಂದ್ರೋದಯದೊಳ್
ಶೀರ್ಷಾಭರಣಂ ಧರೆಗು
ತ್ಕರ್ಷ ವಿಳಾಸನದ ಭೂಮಿ ಸಕಳಜನಕ್ಕಂ ಹರ್ಷಮನೀವುದು ಭಾರತ
ವರ್ಷದಯೋಧ್ಯಾ ಸುವಿಷಯದೊಳ್ ರಾಜಪುರಂ
ಮೇರು ನೃಪ ಪ್ರಾಸಾದಂ
ವಾರಿಧಿ ನಿಜಪರಿಖೆ ವಜ್ರವೇದಿಕೆ ತತ್ತಾಕಾರಂ ಜಂಬೂದ್ವೀಪಾ
ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ
ಯಶೋಧರ ಚರಿತೆ
೨೪
೨೫
೨೬
92
೨೮
20
ಆಶ್ಚರ್ಯಪಡಬೇಕಾದುದೇ ಇಲ್ಲ. ೨೪, ಜೀವದಯಾಷ್ಟಮಿ (ನವರಾತ್ರಿಯ ಅಷ್ಟಮಿ)ಯ ಸಂದರ್ಭದಲ್ಲಿ ಶ್ರಾವಕಜನರು ಉಪವಾಸವನ್ನು ಕೈಕೊಳ್ಳುತ್ತಾರೆ. ಅವರಿಗೆ ಕಿವಿಗಳ ಮುಖಾಂತರ ಪಾರಣೆಯಾಗುವ ಸಲುವಾಗಿ ಈ ಒಂದು ಕಥೆಯಿರಲಿ ಎಂಬೆಣಿಕೆಯಿಂದ ಜನ್ನನು ಈ ಕೃತಿಯನ್ನು ರಚಿಸಿದ್ದಾನೆ. ೨೫. ಇತಿಹಾಸವೆಂಬುದು ನಿರ್ಮಲವಾದ ಅಮೃತದ ವಾರಿಧಿ. ಅದರಲ್ಲಿ ಹುಟ್ಟಿದ ಕಲ್ಪವೃಕ್ಷದಂತೆ ಈ ಕಥೆ ರಸಾತ್ಮಕವಾಗಿ ಹುಟ್ಟಿದೆ. ಇದು ಬುಧಸಮುದಾಯಕ್ಕೆ ಅಪಾರವಾದ ಸುಖವನ್ನು ಕೊಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ೨೬. ಯಶೋಧರಚರಿತವನ್ನು ಆಲಿಸುವುದೆಂದರೆ ಚಂದ್ರೋದಯವಾದಂತೆ. ಆಗ ಕತ್ತಲೆಯಂತಿರುವ ಪಾಪವೆಲ್ಲ ತೊಲಗುತ್ತದೆ. ಧರ್ಮದಲ್ಲಿ ನಿಶ್ಚಲವಾದ ನಂಬುಗೆಯೇ ನಿರ್ಮಲವಾದ ಸಮ್ಯಷ್ಟಿ, ಜೀವದಯಾಷ್ಟಮಿಯನ್ನು ಆಚರಿಸುವ ಜನರಿಗೆ ಈ ಸಮ್ಯಗ್ದರ್ಶನವು ಈ ಕಥೆಯನ್ನು ಕೇಳಿದಾಗ ನೈದಿಲೆಗಳಂತೆ ತಾನಾಗಿಯೇ ವಿಕಾಸಗೊಳ್ಳುತ್ತದೆ. ೨೭. ಭರತಖಂಡದ ಅಯೋಧ್ಯಾ ದೇಶಕ್ಕೆ ರಾಜಪುರವೇ ರಾಜಧಾನಿ, ಅದು ಇಡೀ ಲೋಕಕ್ಕೆ ಒಂದು ಶಿರೋಭೂಷಣದಂತೆ ಶೋಭಿಸುತ್ತಿತ್ತು. ಅಲ್ಲಿ ಮೇಲು ಮಟ್ಟದ ಸೊಬಗು ನೆಲೆನಿಂತು ಎಲ್ಲ ಜನರಿಗೂ ಸಂತೋಷವನ್ನು ಕೊಡುತ್ತಿತ್ತು. ೨೮. ಅರಸನ ಅರಮನೆ ಮೇರುವಿನಂತೆ ಉನ್ನತವಾಗಿಯೂ ಭವ್ಯವಾಗಿಯೂ ಮೆರೆಯುತ್ತದೆ ಆ ನಗರದಲ್ಲಿ. ಕಡಲು ಅದಕ್ಕಿರುವ ಕಂದಕದಂತೆ ಶೋಭಿಸುತ್ತದೆ. ವಜ್ರವೇದಿಕೆಯೇ ಅದರ